ವೀರಾಜಪೇಟೆ, ಜು. ೧೭: ತಾ. ೧೬ ರಿಂದ ಕಕ್ಕಡ(ಆಟಿ)ಮಾಸ ಪ್ರಾರಂಭವಾಗಿದ್ದು, ಇದರ ಅಂಗವಾಗಿ ಕೆದಮುಳ್ಳೂರು ಮಹಾದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಗ್ರಾಮಸ್ಥರ ಪರವಾಗಿ ದೇವಾ ಲಯದ ವತಿಯಿಂದ (ಕಕ್ಕಡ ತೆಂಗೆ) ಹಣ್ಣುಕಾಯಿ ಸಮರ್ಪಿಸಲಾಯಿತು. ಬಳಿಕ ಪ್ರಾರ್ಥನೆ ನೆರವೇರಿತು. ಅರ್ಚಕ ರಾಧಾಕೃಷ್ಣ ಅವರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.