ಕಳತ್ಮಾಡು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ
ವೀರಾಜಪೇಟೆ, ಜು. ೧೪: ವೀರಾಜಪೇಟೆ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನ ಕೃಷಿ ಕಾರ್ಯಕ್ರಮದಡಿ ಯಲ್ಲಿ ಕಳತ್ಮಾಡು ಕಾರ್ಯಕ್ಷೇತ್ರದ ಕಳತ್ಮಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಕಳತ್ಮಾಡು ಶಾಲಾ ಮುಖ್ಯ ಶಿಕ್ಷಕರಾದ ಭಾಗ್ಯವತಿ ಅವರು, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ಸಂರಕ್ಷಣೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಐ.ಕ್ಯಮ್. ಯುವಸೇನಾ ಅಧ್ಯಕ್ಷ ವಿಘ್ನೇಶ ಎನ್.ಎಚ್ ಅವರು ಮಾತನಾಡಿ ಗಿಡಮರಗಳನ್ನು ಬೆಳೆಸ ಬೇಕು. ನೆಟ್ಟ ಗಿಡಗಳನ್ನು ಪೋಷಣೆ ಮಾಡಬೇಕು. ಪರಿಸರ ಸಂರಕ್ಷಣೆಯಿAದ ಶುದ್ಧವಾದ ಗಾಳಿ, ನೀರು ಸಿಗುತ್ತದೆ. ಪರಿಸರದ ರಕ್ಷಣೆ ಮಾಡದೆ ಇದ್ದರೆ ಜೀವ ಸಂಕುಲವೇ ಅವನತಿಯತ್ತ ಸಾಗುತ್ತದೆ ಎಂದರಲ್ಲದೆ ವನಮಹೋತ್ಸವ ಹೇಗೆ ಮಾಡಬೇಕು ಎಂದು ಮಾಹಿತಿ ನೀಡಿದರು. ಎಸ್ಡಿಎಂಸಿ ಅಧ್ಯಕ್ಷೆ ಉಷಾ ಅವರು ಮಾತನಾಡಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮಗಳಿಂದ ಮರ ಗಿಡಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
ಒಕ್ಕೂಟದ ಅಧ್ಯಕ್ಷರಾದ ಸಿ.ಪಿ. ಡಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಎಲೆಗಳನ್ನು ಗುರುತಿಸುವುದರ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಶಾಲಾ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ವಸಂತ್, ಶೌರ್ಯ ಘಟಕದ ಮಾಸ್ಟರ್ ತೀರ್ಥ ಕುಮಾರ್ ಶಾಲಾ ಕ್ರೀಡಾ ಸಮಿತಿ ಅಧ್ಯಕ್ಷ ಚಂದ್ರಶೇಖರ, ಶಾಲಾ ಕ್ರೀಡಾ ಸಮಿತಿ ಕಾರ್ಯದರ್ಶಿ ನರು ಸುಬ್ರಮಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಶೀಲ, ಅಂಗನವಾಡಿ ಶಿಕ್ಷಕಿ ನೇತ್ರಾವತಿ, ಗೋಣಿಕೊಪ್ಪ ವಲಯದ ಮೇಲ್ವಿಚಾರಕ ನವೀನ್ ಎಂ.ಸಿ, ಸೇವಾ ಪ್ರತಿನಿಧಿ ಜಯಪ್ರಕಾಶ್, ಶೌರ್ಯ ಟೀಮಿನ ಸದಸ್ಯರು, ಸಂಘದ ಸದಸ್ಯರು, ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಇದ್ದರು.
ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮ
ಚೆಯ್ಯಂಡಾಣೆ, ಜು. ೧೪: ಕೊಡಗು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ (ಎಂಎಸ್ಡಬ್ಲ್ಯೂ) ಹಾಗೂ ಸೋಮವಾರಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸೋಮವಾರಪೇಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು. ಶಾಲೆಯ ಸಭಾಂಗಣ ದಲ್ಲಿ ಆಯೋಜಿಸ ಲಾದ ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಯಶೋಧ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ದಂತ ವೈದ್ಯಾಧಿಕಾರಿ ಡಾ.ಅಫ್ರಿನ್ ಮೆಲ್ವಿನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲ್ಲುಗಳ ಶುದ್ಧತೆಯ ಅಗತ್ಯತೆ, ಆಹಾರ ಪದ್ಧತಿಯ ಪರಿಣಾಮಗಳು ಮತ್ತು ಹಲ್ಲು ಸಂರಕ್ಷಣೆಯ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ರಾಧಾ, ದೈಹಿಕ ಶಿಕ್ಷಣ ಶಿಕ್ಷಕ ನಾಗೇಶ್ ಹಾಗೂ ಇನ್ನಿತರ ಶಿಕ್ಷಕರು ಭಾಗವಹಿಸಿದ್ದರು. ವೈದ್ಯಾಧಿಕಾರಿ ಗಳ ಸಹಾಯಕರಾಗಿ ಚೇತನ್ ಮತ್ತು ಗಿರೀಶ್ ಕಾರ್ಯನಿರ್ವಹಿಸಿದರು. ಶಿಬಿರದಲ್ಲಿ ೧೫೦ ಕ್ಕೂ ಅಧಿಕ ವಿದ್ಯಾರ್ಥಿಗಳ ದಂತ ತಪಾಸಣೆ ನಡೆಯಿತು. ಕಾರ್ಯಕ್ರಮದಲ್ಲಿ ರತೇಶ್ ಸ್ವಾಗತಿಸಿ, ಕಾವ್ಯ ನಿರೂಪಿಸಿ, ಸಾಗರ್ ವಂದಿಸಿದರು.
ಶಾಸಕರಿAದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಕೂಡಿಗೆ, ಜು. ೧೪: ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಕೆಂಪೇಗೌಡ ಜಯಂತಿ ಅಂಗವಾಗಿ ಮುಳ್ಳುಸೋಗೆ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಪುಸ್ತಕಗಳನ್ನು ವಿತರಣೆ ಮಾಡಿದರು. ಸಂಘದ ಅಧ್ಯಕ್ಷ ಎಂ. ಕೆ. ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ಗೌಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಮಾತನಾಡಿದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಂಘ-ಸAಸ್ಥೆಗಳು ಅಗತ್ಯ ನೆರವಿಗೆ ಮುಂದಾಗುವುದು ಶ್ಲಾಘನೀಯ ವಿಚಾರ. ಸರಕಾರ ಯೋಜನೆಗಳೊಂದಿಗೆ ದಾನಿಗಳ ನೆರವು ಸರಕಾರಿ ಶಾಲೆ ವಿದ್ಯಾರ್ಥಿಗಳ ಪ್ರಗತಿಗೆ ಪೂರಕ ವಾಗಲಿದೆ ಎಂದರು. ನಾಡಪ್ರಭು ಕೆಂಪೇಗೌಡರ ಕೊಡುಗೆಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳ ಬೇಕಿದೆ ಎಂದರು. ಸಂಘದ ವಿಶೇಷ ಆಹ್ವಾನಿತ ರಾದ ವಿ.ಪಿ. ಶಶಿಧರ್ ಮಾತನಾಡಿ, ಕೆಂಪೇಗೌಡರ ಕೊಡುಗೆಗಳ ಬಗ್ಗೆ ಮಾಹಿತಿ ಒದಗಿಸಿದರು. ಸಂಘದ ಕಾರ್ಯದರ್ಶಿ ಎಂ.ಎA. ಪ್ರಕಾಶ್, ನಿರ್ದೇಶಕರಾದ ಜಿ.ಬಿ. ಜಗದೀಶ್, ವಿ.ಜೆ. ನವೀನ್ ಗೌಡ, ಮಧುಕುಮಾರ್, ಸರೋಜಮ್ಮ, ಗೌರಿ, ಸದಸ್ಯರಾದ ಅನಿಲ್ ಮುಳ್ಳುಸೋಗೆ, ಆನಂದ್, ಶಾಲಾ ಮುಖ್ಯ ಶಿಕ್ಷಕಿ ಭಾಗ್ಯ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್ ಇದ್ದರು.