ಮಡಿಕೇರಿ, ಜು. ೧೩: ಮಳೆಗಾಲದಲ್ಲಿ ಕಪ್ಪು ಕೊಳೆರೋಗ ಮತ್ತು ಕಾಯಿ ತೊಟ್ಟು ಕೊಳೆಯುವ ರೋಗಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಪ್ರಸ್ತುತ ವರ್ಷದಲ್ಲಿ, ಕಾಫಿ ಬೆಳೆಯುವ ಹೆಚ್ಚಿನ ಪ್ರದೇಶಗಳಲ್ಲಿ, ಮಾರ್ಚ್ನಿಂದ ಇಲ್ಲಿಯವರೆಗೆ ಒಟ್ಟು ಸರಾಸರಿ ೪೦ ರಿಂದ ೬೦ ಇಂಚು ಮಳೆಯಾಗಿದೆ. ಹೀಗೆ ನಿರಂತರ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಕಾಯಿಗಳ ಬೆಳವಣಿಗೆ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಇದಲ್ಲದೆ ಈ ವಾತಾವರಣದಲ್ಲಿ ನಿರಂತರವಾಗಿ ತೇವಾಂಶ ಇರುವುದು ಕೊಳೆರೋಗಗಳ ಉಲ್ಬಣತೆಗೆ ಕಾರಣವಾಗಿದೆ. ಈ ರೋಗಗಳು ಸಾಮಾನ್ಯವಾಗಿ ಹಿಂದಿನ ವರ್ಷ ರೋಗ ತಗುಲಿದ ಕಾಫಿ ಗಿಡಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ರೋಗವು ಎಲೆಯಿಂದ ಎಲೆಗೆ ಮತ್ತು ಗಿಡದಿಂದ ಗಿಡಕ್ಕೆ ಮತ್ತು ಗಾಳಿ ಅಥವಾ ಮಳೆಯ ಮೂಲಕ ಹರಡುತ್ತದೆ
ಪ್ರಸ್ತುತ, ಕೊಳೆರೋಗಗಳ ಹರಡುವಿಕೆ ಮತ್ತು ಬೆಳವಣಿಗೆಯನ್ನು ತಡೆಗಟ್ಟಲು ಹಾಗೂ ಇದರಿಂದಾಗುವ ಬೆಳೆ ನಷ್ಟವನ್ನು ಕಡಿಮೆ ಮಾಡಲು ಬೆಳೆಗಾರರು ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಲು ಚಿಕ್ಕಮಗಳೂರು ಕಾಫಿ ಸಂಶೋಧನಾ ಸಂಸ್ಥೆ ಪ್ರಕಟಣೆ ಮೂಲಕ ಸೂಚಿಸಿದೆ.
ಕಾಫಿ ಗಿಡಗಳ ಸುತ್ತಲೂ ನೀರು ನಿಲ್ಲುವುದನ್ನು ಕಡಿಮೆ ಮಾಡಲು ಬಸಿಕಾಲುವೆಗಳನ್ನು ನವೀಕರಿಸಬೇಕು. ಬೇರುಗಳ ಉತ್ತಮ ಉಸಿರಾಟಕ್ಕೆ ಗಿಡದ ಕೆಳಗೆ ಇರುವ ದರಗನ್ನು ನಾಲ್ಕು ಗಿಡಗಳ ಮಧ್ಯೆ ರಾಶಿ ಮಾಡಬೇಕು.
ಗಿಡಗಳ ನೆತ್ತಿ ಬಿಡಿಸುವುದು, ಚಿಗುರು ತೆಗೆಯುವುದು, ಒಣಗಿದ ರೆಕ್ಕೆಗಳನ್ನು ತೆಗೆಯುವುದು, ಬೇಡವಾದ ಕಂಬ ಚಿಗುರುಗಳನ್ನು ತೆಗೆಯುವುದು ಹಾಗೂ ಕಾಫಿ ಗಿಡಗಳ ಮೇಲೆ ಉದುರಿದ ನೆರಳಿನ ಮರಗಳ ಎಲೆಗಳನ್ನು ತೆಗೆದು ಹಾಕುವುದು. ಇದರಿಂದ ಕಾಫಿ ಗಿಡಗಳಲ್ಲಿ ಸರಿಯಾಗಿ ಗಾಳಿಯಾಡಲು ಸಹಾಯಕವಾಗುತ್ತದೆ
ಮಳೆ ಬಿಡುವು ನೀಡಿದಾಗ, ಎಕರೆಗೆ ಒಂದು ಚೀಲ ಯೂರಿಯಾ ಅಥವಾ ಎರಡು ಚೀಲ ಅಮೋನಿಯಂ ಸೆಲ್ಫೇಟ್ ಮತ್ತು ೨೫ ಕೆ.ಜಿ. ಎಂಓಪಿ ಹಾಕುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಸಾರಜನಕವನ್ನು ಗಿಡಗಳಿಗೆ ಒದಗಿಸುತ್ತದೆ, ಎಲೆ ಮತ್ತು ಹಣ್ಣುಗಳ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ರೋಗಪೀಡಿತ ಎಲೆಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸಿ ಮಣ್ಣಿನಲ್ಲಿ ಹೂತುಹಾಕಬೇಕು. ಏಕೆಂದರೆ ಇವು ಬರುವ ವರ್ಷದಲ್ಲಿ ರೋಗಾಣುವನ್ನು ಹರಡಲು ಕಾರಣವಾಗುತ್ತದೆ
ಮಳೆ ಬಿಡುವು ನೀಡಿದಾಗ ರೋಗದ ಹರಡುವಿಕೆ ಮತ್ತು ಅಕಾಲಿಕ ಹಣ್ಣುಗಳ ಉದುರುವಿಕೆಯನ್ನು ಕಡಿಮೆ ಮಾಡಲು ರೋಗಪೀಡಿತ ಎಲೆಗಳು ಮತ್ತು ಹಣ್ಣುಗಳನ್ನು ತೆಗೆದ ನಂತರ, ೨೦೦ ಲೀಟರ್ ನೀರಿನಲ್ಲಿ, ೨೦೦ ಮಿಲಿ ಟೆಬುಕೊನಜೋಲ್ ಶೇ. ೩೮.೩೯ ಎಸ್‌ಸಿ, ೫೦ ಮಿಲಿ ವ್ಯಾನೋಫಿಕ್ಸ್ ಜೊತೆಗೆ ೧೦೦ ಮಿಲಿ ಯಾವುದೇ ಅಂಟನ್ನು ಅಥವಾ ರಾಳವನ್ನು ಮಿಶ್ರಣಮಾಡಿ ಸಿಂಪಡಿಸಿ. ಸಿಂಪರಣಾ ಮಿಶ್ರಣವು ಬೆಳೆಯುತ್ತಿರುವ ಹಣ್ಣುಗಳು, ಎಲೆಗಳ ಕೆಳಗಿನ ಮತ್ತು ಮೇಲಿನ ಮೇಲ್ಮೆöÊ ಮತ್ತು ಎಳೆಯ ಕೊಂಬೆಗಳನ್ನು ತಲುಪುವಂತೆ ನೋಡಿಕೊಳ್ಳಿ.