ಸುಂಟಿಕೊಪ್ಪ, ಜು. ೧೭: ಸುಂಟಿಕೊಪ್ಪ ಜೆಸಿಐ ವತಿಯಿಂದ ಸೋಮವಾರಪೇಟೆ ಬಿಸಿಎಂ ವಿದ್ಯಾರ್ಥಿನಿಲಯದ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿನಿಯರಿಗೆ ‘ಬರವಣಿಗೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ’ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಣೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀಸ್ವಾಮಿ ನೆರವೇರಿಸಿದರು. ಅಧ್ಯಕ್ಷತೆಯನ್ನು ವಲಯ ಸಂಯೋಜಕ ಸತೀಶ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಲಯದ ಪೂರ್ವ ಅಧ್ಯಕ್ಷರಾದ ದೇವಿ ಪ್ರಸಾದ್ ಆಗಮಿಸಿದ್ದರು. ಬಿಸಿಎಂ ನಿಲಯದ ವಿದ್ಯಾರ್ಥಿಗಳಿಗೆ ಮೇನಕಾ ಆನಂದಕುಮಾರ್ ಅವರು ‘ಬರವಣಿಗೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ’ ತರಬೇತಿಯನ್ನು ನೀಡಿ ಇದನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಾರ್ಡನ್ ಗಾಯತ್ರಿ, ಸುಂಟಿಕೊಪ್ಪ ಜೆಸಿಐ ಸದಸ್ಯರಾದ ಡೆನ್ನಿಸ್ ಡಿಸೋಜ, ಮಂಜುನಾಥ್, ನಿಯಾಝ್, ಪ್ರಣೀತ್ ಡಿಸೋಜ, ನಿಶಾಂತ್ ಹಾಜರಿದ್ದರು. ತರಬೇತಿಯಲ್ಲಿ ಸುಮಾರು ೩೫ ವಿದ್ಯಾರ್ಥಿಗಳು ತರಬೇತಿ ಪಡೆದರು.