ಐಗೂರು, ಜು. ೧೭: ಅಭ್ಯುದಯ ಸಂಸ್ಥೆ ವತಿಯಿಂದ ನೂತನ ಉಚಿತ ಕಲಿಕಾ ಕೇಂದ್ರವು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿಯ ಸೆಸ್ಕಾಂ ಇಲಾಖೆಯ ಕೇಂದ್ರ ಕಚೇರಿಯ ವ್ಯಾಪ್ತಿಯಲ್ಲಿ ಪ್ರಾರಂಭವಾಗಿದ್ದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾನಗಲ್ ಶೆಟ್ಟಳ್ಳಿ, ಸೋಮವಾರಪೇಟೆಯ ಓಎಲ್ವಿ ಆಂಗ್ಲ ಮಾಧ್ಯಮ ಶಾಲೆ, ಸೋಮವಾರಪೇಟೆ ಜ್ಞಾನವಿಕಾಸ ಶಾಲೆ, ಮತ್ತು ಸೋಮವಾರಪೇಟೆಯ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳು ಶಾಲಾ ಅವಧಿ ಮುಗಿದ ನಂತರ ಸಂಜೆ ವೇಳೆ ಕಲಿಕಾ ಕೇಂದ್ರದಲ್ಲಿ ಉಚಿತ ಶಿಕ್ಷಣ ಪಡೆಯಬಹುದಾಗಿದೆ. ಕಲಿಕಾ ಕೇಂದ್ರದಲ್ಲಿ ಅಭ್ಯುದಯದ ಶಿಕ್ಷಕಿ ಲಾವಣ್ಯ ಕಾರ್ಯನಿರ್ವಹಿಸಲಿದ್ದಾರೆ.
ಅಭ್ಯುದಯ ಸಂಸ್ಥೆಯು ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ೩,೬೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ಕೊಡಗು ಜಿಲ್ಲೆಯ ಕಾಜೂರು, ಹೊಸತೋಟ, ಬಜೆಗುಂಡಿಯಲ್ಲಿಯೂ ಉಚಿತ ಕಲಿಕಾ ಕೇಂದ್ರಗಳನ್ನು ಹೊಂದಿದೆ.