ಕಡಂಗ, ಜು. ೧೭: ಕಡಂಗ ಸಮೀಪದ ಕೋಡಿರ ಗದ್ದೆಯಲ್ಲಿ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರಿಕೆಟ್ ಪಂದ್ಯಾಟ ತಾ.೧೯ ಮತ್ತು ೨೦ ರಂದು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಯೂನಿಸ್ ಕಾಶಿ ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ೩೨ ತಂಡಗಳು ಪಾಲ್ಗೊಳ್ಳಲಿವೆ. ವಿಜೇತ ತಂಡಗಳಿಗೆ ಆಕರ್ಷಕ ಪಾರಿತೋಷಕ ಮತ್ತು ನಗದು ಬಹುಮಾನ ನೀಡಲಾಗುವುದೆಂದು ತಿಳಿಸಿದರು. ನೋಂದಾವಣಿಗೆ ಮೊ. ೮೨೯೬೧೩೫೧೫೮ ಸಂಖ್ಯೆಯನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ.