ನಾಪೋಕ್ಲು, ಜು. ೧೭: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆವರಣದಲ್ಲಿ ಕಾಡಾನೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಕಾಡಾನೆಯ ದಾಂಧಲೆ ದೃಶ್ಯಾವಳಿ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಕಕ್ಕಬ್ಬೆ ಗ್ರಾಮದಲ್ಲಿ ಕಾಡಾನೆ ಉಪಟಳ ಅಧಿಕವಾಗುತ್ತಿದ್ದು, ಕೃಷಿ ಫಸಲು ಹಾಳಾಗುತ್ತಿದೆ. ಈ ನಡುವೆ ರಾತ್ರಿ ವೇಳೆಯಲ್ಲಿ ಬಂದ ಆನೆ ದೇವಾಲಯದ ಮುಖದ್ವಾರದ ಸಮೀಪದ ದೇವರ ಕಟ್ಟೆಯಲ್ಲಿರುವ ಹಲಸಿನ ಮರದಿಂದ ಕೆಲವು ಹಲಸಿನ ಹಣ್ಣುಗಳನ್ನು ಬೀಳಿಸುವ ಪ್ರಯತ್ನ ನಡೆಸಿದೆ. ನಾಲ್ಕು ನಾಡು ವ್ಯಾಪ್ತಿಯಲ್ಲಿ ಕಾಡಾನೆಗಳ ನಿರಂತರ ಉಪಟಳದಿಂದ ಗ್ರಾಮಸ್ಥರು, ರೈತರು ನಷ್ಟ ಅನುಭವಿಸುವುದರ ಜೊತೆಗೆ ಜೀವ ಭಯದಲ್ಲಿದ್ದಾರೆ. ಅರಣ್ಯ ಇಲಾಖೆ ಈ ಸಂಬAಧ ಶಾಶ್ವತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-ದುಗ್ಗಳ