ಕುಶಾಲನಗರ, ಜು. ೧೩: ಪ್ರಸಕ್ತ ಪರಿಸ್ಥಿತಿಯಲ್ಲಿ ಹಿಂದೂ ಧರ್ಮದ ಮೇಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಹಿಂದೂಗಳ ಬಲಿಷ್ಠ ಸಂಘಟನೆಯ ಅವಶ್ಯಕತೆ ತುರ್ತು ಅಗತ್ಯವಾಗಿದೆ ಎಂದು ಸನಾತನ ಸಂಸ್ಥೆಯ ಪ್ರಮುಖರಾದ ಲಕ್ಷಿö್ಮ ಪೈ ಅಭಿಪ್ರಾಯಪಟ್ಟರು.

ಕುಶಾಲನಗರದ ಗೌಡ ಸಮಾಜದಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧನೆ ಮತ್ತು ಧರ್ಮಸಂಘಟನೆಯ ಅಡಿಪಾಯ ವಾಗಿದ್ದರೆ ಮಾತ್ರ ರಾಷ್ಟç ಧರ್ಮ ಕಾರ್ಯ ಭದ್ರವಾಗಿರಲು ಸಾಧ್ಯ. ಸಾಧನೆಯಿಂದಲೇ ಯಾವುದೇ ಪರಿಸ್ಥಿತಿಯನ್ನು ಎದುರಿಸುವ, ಯಾವುದೇ ಪರಿಸ್ಥಿತಿಯಲ್ಲಿ ಸ್ಥಿರವಾಗಿರುವ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಮತೆ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಎಲ್ಲರೂ ಆಧ್ಯಾತ್ಮಿಕ ಸಾಧನೆಯೊಂದಿಗೆ ರಾಷ್ಟç ಧರ್ಮದ ಕಾರ್ಯ ಮಾಡುವ ಸಂಕಲ್ಪ ತೊಡಬೇಕಿದೆ. ಗುರುಪೂರ್ಣಿಮೆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಗುರುಸೇವೆಗಾಗಿ ಸಂಕಲ್ಪ ಮಾಡುವ ಪವಿತ್ರ ದಿನವಾಗಿದೆ. ಭಾರತದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಗುರು-ಶಿಷ್ಯ ಪರಂಪರೆಯಾಗಿದ್ದು, ಈ ದೈವೀ ಪರಂಪರೆಯು ಕೇವಲ ಗುರು ಮತ್ತು ಶಿಷ್ಯ, ಅಧ್ಯಾತ್ಮ ಮತ್ತು ಮೋಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ.

ಬದಲಾಗಿ ಅದು ವಿಶ್ವ ಕಲ್ಯಾಣದ ಕಾರ್ಯ ಮಾಡುತ್ತಿದೆ. ಧರ್ಮಸಂಸ್ಥಾಪನೆ ಮತ್ತು ರಾಷ್ಟçರಕ್ಷಣೆಯ ಕಾರ್ಯವನ್ನೂ ಮಾಡಿದೆ. ತ್ರೇತಾಯುಗ, ದ್ವಾಪರಯುಗ ಹೀಗೆ ಪ್ರತಿ ಯುಗದಲ್ಲಿ ಧರ್ಮ ಮತ್ತು ನ್ಯಾಯದ ಪರವಾಗಿ ಹೋರಾಡುವವರಿಗಿಂತ ಅಧರ್ಮಿಗಳ ಸಂಖ್ಯೆ ಮತ್ತು ಶಸ್ತçಬಲ ಎರಡೂ ಹೆಚ್ಚಿತ್ತು. ಆದರೆ ಅಂತಿಮ ವಿಜಯವು ಧರ್ಮದ್ದೇ ಆಯಿತು. ಭಗವಂತನ ಆಶೀರ್ವಾದವು ಧರ್ಮದ ಪರವಾಗಿ ಹೋರಾಡುವವರ ಮೇಲಿತ್ತು. ಇಂದು ಸಮಾಜದಲ್ಲಿ ಅಂಥದ್ದೇ ಅಧರ್ಮ, ಕೊಲೆ, ಸುಲಿಗೆ, ವಂಚನೆ, ಭ್ರಷ್ಟಾಚಾರ ಹೆಚ್ಚಿದೆ, ಆದರೆ ಇಂದಿಗೂ ಪರಮ ಕಲ್ಯಾಣಕಾರಿ ಗುರು ತತ್ವವು ಸನಾತನ ಧರ್ಮದ ರಕ್ಷಣೆಗಾಗಿ ಹಾಗೂ ಭವ್ಯ ಭಾರತದ ನಿರ್ಮಾಣಕ್ಕಾಗಿ ಕಾರ್ಯನಿರತವಾಗಿದೆ ಎಂದರು.

ನಮ್ಮ ಕರ್ತವ್ಯವೇನೆಂದರೆ, ಒಬ್ಬ ವ್ಯಕ್ತಿಯಾಗಿ ಕೇವಲ ತನ್ನ ಕುಟುಂಬದ ಬಗ್ಗೆ ಮಾತ್ರ ಯೋಚಿಸದೆ, ರಾಷ್ಟç ಮತ್ತು ಧರ್ಮಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮಹತ್ವದಾಗಿದೆ. ನಿಜವಾದ ಅರ್ಥದಲ್ಲಿ ಸುಖ-ಸಂತೋಷವನ್ನು ಪಡೆಯಬೇಕಾದರೆ, ಧರ್ಮವನ್ನು ನಿಷ್ಠೆಯಿಂದ ಪಾಲಿಸಬೇಕು. ಕೇವಲ ವೈಯಕ್ತಿಕ ಉಪಾಸನೆಗೆ ಸೀಮಿತವಾಗದೆ ಸಮಾಜದಲ್ಲಿ ಧರ್ಮ ಪ್ರಸಾರ ಮತ್ತು ಧರ್ಮ ಜಾಗೃತಿ ಮಾಡುವುದು ಕಾಲದ ಅವಶ್ಯಕತೆಯಾಗಿದೆ ಎಂದು ಹೇಳಿದರು.

ಸನಾತನ ಸಂಸ್ಥೆಯ ಗುರುಗಳ ಸಂದೇಶವನ್ನು ವಿನಯ ಕುಮಾರ್ ವಾಚಿಸಿದರು. ಶ್ರೀಕೃಷ್ಣನ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಾಂಧವ್ಯ ವಿವೇಕ್ ಸ್ವಾಗತಿಸಿ, ನಿರೂಪಿಸಿದರು. ಕುಶಾಲನಗರದ ಉದ್ಗಮ್ ಶಾಲೆಯ ಮುಖ್ಯಸ್ಥೆ ಪ್ರೇಮಾ ಅಚ್ಚಯ್ಯ, ಹಿಂದೂ ಜನಜಾಗೃತಿ ವೇದಿಕೆ ಪ್ರಮುಖರಾದ ವಿನಯಕುಮಾರ್, ಕೆ.ಸಿ. ನಂಜುAಡಸ್ವಾಮಿ, ಬಿ.ಪಿ. ಶ್ರೀನಾಥ್, ರಮೇಶ್ ಕುಮಾರ್, ವಿಜಯಲಕ್ಷಿö್ಮ, ಸಹನಾ, ಉಮಾ ಶ್ರೀನಾಥ್, ಶರ್ಮಿಳಾ ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕರಾದ ಮುಕುಂದ, ನರೇಶ್ಚಂದ್ರ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.