ಮಡಿಕೇರಿ, ಜು. ೧೭: ಪ್ರಧಾನಮಂತ್ರಿ ಜನ್ ಜಾತೀಯ ಆದಿವಾಸಿ ಮಹಾ ಅಭಿಯಾನ (ಪಿ.ಎಂ. -ಜನ್‌ಮನ್) ಯೋಜನೆಯಡಿ ಜೇನುಕುರುಬ ಜನಾಂಗದವರಿಗೆ ಘಟಕ ವೆಚ್ಚ ರೂ. ೪.೫೦ ಲಕ್ಷಗಳಲ್ಲಿ ಮನೆಯನ್ನು ಮಂಜೂರು ಮಾಡಲಾಗುತ್ತಿದ್ದು, ವಸತಿ ರಹಿತ ಜೇನುಕುರುಬ ಜನಾಂಗದ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವAತೆ ಹೊನ್ನೇಗೌಡ ಅವರು ಕೋರಿದಾರೆ.
ಜೇನುಕುರುಬ ಜನಾಂಗದವರನ್ನು ಹೊರತುಪಡಿಸಿ ಇತರೆ ಪರಿಶಿಷ್ಟ ಪಂಗಡದ ಜನಾಂಗದವರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಿವೇಶನ ರಹಿತ ಮತ್ತು ವಸತಿ ರಹಿತ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವAತೆ ತಿಳಿಸಿದ್ದಾರೆ.