ಮಡಿಕೇರಿ, ಜು. ೧೮: ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಟ್ಟಗೇರಿ ಪಂಚಾಯತ್‌ಗೆ ಸೇರಿದ ಅರ್ವತ್ತೋಕ್ಲು ಹೆರವನಾಡು ಸಂಪರ್ಕಿಸುವ ನೂತನ ರಸ್ತೆ ಸರ್ವೆ ಕಾರ್ಯವನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಣ್ಣ ಮತ್ತು ಸಹಾಯಕ ಅಭಿಯಂತರರಾದ ರಘು ಅವರ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಿತು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಭಾಗಮಂಡಲ ಮುಖ್ಯರಸ್ತೆಯ ಅಪ್ಪಂಗಳದಿAದ ಅರ್ವತ್ತೋಕ್ಲು ಗ್ರಾಮಕ್ಕೆ ಎರಡು ಕಿ.ಮೀ ಉದ್ದದ ರಸ್ತೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಣ್ಣ ಮಾಹಿತಿ ನೀಡಿದರು. ಡಿಸೆಂಬರ್ ಅಂತ್ಯದ ಒಳಗೆ ನೂತನ ರಸ್ತೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಕಳೆದ ಮೂರು ದಶಕಗಳಿಂದ ಈ ಭಾಗದ ಜನರು ಕಂಡ ಕನಸು ಎ.ಎಸ್. ಪೊನ್ನಣ್ಣ ಅವರಿಂದ ನನಸಾಗುತ್ತಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹೇಳಿದರು.

ಸ್ಥಳೀಯರಾದ ಪೂಜಾರಿರ ಹರ್ಷಕೇಶವ ಮಾತನಾಡಿ, ಇದೊಂದು ಬಹುಪಯೋಗಿ ರಸ್ತೆಯಾಗಿದ್ದು ತಮ್ಮ ಬೇಡಿಕೆಗೆ ಸೂಕ್ತ ಸ್ಪಂದನ ನೀಡಿದ ಪೊನ್ನಣ್ಣ ಅವರಿಗೆ ಈ ಭಾಗದ ಜನತೆ ಆಬಾರಿಯಾಗಿದ್ದಾರೆ ಎಂದರು.

ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಕೇಟೋಳಿ ಮೋಹನ್ ರಾಜ್, ಪ್ರಮುಖರಾದ ಪೂಜಾರಿರ ಪ್ರದೀಪ್ ಕುಮಾರ್, ಬಾಳಾಡಿ ಪ್ರತಾಪ್ ಕುಮಾರ್, ಮುಂಜಾAದಿರ ಸದಾ, ಗೋವಿಂದಮ್ಮನ ಕುಟ್ಟಪ್ಪ, ತಳೂರು ಉದಯ್ ಕುಮಾರ್, ಶಂಕರ ನಾರಾಯಣ ಹೆಬ್ಬಾರ್ ಸೇರಿದಂತೆ ಸ್ಥಳೀಯರು ಸರ್ವೆ ಕಾರ್ಯ ನಡೆಯುವಾಗ ಉಪಸ್ಥಿತರಿದ್ದರು.