ಮಡಿಕೇರಿ, ಜು. ೧೮: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಆಯೋಜಿತ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಕೊಡಗಿನವರಾದ ನೈರಾ ಬೋಪಣ್ಣ ಕಾಳೇಂಗಡ ಅವರು ಭಾಗವಹಿಸಿ ಸಾಧನೆಗೈದಿದ್ದಾರೆ.
೨೦೦ ಮೀಟರ್ ಬ್ಯಾಕ್ ಸ್ಟೊçÃಕ್ ಹಾಗೂ ೨೦೦ ಮೀಟರ್ ಫ್ರೀ ಸ್ಟೆöÊಲ್, ವಿಭಾಗದಲ್ಲಿ ಚಿನ್ನದ ಪದಕ, ೪೦೦ ಮೀಟರ್ ಫ್ರೀ ಸ್ಟೆöÊಲ್, ೧೦೦ ಮೀಟರ್ ಬ್ಯಾಕ್ ಸ್ಟೊçÃಕ್ ಹಾಗೂ ೧೦೦ ಮೀಟರ್ ಫ್ರೀ ಸ್ಟೆöÊಲ್, ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದು ಒಟ್ಟು ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಈ ಮೂಲಕ ಸಬ್ ಜೂನಿಯರ್ ವಿಭಾಗದಲ್ಲಿ ಓವರಾಲ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ ೪ ರಿಂದ ೬ರ ವರೆಗೆ ಬೆಂಗಳೂರಿನಲ್ಲಿ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲ್ಪಟ್ಟಿರುವ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗೆ ಈ ಮೂಲಕ ಇವರು ಆಯ್ಕೆಯಾಗಿದ್ದಾರೆ. ಅಲ್ಲದೆ ೪*೫೦ ಮೆಡ್ಲಿಂಗ್ ರಿಲೇ ಹಾಗು ೪*೫೦ ಫ್ರೀ ಸ್ಟೆöÊಲ್ ರಿಲೇ ತಂಡಗಳಲ್ಲಿಯೂ ಕರ್ನಾಟಕದ ಪರ ಭಾಗವಹಿಸಲಿದ್ದಾರೆ. ಇವರು ಕುಟ್ಟ ನಿವಾಸಿ ಕಾಳೇಂಗಡ ಬೋಪಣ್ಣ - ನಿರಳ ಬೋಪಣ್ಣ ದಂಪತಿಯ ಪುತ್ರಿ.