ಮುಳ್ಳೂರು, ಜು. ೧೭: ಸಮೀಪದ ಆಲೂರುಸಿದ್ದಾಪುರ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಆಕ್ಸಿಸ್ ಬ್ಯಾಂಕ್ ಹಾಗೂ ವಿವಿಧ ಕೈಗಾರಿಕಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐಟಿಐ ಕೇಂದ್ರದಲ್ಲಿ ಐಟಿಐ, ಡಿಪ್ಲೊಮಾ, ಪಿಯುಸಿ ಪಾಸಾಗಿರುವ ನಿರುದ್ಯೋಗಿ ಹಾಗೂ ಪದವಿ ಮತ್ತು ಸ್ನಾತಕೋತ್ತರ ನಿರುದ್ಯೋಗಿ ಪದವೀಧರ ಅಭ್ಯರ್ಥಿಗಳಿಗೆ ‘ಕ್ಯಾಂಪಸ್ ಡ್ರೆöÊವ್’ ಉದ್ಯೋಗ ಮೇಳವನ್ನು ನಡೆಸಲಾಯಿತು. ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಯೂನಿಯನ್ ಬ್ಯಾಂಕ್ ಮುಂತಾದ ರಾಷ್ಟಿçÃಕೃತ ಬ್ಯಾಂಕ್ ಸೇರಿದಂತೆ ಆಕ್ಸಿಸ್ ಬ್ಯಾಂಕ್ ಮುಂತಾದ ಖಾಸಗಿ ಬ್ಯಾಂಕ್ ಅಧಿಕಾರಿಗಳು ಯಾಜಕಿ, ಟೊಯೊಟೋ ಕೈಗಾರಿಕಾ ಸಂಸ್ಥೆ ಮತ್ತು ವಿವಿಧ ಎಲಾಕ್ಟಾçನಿಕ್ ಸಂಸ್ಥೆಗಳ ಅಧಿಕಾರಿಗಳು ಅಭ್ಯರ್ಥಿಗಳ ಸಂದರ್ಶನ ನಡೆಸಿದರು. ಉದ್ಯೋಗ ಮೇಳದಲ್ಲಿ ವಿವಿಧ ಕಡೆಯಿಂದ ಆಗಮಿಸಿದ್ದ ನೂರಾರು ಅಭ್ಯರ್ಥಿಗಳು ಹಾಜರಾಗಿದ್ದರು.