ಮೂರ್ನಾಡು, ಜು. ೧೯: ಲಯನ್ಸ್ ಕ್ಲಬ್ಬಿನ ಸದಸ್ಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಗಳೂರಿನ ಲಯನ್ ಪಿ.ವಿ. ಅನಿಲ್ ಕುಮಾರ್ ಹೇಳಿದರು.

ಮೂರ್ನಾಡಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ಕ್ಲಬ್ಬಿನ ೨೦೨೫-೨೬ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿ ಅಮ್ಮಾಟಂಡ ಚಂಗಪ್ಪ, ಕಾರ್ಯದರ್ಶಿಯಾಗಿ ಪಳಂಗAಡ ಕಾವೇರಪ್ಪ ಮತ್ತು ಖಜಾಂಚಿಯಾಗಿ ಮಾಳೇಟಿರ ಮೇದಪ್ಪ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.

ಅನಿಲ್ ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿ ಪದಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಬಡುವಂಡ ಕನ್ನು ಅಪ್ಪಚ್ಚು, ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಖಜಾಂಚಿ ಬಡುವಂಡ ಅರುಣ್ ಅಪ್ಪಚ್ಚು, ವಲಯಾಧ್ಯಕ್ಷ ಬಡುವಂಡ ವಿಂದ್ಯಾ ಗಣಪತಿ, ಪ್ರಾಂತೀಯ ಅಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಸಂಪುಟದ ಸುಮನ್ ಬಾಲಚಂದ್ರ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕ್ಲಬ್‌ಗಳ ಸದಸ್ಯರು ಪಾಲ್ಗೊಂಡಿದ್ದರು.