ಐಗೂರು, ಜು. ೧೬: ಪ್ರಧಾನ ಮಂತ್ರಿ ಜನ್ಮನ್ ಕಾರ್ಯಕ್ರಮಕ್ಕೆ ಹರದೂರು ಗ್ರಾ.ಪಂ. ಸದಸ್ಯ ಸಲೀಂ ಹೊಸತೋಟ ಚಾಲನೆ ನೀಡಿದರು.
ಗರಗಂದೂರು ಬಿ ಗ್ರಾಮದ ಗಿರಿಜನರಿಗೆ ಸಿಕಲ್ ಸೆಲ್ ಅನಿಮಿಯ ತಪಾಸಣೆ, ಉದ್ಯೋಗ ಖಾತ್ರಿ ಯೋಜನೆಯ ಜೊಬ್ ಕಾರ್ಡ್ ವಿತರಣೆ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಗ್ರಹಲಕ್ಷಿö್ಮ ಯೋಜನೆಯ ಮಾಹಿತಿ ಮತ್ತು ಕಾರ್ಯಾಗಾರಗಳು ನಡೆದವು.
ಈ ಸಂದರ್ಭ ಗ್ರಾಮ ಲೆಕ್ಕಾಧಿಕಾರಿ ದೀಪಿಕಾ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನವ್ಯ, ಸಮಾಜ ಕಲ್ಯಾಣ ಇಲಾಖೆಯ ರಜನಿಕಾಂತ್, ಆರೋಗ್ಯ ಇಲಾಖೆಯ ಸಫೀನಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಹಾಡಿ ನಿವಾಸಿಗಳು ಹಾಜರಿದ್ದರು.