ಮಡಿಕೇರಿ, ಜು. ೧೪: ಸಂಪಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಪೋಷಕರ ಸಭೆ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಕುರಿತಾದ ಚರ್ಚೆಗಳು ನಡೆದವು.

ನೂತನ ಸಮಿತಿ ರಚನೆ

ಎಸ್.ಡಿ.ಎಂ.ಸಿ. ನೂತನ ಸಮಿತಿಯನ್ನು ಇದೇ ಸಂದರ್ಭ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಜಗದೀಶ್ ಪರಮಲೆ, ಉಪಾಧ್ಯಕ್ಷ ಪರಮೇಶ್ವರ ಕೂವೆಕಾಡು, ಕಾರ್ಯದರ್ಶಿಯಾಗಿ ಬಿ.ಆರ್. ಚೇತನ್, ಸದಸ್ಯರಾಗಿ ಉದಯ, ರಂಗಪ್ಪ, ಗೋಪಾಲ ಅರೆಕಲ್ಲು, ಪ್ರವೀಣ್ ಕೂಟೇಲು, ವಿನೋದ್, ಶ್ರೀಷಾ ಕುರಮಜಲು, ಧನಂಜಯ ಗಬಲಡ್ಕ, ಸಮೀರ್ ದೇವರಕೊಲ್ಲಿ, ಬಲ್ಕೀಸ್ ಸಂಪಾಜೆ, ಸರೋಜಾ ಚಡಾವು, ಅಮಿತಾ ಹೊದ್ದೆಟ್ಟಿ, ಶೋಭಾ ರಾಜೇಶ್, ಸುಮಿತ್ರ ಅರಮನೆತೋಟ, ವಸಂತಿ, ಅನಿತಾ, ಉಷಾ ಕುಂಟಿಕಾನ ಪದನಿಮಿತ್ತ ಸದಸ್ಯರಾಗಿ ಪಿ.ಎಲ್. ಸುರೇಶ್ ನೇಮಕಗೊಂಡರು. ಆರೋಗ್ಯ ಕಾರ್ಯಕರ್ತೆ ಯಶೋದ, ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅವರುಗಳನ್ನು ಸಮಿತಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಗ್ರಾ.ಪಂ. ಅಧ್ಯಕ್ಷೆ ರಮಾದೇವಿ ಕಳಗಿ, ಪ್ರಮುಖರಾದ ಪೂರ್ಣಿಮಾ ಅರೆಕಲ್ಲು, ಸುರೇಶ್ ಪಿ.ಎಲ್, ಮುಖ್ಯ ಶಿಕ್ಷಕಿ ಕವಿತಾ ಕುಮಾರಿ ಹಾಜರಿದ್ದರು.