ಗೋಣಿಕೊಪ್ಪಲು, ಜು. ೧೭: ದಕ್ಷಿಣ ಕೊಡಗಿನ ಹುದಿಕೇರಿ, ಬೆಳ್ಳೂರು, ತಾವಳಗೇರೆ, ಕೊಣಗೇರಿ, ಟಿ.ಶೆಟ್ಟಿಗೇರಿ, ಹೈಸೊಡ್ಲೂರು, ಟಿ.ಎಸ್ಟೇಟ್ ಭಾಗಗಳಲ್ಲಿ ಕೈಗೊಂಡಿರುವ ಹುಲಿ ಸೆರೆ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿವೆ.

ಡಿಎಫ್‌ಓ ಜಗನ್ನಾಥ್ ಮಾರ್ಗದರ್ಶನ ಹಾಗೂ ಎಸಿಎಫ್ ಗೋಪಾಲ್ ನಿರ್ದೇಶನದ ಮೇರೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಶಂಕರ್ ನೇತೃತ್ವದಲ್ಲಿ ತಂಡ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತು.

ಮುಂಜಾನೆಯಿAದಲೇ ದೇವರಕಾಡು, ಅರಣ್ಯ ಪ್ರದೇಶ ಹಾಗೂ ಕಾಫಿ ತೋಟದಲ್ಲಿ ಹುಲಿ ಚಲನವಲನ ಪತ್ತೆಗಾಗಿ ತಂಡ ಹುಡುಕಾಟ ನಡೆಸಿತು.