ನೂತನ ಟ್ರಾನ್ಸ್ಸ್ಫಾ

ಚೆಯ್ಯಂಡಾಣೆ, ಜು. ೧೭: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಹಾಗೂ ಅರಪಟ್ಟು ಗ್ರಾಮದಲ್ಲಿ ಚೆಸ್ಕಾಂ ಇಲಾಖೆಯಿಂದ ನೂತನ ಟ್ರಾನ್ಸ್ಫಾರ್ಮರ್ ಅಳವಡಿಸಲಾಯಿತು. ಚೇಲಾವರ, ಪತ್ತೆಟ್ಟಿ ಭಾಗದಲ್ಲಿ ಹಾಗೂ ಅರಪಟ್ಟು ಗ್ರಾಮದ ಪಾಲಚಂಡ, ಮುಕ್ಕಾಟಿರ ಕುಟುಂಬಸ್ಥರ ಹಾಗೂ ಕೊಕ್ಕಂಡಬಾಣೆ ಜಂಕ್ಷನ್ ಸೇರಿದಂತೆ ೨೫ಕ್ಕೂ ಅಧಿಕ ಕುಟುಂಬಕ್ಕೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಾಗಿತ್ತು, ಚೆಸ್ಕಾಂ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿರಲಿಲ್ಲ. ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣನವರಿಗೆ ವೋಲ್ಟೇಜ್ ಸಮಸ್ಯೆಯ ಬಗ್ಗೆ ಬೇಡಿಕೆ ಇಟ್ಟಾಗ ಕೂಡಲೇ ಸ್ಪಂದಿಸಿದ ಶಾಸಕರು ಚೆಸ್ಕಾಂ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸಿ ವೋಲ್ಟೇಜ್ ಸಮಸ್ಯೆಗೆ ಮುಕ್ತಿ ದೊರಕಿಸಿದ್ದಾರೆ.

ಇತ್ತೀಚೆಗೆ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ನೂತನವಾಗಿ ಅಳವಡಿಸಿದ ಟ್ರಾನ್ಸ್ಫಾರ್ಮರ್ ಲೈನ್ ಮಾರ್ಗಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ತಿಲಕ, ಲೋಕೇಶ್, ತನು, ಅಶೋಕ, ತಮ್ಮುಣು, ಗೋಪಾಲಕೃಷ್ಣ, ಈರಪ್ಪ, ಕಾರ್ಯಪ್ಪ ತರೇಶ್, ಕವನ್, ದೇವಿಪ್ರಸಾದ್, ಯೋಗೇಶ್, ಚೆಸ್ಕಾಂ ಇಲಾಖೆಯ ಸಾಗರ್ ಮತ್ತಿತರರು ಇದ್ದರು.