* ಜಿಲ್ಲಾ ಸರಾಸರಿ ೭೧.೦೩ ಇಂಚು

* ತಲಕಾವೇರಿಗೆ ೨೦೦ ಇಂಚಿಗೂ ಅಧಿಕ

ಮಡಿಕೇರಿ, ಜು. ೧೮: ಪ್ರಸ್ತಕ ವರ್ಷ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆ ದಾಖಲಾಗಿದೆ. ತಲಕಾವೇರಿ ವಿಭಾಗದಲ್ಲಿ ೨೦೦ ಇಂಚುಗಳಿಗೂ ಅಧಿಕ ಮಳೆಯಾಗಿದ್ದರೆ, ಜಿಲ್ಲೆಯ ಇನ್ನಿತರ ಹಲವು ಭಾಗಗಳಲ್ಲೂ ಸುಮಾರು ೧೩೦ ರಿಂದ ೧೫೦ ಇಂಚುಗಳಷ್ಟು ಮಳೆ ಸುರಿದಿದೆ.

ಮಡಿಕೇರಿ ತಾಲೂಕಿನಲ್ಲೂ ಇದೀಗ ಮಳೆ ಶತಕದ ಗಡಿ ದಾಟಿದೆ. ಮಡಿಕೇರಿ ತಾಲೂಕಿನಲ್ಲಿ ಈ ತನಕ ೧೦೬.೬೦ ಇಂಚುಗಳಷ್ಟು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ತಾಲೂಕಿನಲ್ಲಿ ಈ ಅವಧಿಯಲ್ಲಿ ೮೧.೭೬ ಇಂಚು ಮಳೆಯಾಗಿತ್ತು. ಪ್ರಸಕ್ತ ವರ್ಷ ಮಳೆಯ ಪ್ರಮಾಣ ೨೪.೮೪ ಇಂಚುಗಳಷ್ಟು ಹೆಚ್ಚಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೦೦ ಇಂಚು ದಾಟಿದ ಮಳೆ

(ಮೊದಲ ಪುಟದಿಂದ)

ಜಿಲ್ಲಾ ಸರಾಸರಿ ೭೧.೦೩ ಇಂಚು

ಪ್ರಸಕ್ತ ವರ್ಷ ಜನವರಿಯಿಂದ ಈತನಕ ಜಿಲ್ಲೆಯಲ್ಲಿ ಸರಾಸರಿ ೭೧.೦೩ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ೫೬.೮೯ ಇಂಚು ಮಳೆಯಾಗಿದ್ದು, ಈ ಬಾರಿ ೧೪.೧೪ ಇಂಚುಗಳಷ್ಟು ಹೆಚ್ಚಾಗಿದೆ.

ವೀರಾಜಪೇಟೆ ತಾಲೂಕಿನಲ್ಲೂ ಪ್ರಸಕ್ತ ವರ್ಷ ೧೦.೨೬ ಇಂಚು ಮಳೆ ಹೆಚ್ಚು ಸುರಿದಿದೆ. ಕಳೆದ ವರ್ಷ ೫೫.೯೦ ಇಂಚು ಮಳೆಯಾಗಿದ್ದರೆ, ಈ ಬಾರಿ ೬೬.೧೬ ಇಂಚುಗಳಷ್ಟಾಗಿದೆ.

ಪೊನ್ನAಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ ೬೮.೪೨ ಇಂಚು, ಸೋಮವಾರಪೇಟೆ ೭೭.೭೫ ಹಾಗೂ ಕುಶಾಲನಗರ ತಾಲೂಕಿನಲ್ಲಿ ೩೬.೧೭ ಇಂಚು ಮಳೆಯಾಗಿದೆ. ಕಳೆದ ವರ್ಷ ಪೊನ್ನಂಪೇಟೆ ತಾಲೂಕಿನಲ್ಲಿ ೫೪.೫೮, ಸೋಮವಾರಪೇಟೆ ೫೪.೬೦ ಹಾಗೂ ಕುಶಾಲನಗರ ತಾಲೂಕಿನಲ್ಲಿ ೩೭.೬೩ ಇಂಚು ಮಳೆಯಾಗಿತ್ತು.

ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೦.೫೦ ಇಂಚು ಮಳೆಯಾಗಿದೆ. ಸದ್ಯದ ಸನ್ನಿವೇಶದಲ್ಲಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆಯಿದ್ದ ಹಿನ್ನೆಲೆ ಗುರುವಾರ ಹಾಗೂ ಶುಕ್ರವಾರದಂದು ಶಾಲಾ - ಕಾಲೇಜುಗಳಿಗೆ ರಜೆ ನೀಡಲಾಗಿತ್ತು.