ಶನಿವಾರಸಂತೆ, ಜು. ೧೩: ಪಟ್ಟಣದ ಪ್ರವಾಸಿ ಮಂದಿರದ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಭವನ ಮತ್ತು ಪುತ್ಥಳಿ ನಿರ್ಮಾಣ ಸಮಿತಿ ವತಿಯಿಂದ ಬಾಬು ಜಗಜೀವನ್ ರಾಂ ಅವರ ೩೯ನೇ ಪುಣ್ಯಸ್ಮರಣಾ ದಿನವನ್ನು ಆಚರಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.
ಸಮಿತಿ ಅಧ್ಯಕ್ಷ ಜೆ.ಆರ್. ಪಾಲಾಕ್ಷ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್‌ರಾಂ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ದ.ಸಂ.ಸ. ಸಂಘಟನಾ ಸಂಚಾಲಕ ರಾಮ್ ಕುಮಾರ್, ಹೋಬಳಿ ಅಧ್ಯಕ್ಷ ಶಿವಲಿಂಗ, ಕಾರ್ಯದರ್ಶಿ ಗದೀಶ್, ಸದಸ್ಯರಾದ ಗುರುಪ್ರಸಾದ್, ಮೋಹನ್, ವಿಎಸ್‌ಎಸ್‌ಎನ್ ಬ್ಯಾಂಕ್ ನಿರ್ದೇಶಕ ಫೈಂಟ್ ಮಂಜಣ್ಣ, ವಸಂತ್, ದೇವರಾಜು, ಮಹೇಶ್, ಜಯಣ್ಣ, ನಾಗರಾಜ್, ಪಾಲಾಕ್ಷ, ಆದಿ ಇತರರು ಹಾಜರಿದ್ದರು.