ಸೋಮವಾರಪೇಟೆ, ಜು. ೧೬: ಇಲ್ಲಿನ ಕಕ್ಕೆಹೊಳೆ ಬಳಿ ಇರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿದಿಯಲ್ಲಿ ಆಟಿ ಮಾಸದ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ.
ತಾ. ೧೭ ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಪೂಜೆ ಪ್ರಾರಂಭಗೊಳ್ಳುವುದು. ಕರ್ಕಾಟಕ(ಆಟಿ) ಮಾಸದಲ್ಲಿ ಭಗವತಿ ಸೇವೆ, ದುರ್ಗಾದೀಪ ನಮಸ್ಕಾರ ಪೂಜೆ ಪ್ರತಿ ದಿನ ಸಂಜೆ ೬ ಗಂಟೆಯಿAದ ೮ರ ವರೆಗೆ ನಡೆಯಲಿದೆ. ನಂತರ ಮಹಾ ಮಂಗಳಾರತಿ, ಹರಿವರಾಸನಂ, ಅನ್ನದಾನ ಸೇವೆಗಳು ಆ. ೧೪ ರವರೆಗೆ ನಡೆಯಲಿದೆ.
ಆ. ೧೫ ರಂದು ಕೊನೆಯ ದಿನವಾಗಿದ್ದು, ಅಂದು ಬೆಳಿಗ್ಗೆ ೯ ಗಂಟೆಗೆ ಹೋಮದೊಂದಿಗೆ ಮುಕ್ತಾಯಗೊಳ್ಳುವುದು. ದೇವಾಲಯದ ಅರ್ಚಕರಾದ ಮಣಿಕಂಠನ್ ನಂಬೂದರಿ ಹಾಗೂ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆಯಲಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿನೋದ್ ತಿಳಿಸಿದ್ದಾರೆ.