ಕೂಡಿಗೆ, ಜು. ೧೭: ಹಾರಂಗಿ ಅಣೆಕಟ್ಟೆಯಿಂದ ನಾಲೆಗಳ ಮೂಲಕ ಖಾರೀಫ್ ಬೆಳೆಗೆ ೫೦೦ ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಯಿತು.
ಬೆಂಗಳೂರಿನ ಕಾವೇರಿ ನೀರಾವರಿ ನಿಗಮ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಹಾರಂಗಿ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚೆಗಳು ನಡೆದು ತಾ. ೧೮ ರಿಂದ (ಇಂದಿನಿAದ) ನೀರು ಹರಿಸಲು ನಿರ್ಧರಿಸಲಾಯಿತು.
ನಾಲೆ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು, ಮತ್ತು ನೀರಿನ ನಿರ್ವಹಣೆ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ನಂತರ ಮೊದಲ ಹಂತದಲ್ಲಿ ಅಣೆಕಟ್ಟೆಯಿಂದ ನಾಲೆಯ ಕ್ರೇಸ್ಟ್ ಗೇಟ್ ಮೂಲಕ ೩೦೦ರಿಂದ ೫೦೦ ಕ್ಯೂಸೆಕ್ಸ್ ನೀರನ್ನು ಹರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
೩೦೦ ರಿಂದ ೫೦೦ ಕ್ಯೂಸೆಕ್ಸ್ ನೀರನ್ನು ಮುಖ್ಯ ನಾಲೆಯ ಮೂಲಕ ಹರಿಸಿ ನಂತರ ಕಣಿವೆ ಸಮೀಪದ ಎಡ ಮತ್ತು ಬಲದಂಡೆಯಿAದ ನೀರು ಹರಿಸುವ ಮೂಲಕ ರೈತರ ಮುಂಗಾರು ಖಾರೀಫ್ ಬೆಳೆಗೆ ಉಪಯೋಗಿಸುವುದರೊಂದಿಗೆ ಕೆರೆ ಕಟ್ಟೆಗಳನ್ನು ಸಹ ತುಂಬಿಸಲಾಗುವುದು ಎಂದು ಕಾರ್ಯಪಾಲಕ ಅಭಿಯಂತರ ಐ. ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು, ಕೆ.ಆರ್ ನಗರ ಶಾಸಕ ಡಿ. ರವಿಶಂಕರ್, ನೀರಾವರಿ ಮಹಾಮಂಡಲ ಅಧ್ಯಕ್ಷ ಚೌಡೇಗೌಡ, ಜಿಲ್ಲೆಯ ಹಾರಂಗಿ ನೀರಾವರಿ ಸಲಹಾ ಸಮಿತಿಯ ಸದಸ್ಯರಾದ ಟಿ.ಕೆ.ಪಾಂಡುರAಗ, ಉಮಾ ಪ್ರಭಾಕರ್, ಬಾಲಕೃಷ್ಣ, ಸುಬ್ಬಣ್ಣ, ಮುಸ್ತಫಾ, ಸುರೇಶ್ ಬಾಬು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಹಾರಂಗಿ ವಿಭಾಗದ ಅಧೀಕ್ಷಕ ಅಭಿಯಂತರ ಸತೀಶ್, ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಸೇರಿದಂತೆ ಸಹಾಯಕ ಇಂಜಿನಿಯರ್ಗಳು ಮತ್ತು ಅಧಿಕಾರಿ ವರ್ಗದವರು ಭಾಗವಹಿಸಿದ್ದರು. - ಕೆ.ಕೆ. ನಾಗರಾಜಶೆಟ್ಟಿ