ಬೆಂಗಳೂರು, ಜು. ೧೬: ಬಿ.ಟೆಕ್ ಪದವಿ ಮುಗಿಸಿ ಒಂದು ಲಕ್ಷ ರೂಪಾಯಿ ಸಂಬಳದ ಕೆಲಸ ಸಿಕ್ಕಿ ದ್ದರೂ ಅದನ್ನು ಬಿಟ್ಟು ಕಳ್ಳತನಕ್ಕಿ ಳಿದಿದ್ದ ಯುವಕನೊಬ್ಬನನ್ನು ಮಲ್ಲೇ ಶ್ವರಂ ಪೋಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೂಲತಃ ವೀರಾಜಪೇಟೆಯ ನೆಹರು ನಗರದ ನಿವಾಸಿ ರಿಚರ್ಡ್ (೨೫) ಎಂದು ಗುರುತಿಸಲಾಗಿದೆ. ಆರೋಪಿಯು ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗಳಿಗೆ ತೆರಳಿ ಮಾಲೀಕರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಚಿನ್ನಾಭರಣವನ್ನು ಕಳವು ಮಾಡು ತ್ತಿದ್ದ. ಈತನಿಂದ ೧೩ ಲಕ್ಷ ಮೌಲ್ಯದ ೧೩೪ ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಪ್ರತಿಷ್ಠಿತ ಖಾಸಗಿ ಕಂಪೆನಿಯೊAದರಲ್ಲಿ ಒಂದು ಲಕ್ಷ ಸಂಬಳವಿದ್ದರೂ ಆರೋಪಿಯು ಹಣದಾಸೆಗಾಗಿ ಅಪರಾಧ ಪ್ರಕರಣ ಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಕಳೆದ ಮಾರ್ಚ್ ತಿಂಗಳಿನಲ್ಲಿ ಮಲ್ಲೇಶ್ವರಂನ ಜನನಿಬಿಡ ಸಂಪಿಗೆ ರಸ್ತೆಯಲ್ಲಿನ ಕನಿಷ್ಕಾ ಜುವೆಲ್ಲರ್ಸ್ ಅಂಗಡಿಗೆ ಚಿನ್ನದ ಸರ ಖರೀದಿಸುವ ನೆಪದಲ್ಲಿ ಹೋಗಿದ್ದ. ಅಂಗಡಿಯ ಕೆಲಸಗಾರರು ಚಿನ್ನದ ಸರ ತೋರಿಸುತ್ತಿರುವಾಗಲೇ ಬೇರೆ ಡಿಸೈನ್ ತೋರಿಸಿ ಎಂದು ಅವರಿಗೆ ಹೇಳುತ್ತಾ ಅವರು ಅತ್ತ ತಿರುಗಿದ ಕೂಡಲೇ ಮೂರು ಚಿನ್ನದ ಸರ ಕದ್ದು ಕ್ಷಣಮಾತ್ರದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅಂಗಡಿಯ ಕೆಲಸಗಾರರು ಆತನನ್ನು ಕರೆದರೂ ಹೊರಗೆ ಹೋಗಿ ಓಡಿ ಹೋಗಿದ್ದ. ನಂತರ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮೂರು ಸರ ದೋಚಿರುವುದು ಬೆಳಕಿಗೆ ಬಂದಿದೆ. ನಂತರ ದೂರು ದಾಖಲಾಗಿದೆ. ಇದಕ್ಕೂ ಮೊದಲು ಬ್ಯಾಟ ರಾಯನಪುರದಲ್ಲೂ ಇದೇ ರೀತಿ ಚಿನ್ನದ ಸರ ದೋಚಿ ಈತ ಪರಾರಿ ಆಗಿದ್ದ. ಈತ ೨೦೨೨ರಲ್ಲಿ ಬೆಂಗಳೂ ರಿನ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ವೈಟ್‌ಫೀಲ್ಡ್ನಲ್ಲಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಯೊAದರಲ್ಲಿ ಇಂಜಿನಿಯರ್ ಕೆಲಸ ಪಡೆದು ಒಂದು ಲಕ್ಷ ರೂಪಾಯಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ)
ಆದರೆ ಕೆಲ ತಿಂಗಳಿನಲ್ಲೇ ಕೆಲಸ ಬಿಟ್ಟು ಕಳ್ಳತನವನ್ನೇ ಪೂರ್ಣಾವಧಿ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.
ಮೊಬೈಲ್ ಬಳಸದೆ ಕಳ್ಳತನ
ಆರೋಪಿ ತಂತ್ರಜ್ಞಾನ ಪದವೀಧರ ಆಗಿದ್ದುದರಿಂದ ಕಳ್ಳತನಕ್ಕೆ ಹೋಗುವಾಗ ಸಿಕ್ಕಿಬೀಳುವ ಭಯದಿಂದ ಮೊಬೈಲ್ ಬಳಸುತ್ತಿರಲಿಲ್ಲ. ಈತನ ಬಗ್ಗೆ ಫೋಟೋ ಬಿಟ್ಟರೆ ಯಾವುದೇ ಸುಳಿವು ಇರದಿದ್ದುದು ಪೊಲೀಸರಿಗೂ ತಲೆ ನೋವಾಗಿತ್ತು. ಆದರೆ ಮಲ್ಲೇಶ್ವರಂ ಪೋಲೀಸರು ಈತನ ಫೋಟೋವನ್ನು ಇತರ ಠಾಣೆಗಳಿಗೆ ಕಳಿಸಿದಾಗ ಈತನು ಈ ಹಿಂದೆ ಜೀವನಭೀಮಾ ನಗರದಲ್ಲಿ ೨೦೨೩ ರಲ್ಲಿಯೇ ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಮಾಹಿತಿ ಪತ್ತೆ ಆಗಿ ಈತನ ವಿಳಾಸವೂ ಸಿಕ್ಕಿತ್ತು.
ವೀರಾಜಪೇಟೆಗೆ ಪೊಲೀಸ್ ಭೇಟಿ
ಒಂದು ತಿಂಗಳ ಹಿಂದೆ ಈತನ ವಿಳಾಸ ಹುಡುಕಿಕೊಂಡು ವೀರಾಜಪೇಟೆಗೆ ಪೋಲೀಸರು ಬಂದು ಈತನ ಮನೆಯ ಸಮೀಪ ಹುಡುಕಾಡಿದರೂ ಈತ ಮನೆಯಲ್ಲಿ ಇಲ್ಲದಿರುವುದು ಖಚಿತವಾದ ನಂತರ ಹಿಂತಿರುಗಿ ಹೋಗಿದ್ದರು. ಆದರೆ ರಿಚರ್ಡ್ನ ಮನೆಯವರನ್ನು ಮಾತಾಡಿಸಿರಲಿಲ್ಲ ಅಥವಾ ವಿಷಯ ತಿಳಿಸಿರಲಿಲ್ಲ. ಮೊಬೈಲ್ ಇಲ್ಲದ್ದರಿಂದ ಈತನ ಪತ್ತೆ ತುಂಬಾ ಕಷ್ಟವಾಗಿತ್ತು.
ವ್ಯಾಟ್ಸಾಪ್ ಕರೆ ಮಾಡುತ್ತಿದ್ದ
ಮೊಬೈಲ್‌ನ್ನು ಆರೋಪಿ ಕಳ್ಳತನಕ್ಕೆ ಬಳಸದಿದ್ದರೂ ತನಗೆ ಬೇಕಾದವರ ಜೊತೆ ಸಂವಹನಕ್ಕೆ ಒಂದು ಮೊಬೈಲ್ ಇರಿಸಿಕೊಂಡು ಅವರೊಂದಿಗೆ ವ್ಯಾಟ್ಸಾಪ್ ಕರೆ ಮೂಲಕ ಸಂವಹನ ನಡೆಸುತ್ತಿದ್ದ. ಈತನ ಮೊಬೈಲ್ ಕೆಲ ಬೆರಳೆಣಿಕೆಯ ವ್ಯಕ್ತಿಗಳಿಗಷ್ಟೆ ಸಂಪರ್ಕಕ್ಕೆ ಸೀಮಿತವಾಗಿತ್ತು.
ಈತ ಚಿನ್ನಾಭರಣ ಅಂಗಡಿಗೆ ಕದಿಯಲು ಹೋಗುವಾಗ ಭದ್ರತಾ ಸಿಬ್ಬಂದಿಗಳಿಲ್ಲದ, ಅಂಗಡಿಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ. ಏಕೆಂದರೆ ಸರವನ್ನು ಜೋಬಿಗೆ ಹಾಕಿಕೊಂಡ ನಂತರ ಅಲ್ಲಿಂದ ಓಡಿದಾಗ ಕಾವಲುಗಾರರು ಬೆನ್ನತ್ತಬಾರದೆಂದು ಈ ಉಪಾಯ ಮಾಡಿದ್ದ. ಈತ ಮಾಡಿದ ಬಹುತೇಕ ಕಳ್ಳತನಗಳ ನಂತರ ಕ್ಷಣಾರ್ಧದಲ್ಲೇ ಅಂಗಡಿಯಿAದ ಹೊರಹೋಗಿ ಕಣ್ಮರೆ ಆಗುತ್ತಿದ್ದ ಮತ್ತು ಕಳ್ಳತನ ಕೂಡಲೇ ಬೆಳಕಿಗೆ ಬಂದರೂ ಪೊಲೀಸರು ಈತನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಮೊಬೈಲ್ ಮೂಲಕವೇ ಬಂಧನ
ಈತನ ಸಂಪರ್ಕ ಪತ್ತೆಮಾಡಿದ ಪೊಲೀಸರು ಈತನ ಮೊಬೈಲ್ ನಂಬರ್ ಪತ್ತೆ ಮಾಡಿ ಆತ ಇದ್ದ ಪಿಜಿಯಿಂದಲೇ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಮೊದಲು ವೈಟ್‌ಫೀಲ್ಡ್ನಲ್ಲಿ ಪಿಜಿಯಲ್ಲಿದ್ದ ಆರೋಪಿ ನಂತರ ಅಲ್ಲಿಂದ ಬೇರೆ ಕಡೆಗೆ ಸ್ಥಳಾಂತರಗೊAಡಿದ್ದ, ತನ್ನ ಗುರುತು ಬಯಲಾಗುವ ಭಯದಿಂದ ಈತ ಯಾವ ಪಿಜಿಯಲ್ಲೂ ೩-೪ ತಿಂಗಳಿಗಿAತ ಹೆಚ್ಚು ಕಾಲ ಇರುತ್ತಿರಲಿಲ್ಲ. ಮೈಸೂರು, ಮಂಗಳೂರು, ಕೇರಳ ಸೇರಿದಂತೆ ಒಟ್ಟು ೯ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ಈಗ ವಿಚಾರಣೆಗೆ ಬಾಕಿ ಇವೆ. -ಕೋವರ್‌ಕೊಲ್ಲಿ ಇಂದ್ರೇಶ್