ಮಡಿಕೇರಿ, ಜು. ೧೪: ಕುಶಾಲನಗರದ ಅತ್ತೂರು ಜ್ಞಾನಗಂಗಾ ವಸತಿಶಾಲೆಯಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಮಂತ್ರಿಮAಡಲದ ಪದಗ್ರಹಣ ಹಾಗೂ ಗುರು ಪೂರ್ಣಿಮಾ ಕಾರ್ಯಕ್ರಮ ನಡೆಯಿತು. ಶಾಲಾ ಚುನಾವಣೆಯ ಮೂಲಕ ಆಯ್ಕೆಯಾದ ಶಾಲಾ ನಾಯಕಿ ೧೦ನೇ ತರಗತಿಯ ಟಿ.ಎಸ್. ಶ್ರೀನಿಧಿ ಹಾಗೂ ಉಪನಾಯಕ ೯ನೇ ತರಗತಿಯ ಎಂ. ಶಶಾಂಕ್ ಸೇರಿದಂತೆ ಮಂತ್ರಿಮAಡಲದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಎಸ್.ಎಂ. ಸತ್ಯಸುಲೋಚನ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ. ಸುಧೀರ್ ಅವರು ನಾಯಕರಿಗೆ ಜವಾಬ್ದಾರಿ ಗಳು ಹೆಚ್ಚುತ್ತದೆ, ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಶಿಸ್ತಿನಿಂದ ಪಾಲಿಸಬೇಕು. ಅಲ್ಲದೆ ನಾಯಕರಿಗೆ ಇರ ಬೇಕಾದ ಜವಾಬ್ದಾರಿಗಳೇನು ಎಂದು ತಿಳಿದು ಕೊಂಡು ಅದನ್ನು ಪಾಲಿಸಬೇಕು ಎಂದು ಕರೆ ನೀಡಿದರು. ಪರಿಶ್ರಮ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆಯನ್ನು ಅಳವಡಿಸಿಕೊಂಡರೆ ಉತ್ತಮ ನಾಯಕನಾಗಲು ಸಾಧ್ಯವೆಂದು ಅಭಿಪ್ರಾಯಪಟ್ಟ ಅವರು, ಆಯ್ಕೆಯಾದವರೆಲ್ಲರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ ಅವರು ಮಾತನಾಡಿ, ವಿದ್ಯಾರ್ಥಿ ಮಂತ್ರಿಮAಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಯ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು, ಇತರರು ಪಾಲಿಸುವಂತೆ ನೋಡಿ ಕೊಳ್ಳಬೇಕು ಮತ್ತು ಇತರರಿಗೆ ಮಾದರಿ ಯಾಗಬೇಕು ಎಂದು ಸಲಹೆ ನೀಡಿದರು. ಉಪ ಪ್ರಾಂಶುಪಾಲ ಸಿ.ಕೆ. ನಾಗರಾಜ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಗುರು ಪೂರ್ಣಿಮಾ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರು ವಂದನೆ ಸಲ್ಲಿಸಿದರು.