ಹೆಚ್.ಜೆ. ರಾಕೇಶ್

ಮಡಿಕೇರಿ, ಜು. ೧೬: ಸರಕಾರ ಅಧೀನದ ಜಾಗಗಳಲ್ಲಿ ಅನಧಿಕೃತವಾಗಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು ಗುತ್ತಿಗೆ ನೀಡುವ ಸಂಬAಧ ಕೈಗೊಂಡಿದ್ದ ೨ನೇ ಹಂತದ ಅರ್ಜಿ ಸಲ್ಲಿಕೆಯ ಅವಧಿ ಜುಲೈ ೧೫ಕ್ಕೆ ಮುಕ್ತಾಯಗೊಂಡಿದ್ದು, ಜಿಲ್ಲೆಯ ೫ ತಾಲೂಕುಗಳಲ್ಲಿ ಸೇರಿ ಒಟ್ಟು ೫.೦೦೬ ಅರ್ಜಿಗಳು ತಹಶೀಲ್ದಾರ್‌ಗಳಿಗೆ ಸಲ್ಲಿಕೆಯಾಗಿವೆ.

ಸರ್ಕಾರಿ ಜಮೀನಿನಲ್ಲಿ ಬೆಳೆಯುತ್ತಿರುವ ಪ್ಲಾಂಟೇಷನ್ ಬೆಳೆಗಳ ಜಮೀನುಗಳನ್ನು ಗುತ್ತಿಗೆ ನೀಡುವ ಸಂಬAಧ ಅರ್ಜಿಯನ್ನು ತಹಶೀಲ್ದಾರರ ಕಚೇರಿಯಲ್ಲಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿತ್ತು. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಜುಲೈ ೧೫ ಕೊನೆ ದಿನವಾಗಿತ್ತು. ಈ ಮೊದಲು ಹಾಗೂ ಪ್ರಸ್ತುತ ನೀಡಿದ್ದ ಅವಧಿಯಲ್ಲಿ ಒಟ್ಟು ೫,೦೦೬ ಅರ್ಜಿಗಳು ಬಂದಿವೆ.

ಮೊದಲು ನೀಡಿದ್ದ ಅವಧಿಯಲ್ಲಿ ೩೦೭೩ ಅರ್ಜಿ ಸ್ವೀಕಾರವಾಗಿತ್ತು. ಅನಂತರ ಅವಧಿ ವಿಸ್ತರಣೆಗೆ ಜನರಿಂದ ಮನವಿ ಬಂದ ಹಿನ್ನೆಲೆ ಸರಕಾರ ಜುಲೈ ೧೫ರ ತನಕ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿತ್ತು. ನಮೂನೆ-೯ರಲ್ಲಿ ಸಂಬAಧಪಟ್ಟ ಬೆಳೆಗಾರರು ತಾಲೂಕು ತಹಶೀಲ್ದಾರ್‌ಗೆ ಅರ್ಜಿಯನ್ನು ಸಲಿಸಿದ್ದಾರೆ.

ಕಾಫಿ, ಏಲಕ್ಕಿ, ಟೀ, ಮೆಣಸು ರಬ್ಬರ್ ಬೆಳೆಗಳನ್ನು ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಬೆಳೆಯುತ್ತಿರುವ ರೈತರಿಗೆ ೩೦ ವರ್ಷಗಳವರೆಗೆ ಗುತ್ತಿಗೆಗೆ ಪಡೆಯಲು ಅವಕಾಶವಿದ್ದು, ತಹಶೀಲ್ದಾರ್ ಹಂತದಲ್ಲಿ ಅರ್ಜಿ ಸಲ್ಲಿಸಲು ನೀಡಿದ್ದ ಸಮಯ ಮುಕ್ತಾಯಗೊಂಡಿದೆ.

ಅರ್ಜಿ ಸಲ್ಲಿಕೆ ಸಂದರ್ಭ ಸ್ವವಿವರದೊಂದಿಗೆ ಆಧಾರ್, ಪಾನ್ ಸಂಖ್ಯೆ, ಹಿಂದಿನ ೫ ವರ್ಷಗಳ ಆದಾಯ ತೆರಿಗೆ ಪಾವತಿ ವಿವರ, ಕುಟುಂಬ ಸದಸ್ಯರ ವಿವರ, ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನಿನ ವಿಸ್ತೀರ್ಣ, ಸರ್ವೆ ನಂಬರ್, ತೋಟದಲ್ಲಿರುವ ಮರಗಳ ಸಂಖ್ಯೆ, ಜಮೀನಿನ ಸರಹದ್ದು, ಅರ್ಜಿದಾರರು ಹೊಂದಿರುವ ಜಮೀನಿನ ವಿವರಗಳನ್ನು ಉಲ್ಲೇಖಿಸಿದ್ದಾರೆ.

ನಿಯಮಗಳೇನು?

೨೦೦೫ರ ಜನವರಿ ೧ ಕ್ಕೂ ಮೊದಲು ರೈತರು ಅನಧಿಕೃತವಾಗಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದು ಈಗಲೂ ಸ್ವಾಧೀನ ಹೊಂದಿರುವ ಸರ್ಕಾರಿ ಜಮೀನುಗಳನ್ನು ೩೦ ವರ್ಷಗಳವರೆಗೆ ಗುತ್ತಿಗೆಗೆ ಪಡೆಯಲು ಈ ನಿಯಮಗಳಡಿ ಸಾಧ್ಯವಿದೆ.

ಒಂದು ಕುಟುಂಬಕ್ಕೆ ಗರಿಷ್ಠ ೨೫ ಎಕರೆಗಳವರೆಗೆ ಗುತ್ತಿಗೆಗೆ ನೀಡಲು ಅವಕಾಶವಿರಲಿದೆ. ಅದಕ್ಕಿಂತ ಹೆಚ್ಚಿನ ಜಮೀನನ್ನು ಅನಧಿಕೃತವಾಗಿ ಸಾಗುವಳಿ ಮಾಡಿದ್ದರೆ,

(ಮೊದಲ ಪುಟದಿಂದ)

ಹೆಚ್ಚುವರಿ ವಿಸ್ತೀರ್ಣವನ್ನು ಸರ್ಕಾರದ ವಶಕ್ಕೆ ಒಪ್ಪಿಸಬೇಕು ಎಂಬ ಅಂಶವೂ ನಿಯಮದಲ್ಲಿದೆ.

ಪ್ರತಿ ಎಕರೆಗೆ ವರ್ಷಕ್ಕೆ ರೂ. ೧,೦೦೦ ದಿಂದ ೩,೫೦೦ರವರೆಗೂ ಗುತ್ತಿಗೆ ಶುಲ್ಕ ವಿಧಿಸುವ ನಿಯಮವಿದ್ದು, ಗುತ್ತಿಗೆಗೆ ಪಡೆದ ರೈತರು ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ಮಾತ್ರವೇ ಮುಂದುವರಿಸಲು ಅವಕಾಶ ಮಾಡಿಕೊಡಲಾಗಿದೆ. ಉಪ ಗುತ್ತಿಗೆಗೆ ನೀಡಲು ಅವಕಾಶ ಇರುವುದಿಲ್ಲ. ಗುತ್ತಿಗೆಗೆ ಪಡೆದ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಮಾತ್ರವೇ ಬೆಳೆಯಬೇಕು. ಅಂತಹ ಜಮೀನುಗಳಲ್ಲಿ ಇರುವ ಮರಗಳು ಸರ್ಕಾರದ ಸ್ವತ್ತುಗಳು ಎಂಬ ಅಂಶವೂ ಸರಕಾರ ರೂಪಿಸಿದ ಕರಡಿನಲ್ಲಿದೆ. ಗುತ್ತಿಗೆಗೆ ಪಡೆದ ಜಮೀನುಗಳನ್ನು ಆಧಾರವಾಗಿಟ್ಟು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿAದ ಸಾಲ ಪಡೆಯಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟವಾಗಿದೆ.

೨೦೦೫ರ ಪೂರ್ವ ಒತ್ತುವರಿಗೆ ಮಾತ್ರ ಅನ್ವಯ

ನಿಯಮದಂತೆ ೧.೧.೨೦೦೫ರ ಪೂರ್ವ ಒತ್ತುವರಿಗೊಂಡ ಭೂಮಿಯನ್ನು ಮಾತ್ರ ಗುತ್ತಿಗೆಗೆ ಪಡೆಯಲು ಅವಕಾಶವಿದೆ.

ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ಒತ್ತುವರಿಯಾಗಿದ್ದು, ಈಗಲೂ ಆಗುತ್ತಲಿದೆ. ಭೂಕಬಳಿಕೆ ತಡೆಯುವ ನಿಟ್ಟಿನಲ್ಲಿ ೨೦೦೫ರ ಪೂರ್ವದ ಭೂಮಿಯನ್ನು ಮಾತ್ರ ಗುತ್ತಿಗೆಗೆ ನೀಡಲಾಗುತ್ತಿದೆ. ಅದಲ್ಲದೆ ಗುತ್ತಿಗೆಗೆ ನೀಡಲು ಉದ್ದೇಶಿಸಿರುವ ನಿಗದಿತ ೨೫ ಎಕರೆಗಿಂತ ಹೆಚ್ಚಿನ ಪ್ರಮಾಣದ ಜಾಗಗಳು ಕಂಡುಬAದಲ್ಲಿ ಅದನ್ನು ಸರಕಾರವೇ ಸ್ವಾಧೀನಪಡಿಸಿಕೊಳ್ಳುತ್ತದೆ.