ಕುಶಾಲನಗರ, ಜು. ೧೪ : ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಗಳ ಕೌನ್ಸಿಲ್ ಕೊಡಗು ಮತ್ತು ಮೈಸೂರು ವಲಯ ೧೪ ಮತ್ತು ೧೭ ವರ್ಷ ದೊಳಗಿನ ಅಂತರ ಶಾಲಾ ಟೆನ್ನಿಸ್ ಪಂದ್ಯಾವಳಿ ನಳಂದ ಗುರುಕುಲ ಇಂಟರ್ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಿತು. ಶಾಲಾ ಪ್ರಾಂಶುಪಾಲ ಡಾ. ಸಿ. ಅಂತೋಣಿ ರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಳಂದ ಇಂಟರ್‌ನ್ಯಾಶನಲ್ ಇಂಡಿಪೆAಡೆAಟ್ ಪಿಯು ಕಾಲೇಜಿನ ಪ್ರಾಂಶುಪಾಲ ಶಾಜಿ ಅಲುಂಗಲ್ ಜೋಸೆಫ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ನಳಂದ ಗುರುಕುಲ ಶಿಕ್ಷಣ ಟ್ರಸ್ಟ್ನ ವಸತಿ ನಿರ್ದೇಶಕರಾದ ನಾಮ್ ಗ್ಯಾಲ್ ವಿಜೇತರಿಗೆ ಬಹುಮಾನ ವಿತರಿಸಿದರು.
೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಳಂದ ಗುರುಕುಲ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಕೌಸ್ತುಭ್ ನಾರಾಯಣ್ ಕೆ. ಎಸ್. ಚಿನ್ನದ ಪದಕ ಪಡೆದರು, ಕಾಲ್ಸ್ ಗೋಣಿಕೊಪ್ಪದ ಮಿಥುನ್ ಗೌಡ ಜೆ. ಮತ್ತು ನಳಂದ ಗುರುಕುಲ ಇಂಟರ್ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಟಿ. ದೇವಾಂಶ್ ಎ. ರಾಜ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.
೧೭ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರಿನ ನೊಟ್ರೆ ಡ್ಯಾಮ್ ಶಾಲೆಯ ದುಶ್ಯಂತ್ ಎಂ ಚಿನ್ನದ ಪದಕ ಪಡೆದರು. ನಳಂದ ಗುರು ಕುಲ ಇಂಟರ್ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಸಾಜನ್ ಸುಬ್ಬಯ್ಯ ಯು. ಟಿ. ಮತ್ತು ನಳಂದ ಗುರುಕುಲ ಇಂಟರ್ನ್ಯಾಶನಲ್ ಪಬ್ಲಿಕ್ ಸ್ಕೂಲ್ ಪ್ರಥಮ್ ಎಸ್. ಗಂಗಾಡ್ಕರ್ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು. ೧೭ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮಂಡ್ಯದ ಗ್ಲೋಬಲ್ ಪಬ್ಲಿಕ್ ಶಾಲೆಯ ತನ್ವಿ ಕೆ. ಚಿನ್ನದ ಪದಕ ಪಡೆದರು. ಡಬಲ್ಸ್ ಬಾಲಕರ ವಿಭಾಗದಲ್ಲಿ ನಳಂದ ಗುರುಕುಲ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ೧೪ ವರ್ಷ ದೊಳಗಿನ ಮತ್ತು ೧೭ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿತು.