ಸೋಮವಾರಪೇಟೆ,ಜು.೧೮: ಸೋಮವಾರಪೇಟೆ ತಾಲೂಕಿನ ಕಾಫಿ ಮಂಡಳಿಗೆ ಸ್ವಂತ ಕಟ್ಟಡ ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ಭಾರತ ಕಾಫಿ ಮಂಡಳಿಯ ಗಮನ ಸೆಳೆಯುವಂತೆ ಯಂಗ್ ಇಂಡಿಯನ್ ಫಾಮರ್ಸ್ ಅಸೋಸಿ ಯೇಷನ್ನಿಂz À(ಯಿಫಾ) ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮೈಸೂರಿನಲ್ಲಿರುವ ಸಂಸದರ ಕಚೇರಿಯಲ್ಲಿ ಯದುವೀರ್ ಅವರನ್ನು ಭೇಟಿ ಮಾಡಿದ ಯಂಗ್ ಇಂಡಿಯನ್ ಫಾಮರ್ಸ್ ಅಸೋಸಿಯೇಷನ್ನ ಜಿಲ್ಲಾಧ್ಯಕ್ಷ ಶ್ರೀನಿಧಿ ಲಿಂಗಪ್ಪ ಹಾಗೂ ಪದಾಧಿಕಾರಿಗಳು, ಸೋಮವಾರಪೇಟೆ ಕಾಫಿ ಮಂಡಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ಕಾಫಿ ಮಂಡಳಿ ಕಚೇರಿಗೆ ಸ್ವಂತ ಕಟ್ಟಡವಿಲ್ಲದಿರುವ ಹಿನ್ನೆಲೆ ಸ್ವಂತ ನಿವೇಶನ ಹಾಗೂ ಕಚೇರಿ, ಅಧಿಕಾರಿಗಳ ವಸತಿ ಗೃಹ, ಪ್ರಯೋಗಾಲಯ, ಸಭಾಂಗಣ, ಅತಿಥಿ ಗೃಹ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕಾಫಿ ಮಂಡಳಿಯೊAದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶ್ರೀನಿಧಿ ಲಿಂಗಪ್ಪ ಅವರು ಸಂಸದರ ಗಮನ ಸೆಳೆದರು.
ಕಾಫಿ ಉತ್ಪಾದನೆಯು ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕೊಡಗು ಜಿಲ್ಲೆಯ ಶೇ. ೯೯ರಷ್ಟು ರೈತರು ಕಾಫಿ ಬೆಳೆಗಾರರಾಗಿದ್ದಾರೆ. ಆದರೆ ಸೋಮವಾರಪೇಟೆಯಲ್ಲಿ ದಶಕಗಳಿಂದ ಕಾರ್ಯನಿರ್ವ ಹಿಸುತ್ತಿರುವ ಕಾಫಿ ಮಂಡಳಿ ಕಚೇರಿಗೆ ಇನ್ನೂ ಸ್ವಂತ ಕಟ್ಟಡವಿಲ್ಲ. ಖಾಸಗಿ ಕಟ್ಟಡದಲ್ಲಿ ಬಾಡಿಗೆ ಪಾವತಿಸಿ ಕಾರ್ಯನಿರ್ವ ಹಿಸಲಾಗುತ್ತಿದೆ. ಕಾಫಿ ಕೃಷಿಕರ ಅನುಕೂಲ ಹಾಗೂ ಹಿತದೃಷ್ಟಿಯಿಂದ ಕಾಫಿ ಮಂಡಳಿಯನ್ನು ಉನ್ನತಿಕರಿಸ ಬೇಕಾದ ಅಗತ್ಯವಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು, ಶೀಘ್ರದಲ್ಲೇ ಸಂಬAಧಿಸಿದ ಕಾಫಿ ಮಂಡಳಿಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಅಸೋಸಿ ಯೇಷನ್ನ ಕಾರ್ಯದರ್ಶಿ ಸಜನ್ ಮಂದಣ್ಣ, ಪದಾಧಿಕಾರಿಗಳಾದ ಆದರ್ಶ್ ತಮ್ಮಯ್ಯ, ಪ್ರೇಮ್ಸಾಗರ್, ವಿನಯ್ ಕುಶಾಲಪ್ಪ, ಆಶಿತ್, ಜನಾರ್ದನ್, ಅಭಿಷೇಕ್ ಗೋವಿಂದಪ್ಪ, ವಿಜಯ್, ಲಕ್ಷಿö್ಮÃಕಾಂತ್ ಕೊಮಾರಪ್ಪ ಇದ್ದರು.