ಗೋಣಿಕೊಪ್ಪಲು, ಜು. ೧೪: ದ.ಕೊಡಗಿನಲ್ಲಿ ರೈತರ ಜಾನುವಾರುಗಳ ಮೇಲೆ ಹುಲಿ ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆ ಹುಲಿ ಸೆರೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಮೂಲಕ ತಕ್ಷಣದಿಂದಲೇ ಕಾರ್ಯ ಚರಣೆಗಿಳಿಯುವಂತೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮದ ರೈತರಾದ ಕುಂಞಪAಡ ರಾಜೇಶ್ ಅವರಿಗೆ ಸೇರಿದ ೩ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ ಒಂದು ಜಾನುವಾರನ್ನು ಕೊಂದುಹಾಕಿ ಮತ್ತೆರಡು ಜಾನುವಾರುಗಳಿಗೆ ಗಂಭೀರ ಗಾಯಗೊಳಿಸಿದೆ. ನೊಂದ ರೈತರನ್ನು ಮುಂಜಾನೆ ಭೇಟಿ ಮಾಡಿದ ಸಂಕೇತ್ ಪೂವಯ್ಯ ಹುಲಿಸೆರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಈಗಾಗಲೇ ಶಾಸಕ ಪೊನ್ನಣ್ಣ ಅವರ ಮೂಲಕ ೪ ಹುಲಿಗಳ ಸೆರೆಗೆ ಅನುಮತಿ ಲಭ್ಯವಿದ್ದರೂ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಹುಲಿಯ ಸೆರೆಗೆ ಕ್ರಮ ಆಗುತ್ತಿಲ್ಲ. ರೈತರ ಜಾನುವಾರುಗಳು ಅಲ್ಲಲ್ಲಿ ಹುಲಿಯ ದಾಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ, ಇದು ಮುಂದುವರೆಯಬಾರದು. ಲಭ್ಯವಿರುವ ಅನುಮತಿಯನ್ನು ಬಳಸಿಕೊಂಡು ತಕ್ಷಣದಿಂದಲೇ ಅರವಳಿಕೆ ತಜ್ಞರ, ವೈದ್ಯಾಧಿಕಾರಿಗಳ ನಿಯೋಜನೆ ಸೇರಿದಂತೆ ಹುಲಿಸೆರೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಕ್ಷಣದಿಂದಲೇ ಹುಲಿಸೆರೆಗೆ ಬೇಕಾದ ಕಾರ್ಯ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳುವುದಾಗಿ ಸ್ಥಳದಲ್ಲಿದ್ದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್ ಹೇಳಿದರು. ಹುದಿಕೇರಿ ಸುತ್ತಮುತ್ತಲ ಗ್ರಾಮದಲ್ಲಿ ಹುಲಿಯ ಓಡಾಟ ಅಧಿಕವಾಗಿದೆ. ಮುಂದೆ ಮನುಷ್ಯನ ಮೇಲೆಯೂ ಹುಲಿ ದಾಳಿ ನಡೆಸಬಹುದು. ಹೀಗಾಗಿ ಹುಲಿಯನ್ನು ಸೆರೆ ಹಿಡಿಯಲೇಬೇಕು. ಆ ನಿಟ್ಟಿನಲ್ಲಿ ಇಲಾಖೆ ದೃಢನಿರ್ಧಾರ ಕೈಗೊಳ್ಳಬೇಕು ಎಂದು ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚಂಗುಲAಡ ಸೂರಜ್ ಅಧಿಕಾರಿಗಳಿಗೆ ಮನವಿ ಮಾಡಿದರು. ಈ ಭಾಗದ ಹುಲಿಯು ಕಳೆದ ೧ ತಿಂಗಳಿನಿAದ ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಓಡಾಡುತ್ತಿದೆ. ರೈತರು ಕಾಫಿ ತೋಟಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ನೋವನ್ನು ತೋಡಿಕೊಂಡರು.
ಜಾನುವಾರನ್ನು ಕಳೆದುಕೊಂಡ ರೈತರಿಗೆ ತಕ್ಷಣವೇ ಪರಿಹಾರ ಒದಗಿಸಲು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಆರ್‌ಎಫ್‌ಓ ಶಂಕರ್ ಕೂಡಲೇ ಕ್ರಮ ಕೈಗೊಂಡು ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಗಂಭೀರ ಗಾಯಗೊಂಡ ೨ ಜಾನುವಾರುಗಳಿಗೆ ಪಶುವೈದ್ಯಾಧಿಕಾರಿ ಗಳು ಚಿಕಿತ್ಸೆಯನ್ನು ಮುಂದು ವರೆಸುತ್ತಿದ್ದಾರೆ. ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ ನಂತರ ಈ ಭಾಗದಲ್ಲಿ ಹುಲಿಯ ಚಲನವಲನಗಳ ಬಗ್ಗೆ ಹಾಗೂ ಹೆಜ್ಜೆ ಗುರುತುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕಾರ್ಯಾ ಚರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಆರ್‌ಎಫ್‌ಓ ಶಂಕರ್ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಭೇಟಿಯ ವೇಳೆ ಸ್ಥಳೀಯ ಪ್ರಮುಖರುಗಳಾದ ಬಲ್ಯಮಾಡ ರಿಕ್ಷಿತ್, ಮಾರಮಾಡ ಮಂದಣ್ಣ, ಅಜ್ಜಿಕುಟ್ಟಿರ ಗಿರೀಶ್, ಬೊಳ್ಳಂದAಡ ಕಾವೇರಪ್ಪ, ಕಳ್ಳೇಂಗಡ ಲೋಕನಾಥ್, ನೂರೆರ ಕುಟ್ಟಪ್ಪ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. -ಹೆಚ್.ಕೆ. ಜಗದೀಶ್