ಕೂಡಿಗೆ, ಜು. ೧೮: ಹಾರಂಗಿ ಅಣೆಕಟ್ಟೆಯಿಂದ ನಾಲೆಯ ಮುಖ್ಯ ಕ್ರೆಸ್ಟ್ ಗೇಟ್‌ಗೆ ಸಂಪ್ರದಾಯದAತೆ ಪೂಜೆ ಸಲ್ಲಿಸಿ ತಾ. ೧೭ರ ಸಂಜೆ ಮುಖ್ಯ ನಾಲೆಯ ಮೂಲಕ ಒಂದು ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಪ್ರಥಮವಾಗಿ ೫೦೦ಕ್ಯೂಸೆಕ್ಸ್ ನೀರನ್ನು ಹರಿಸಿ, ನಂತರ ಕೆಲವು ಗಂಟೆಗಳ ನಂತರ ೧ಸಾವಿರ ಕ್ಯೂಸೆಕ್ಸ್ ಗೆ ಏರಿಕೆ ಮಾಡಿ ನಾಲೆಯ ಮೂಲಕ ನೀರನ್ನು ರೈತರ ಖಾರೀಫ್ ಬೆಳೆಗೆ ಹರಿಸಲಾಯಿತು.

ಈ ಸಂದರ್ಭ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ. ಕೆ. ಪುಟ್ಟಸ್ವಾಮಿ, ಅಣೆಕಟ್ಟೆಯ ಉಸ್ತುವಾರಿ ಇಂಜಿನಿಯರ್ ಸೌಮ್ಯ, ಡಿ.ಡಿ. ಕಿರಣ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.