ಸುಂಟಿಕೊಪ್ಪ, ಜು. ೧೭: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ೨೦೨೫-೨೬ನೇ ಸಾಲಿನ ಅಧ್ಯಕ್ಷರಾಗಿ ಕೆ.ವಿ. ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಕಂಬಿಬಾಣೆ, ಖಜಾಂಚಿಯಾಗಿ ಅಜೀಜ್ ಕೊಡಗರಹಳ್ಳಿ ಅವರುಗಳನ್ನು ನೇಮಕ ಗೊಳಿಸಲಾಯಿತು. ಸಂಘದ ಸಾರ್ವಜನಿಕ ಸಂಭಾಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಕಿಟ್ಟಣ್ಣ ರೈ ವಹಿಸಿದ್ದರು. ಕಳೆದ ಸಾಲಿನ ಲೆಕ್ಕಪತ್ರ ಮಂಡನೆಯ ನಂತರ ೨೦೨೫-೨೬ರ ಸಾಲಿನ ಆಡಳಿತ ಮಂಡಳಿ ನೇಮಕಗೊಳಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ವಿ. ಕಿಟ್ಟಣ್ಣ ರೈ, ಉಪಾಧ್ಯಕ್ಷರಾಗಿ ಅಬ್ದುಲ್ಲಕುಟ್ಟಿ, ಕೃಷ್ಣಪ್ಪ ಬಿ.ಎ., ಸಹಕಾರ್ಯದರ್ಶಿ ಪಟ್ಟೆಮನೆ, ಎಸ್. ರಕ್ಷಿತ್ ರೀನು, ಸಂಘಟನಾ ಕಾರ್ಯದರ್ಶಿಯಾಗಿ ರಿಜ್ವಾನ್, ಕಾರ್ಯಕಾರಿ ಸಮಿತಿ ಸಿ.ಎ. ಬಸಪ್ಪ, ರಾಜ, ಇನಾಸ್ ಡಿಸೋಜ, ಕೆ. ರವಿ, ಸಂದೀಪ್, ಬಿ.ಎಸ್., ಬಿ.ಕೆ. ಸುರೇಶ್, ಅಝೀಸ್ ಹೊಸಕೋಟೆ, ಅಸ್ಕರ್, ಜೈನುದ್ದೀನ್, ಶಕ್ತಿವೇಲು, ರಫೀಕ್ ಮೊನು ಮಣಿ ರಾಜ್ ತಂಬಿ, ದೇವಯ್ಯ ಎಂ.ಎ., ಕುಮಾರ ಜಿ., ಶಾಜಿ ಎಂ.ಎಸ್., ಸಲೀಂ. ಗದ್ದೆಹಳ್ಳ, ಸಲಹಾ ಸಮಿತಿ ಸದಸ್ಯರುಗಳಾಗಿ ರಾಜ ಆರ್. ಮತ್ತು ಇಸ್ಮಾಯಿಲ್ ಕಾಕು ರನ್ನು ಆಯ್ಕೆಗೊಳಿಸಲಾಯಿತು.

ಇದೇ ಸಂದರ್ಭ ಕಳೆದ ಬಾರೀ ಸಂಘವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದ ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ ಹಾಗೂ ಚಾಲಕ ಸಿ.ಎ. ಬಸಪ್ಪ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.