ಮುಳ್ಳೂರು, ಜು. ೧೮: ಸಮೀಪದ ಶನಿವಾರಸಂತೆ ನಮ್ಮ ಬೆಳೆಗಾರರ ಸಂಘ ಮತ್ತು ಮಲ್ಟಿಪ್ಲೆಕ್ಸ್ ಸಮೂಹ ಸಂಸ್ಥೆ ಸಹಭಾಗಿತ್ವದಲ್ಲಿ ಕಾಳುಮೆಣಸು, ಕಾಫಿ ಮತ್ತು ಅಡಿಕೆ ಕೃಷಿ ಬಗ್ಗೆ ಬೆಳೆಗಾರರಿಗೆ ತಾ. ೧೯ ರಂದು (ಇಂದು) ಬೆಳಿಗ್ಗೆ ೧೦.೩೦ ರಿಂದ ಶನಿವಾರಸಂತೆ ಗುಡುಗಳಲೆ ಆರ್.ವಿ. ಕಲ್ಯಾಣ ಮಂಟಪದಲ್ಲಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಗಿದೆ.

ಕೆಜಿಎಫ್‌ನ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಪಿ. ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಾಹಿತಿ ಕಾರ್ಯಾಗಾರದಲ್ಲಿ ಕಾಫಿ, ಕಾಳುಮೆಣಸು ಮತ್ತು ಅಡಿಕೆ ಕೃಷಿ ಕುರಿತು ಬೆಂಗಳೂರಿನ ಹಿರಿಯ ವಿಜ್ಞಾನಿ ಮತ್ತು ಸಿ.ಎಂ.ಎA ಮಲ್ಟಿಪ್ಲೆಕ್ಸ್ ಅಗ್ರಿ ಸಂಸ್ಥೆಯ ಡಾ. ನಾರಾಯಣಸ್ವಾಮಿ, ಫಾರ್ಮರ್ ಚಾಟ್ ಕುರಿತು ಡಿಜಿಟಲ್ ಗ್ರೀನ್ ಸಂಸ್ಥೆಯ ಅಶೋಕ್ ಕುಮಾರ್, ಐಸಿಸಿಆರ್‌ಎಲ್ ಯೋಜನೆ ಕುರಿತು ಎಸ್‌ಎಸ್‌ಆರ್‌ಡಿಪಿ ಮತ್ತು ಕಾರ್ಯಕ್ರಮ ವ್ಯವಸ್ಥಾಪಕ ಬಿ. ಗಿರೀಶ್ ಇವರುಗಳು ಬೆಳೆಗಾರರಿಗೆ ಮಾಹಿತಿ ನೀಡಲಿದ್ದಾರೆ.