*ಗೋಣಿಕೊಪ್ಪ, ಜು. ೧೫: ಮಾಯಮುಡಿ, ತಿತಿಮತಿ, ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ನಿಯಂತ್ರಿಸುವ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅರಣ್ಯ ಅಧಿಕಾರಿಗಳ ಸಮಾಲೋಚನೆ ಸಭೆ ತಿತಿಮತಿ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು.
ವನ್ಯಜೀವಿ ಎ.ಸಿ.ಎಫ್. ಲಕ್ಷಿ÷್ಮಕಾಂತ್, ತಿತಿಮತಿ ಆರ್.ಎಫ್.ಒ. ಗೋಪಾಲ್, ಆನೆಚೌಕೂರು ವನ್ಯಜೀವಿ ವಲಯ ಅಧಿಕಾರಿ ದೇವರಾಜ್ ಭಾಗವಹಿಸಿ ಕಾಡಾನೆ ನಿಯಂತ್ರಿಸುವ ಸಲುವಾಗಿ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ, ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಒಟ್ಟಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಆನೆ ಕಂದಕ, ಬ್ಯಾರಿಕೇಡ್ ನಿರ್ಮಾಣ, ಸೋಲಾರ್ ಬೇಲಿ ನಿರ್ವಹಣೆಯಿಂದ ಕಾಡಾನೆ ನಿಯಂತ್ರಿಸಲು ಸೂಕ್ತ ರೀತಿಯಲ್ಲಿ ನಿರ್ವಹಣೆಗೆ ನಿರ್ಧರಿಸಲಾಯಿತು. ಅನುದಾನ ಬಳಕೆ ಮಾಡಿಕೊಂಡು ಮುಂದುವರಿಯುವAತೆಯೂ, ಈಗಾಗಲೇ ಗ್ರಾಮದಿಂದ ೨ ಹಿಂಡು ಕಾಡಾನೆಗಳನ್ನು ಅರಣ್ಯಕ್ಕೆ ಸೇರಿಸಿರುವ ಬಗ್ಗೆ ಮತ್ತು ಉಳಿದ ೪ ಆನೆಗಳನ್ನು ೫ ದಿನಗಳಲ್ಲಿ ಕಾಡಿಗೆ ಅಟ್ಟಲು ಸೂಕ್ತ ಕ್ರಮಕ್ಕೆ ಮುಂದಾಗುವAತೆ ನಿರ್ಧರಿಸಲಾಯಿತು. ಹಿಂದೆ ಚಾಲನೆಯಲ್ಲಿದ್ದ ಎ.ಇ.ಡಿ.ಸಿ. ಕಮಿಟಿಯನ್ನು ಮತ್ತೆ ಚಾಲನೆಗೆ ತರಲಾಯಿತು. ಮೂರು ಗ್ರಾಮ ಪಂಚಾಯಿತಿಗಳ ಮೂವರು ಸದಸ್ಯರುಗಳು ಭಾಗವಹಿದ್ದರು. ವಾಟ್ಸಾö್ಯಪ್ ಗ್ರೂಪ್ಗಳ ಮೂಲಕ ನೇರವಾಗಿ ಕಾಡಾನೆ ಚಲನ ವಲನ, ಅಗತ್ಯ ಕ್ರಮವನ್ನು ಮೇಲಾಧಿಕಾರಿಗಳಿಗೆ ತಲುಪಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲ ಯದ ನಿವೃತ್ತ ಮುಖ್ಯಸ್ಥ ಡಾ. ಸಿ.ಜಿ. ಕುಶಾಲಪ್ಪ, ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟೀರ ಟಾಟು ಮೊಣ್ಣಪ್ಪ, ಪ್ರಮುಖ ಚೆಪ್ಪುಡೀರ ಕಾರ್ಯಪ್ಪ, ಸಣ್ಣುವಂಡ ಬಿ. ರಮೇಶ್, ಚೆಪ್ಪುಡೀರ ರಾಮಕೃಷ್ಣ ಇದ್ದರು.