*ಗೋಣಿಕೊಪ್ಪ, ಜು. ೧೪: ಗೋಣಿಕೊಪ್ಪ ರಾಷ್ಟ್ರೀಯ ಸೀನಿಯರ್ ಚೇಂಬರ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ೨೫೦ ಹಣ್ಣಿನ ಗಿಡಗಳನ್ನು ದೇವರಕಾಡುವಿ ನಲ್ಲಿ ನೆಡುವ ಮೂಲಕ ಪರಿಸರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಹಾತೂರು, ಕೊಳತ್ತೋಡು ದೇವರಕಾಡುವಿನಲ್ಲಿ ಗೋಣಿಕೊಪ್ಪ ಸೀನಿಯರ್ ಚೇಂಬರ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಉಪಸ್ಥಿತಿಯಲ್ಲಿ ಪರಿಸರ ಆಚರಣೆ ಕಾರ್ಯಕ್ರಮದ ಸಂಯೋಜಕ ರಾಷ್ಟಿçÃಯ ನಿರ್ದೇಶಕ ಡಾ. ಆಶಿಕ್ ಚಂಗಪ್ಪ ಹಣ್ಣಿನ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ನಂತರ ಪದಾಧಿಕಾರಿಗಳು, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಉಚಿತವಾಗಿ ನೀಡಿದ, ಜಮ್ಮುನೇರಳೆ, ಆಜಿನ ಹಲಸು, ಹಲಸು, ನೇರಳೆ, ಹುಣಸೆ, ಕರಡಿಮರ, ಸಂಪಿಗೆ ಸೇರಿದಂತೆ ಇನ್ನಿತರ ಗಿಡಗಳನ್ನು ನೆಟ್ಟರು.

ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಂಡಾಗ ನಾವು ಆರೋಗ್ಯ ಪೂರ್ಣವಾಗಿ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಕಳೆದ ಅವಧಿಯಲ್ಲಿಯೂ ವಿವಿಧ ಗಿಡಗಳನ್ನು ದೇವರ ಕಾಡುವಿನಲ್ಲಿ ನೆಡುವ ಮೂಲಕ ಹಸಿರು ಕ್ರಾಂತಿಗೆ ಹೆಜ್ಜೆ ಇಡಲಾಯಿತು. ನೆಟ್ಟ ಗಿಡಗಳ ಆರೈಕೆ ಮಾಡುವ ಮೂಲಕ ಗಿಡಗಳನ್ನು ಪೋಷಿಸಲಾಗಿದೆ. ಈ ಬಾರಿಯೂ ಆ ಉದ್ದೇಶದೊಂದಿಗೆ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಎಂದು ಬಿ.ಎನ್ ಪ್ರಕಾಶ್ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ನಾಗೇಶ್ ಎಂ.ಎA, ಕೋಶಾಧಿಕಾರಿ ಮೇಕೇರಿರ ಮೋಹನ್, ಕಾರ್ಯಕ್ರಮ ಸಂಯೋಜಕರುಗಳಾದ ಎಂ.ಎನ್. ಉತ್ತಪ್ಪ, ಸಚಿನ್ ಬೆಳ್ಯಪ್ಪ, ಉಪಾಧ್ಯಕ್ಷ ಶಾಂತೆಯAಡ ಮಧುಮಾಚಯ್ಯ, ಅಂಟೋಣಿ ಜೋಸೆಫ್, ಸ್ಥಾಪಕ ಅಧ್ಯಕ್ಷ ಕೆ.ಬಿ ಸಂಜೀವ್, ನಿರ್ದೇಶಕರುಗಳಾದ ಜಿತೇಂದ್ರ, ಟಿ.ಜೆ. ಅಂಥೋನಿ ಇದ್ದರು.