ಮಡಿಕೇರಿ, ಜು. ೧೭: ನಿವೃತ್ತ ಯೋಧರ ಒಕ್ಕೂಟ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮೂಲಕ ಮುಖ್ಯಮಂತ್ರಿಯನ್ನು ಭೇಟಿಯಾದ ನಿಯೋಗ ನಿವೃತ್ತ ಯೋಧರ ಕಲ್ಯಾಣ ಕೇಂದ್ರ ಸ್ಥಾಪಿಸಲು ಕರ್ಣಂಗೇರಿ ಗ್ರಾಮದಲ್ಲಿ ೨೦ ಸೆಂಟ್ ಜಾಗ ನೀಡಲಾಗಿದೆ. ಇದನ್ನು ಸರ್ವೆ ನಡೆಸಿ ಬೇಲಿ ಹಾಕಿ ೧೨ ವರ್ಷದಿಂದ ಸ್ವಾದೀನದಲ್ಲಿದ್ದು, ಈ ಜಾಗವನ್ನು ಒಕ್ಕೂಟಕ್ಕೆ ಮಂಜೂರು ಮಾಡುವಂತೆ ಮನವಿ ಮಾಡಿತು.
ಜಿಲ್ಲೆಯಲ್ಲಿ ೩ ಸಾವಿರಕ್ಕೂ ಅಧಿಕ ಅರೆಸೇನಾ ಪಡೆ ಯೋಧರಿದ್ದು, ಅವರುಗಳಿಗೆ ಕ್ಯಾಂಟೀನ್ ಸೌಲಭ್ಯ ದೊರೆಯುತ್ತಿಲ್ಲ. ವೀರಾಜಪೇಟೆ ಮತ್ತು ಮಡಿಕೇರಿ ಮಿಲಿಟರಿ ಕ್ಯಾಂಟೀನ್ನಲ್ಲಿ ಅರೆಸೇನಾ ಪಡೆ ಯೋಧರಿಗೂ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು ಅಥವಾ ಪೊಲೀಸ್ ಕಲ್ಯಾಣ ಭಂಡಾರದ ಮೂಲಕ ಸಿಪಿಸಿ ಕ್ಯಾಂಟೀನ್ ಸೌಲಭ್ಯ ನೀಡುವಂತೆ ಪ್ರಮುಖರು ಗಮನ ಸೆಳೆದರು.