ವೀರಾಜಪೇಟೆ, ಜು. ೧೯: ಪಟ್ಟಣದಲ್ಲಿರುವ ಸಂತ ಅನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜಾ ಹಾಗೂ ಉಪಾಧ್ಯಕ್ಷರಾಗಿ ನೆಲ್ಸನ್ ಈ. ಪಿ. ಅವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಇತರ ಸದಸ್ಯರುಗಳ ಒಪ್ಪಿಗೆಯೊಂದಿಗೆ ಸರ್ವಾನುಮತದಿಂದ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷ ಚಾರ್ಲ್ಸ್ ಡಿಸೋಜಾ ಮಾತನಾಡಿ, ಸಹಕಾರ ಸಂಘ ಪ್ರಸ್ತುತ ೪೦೦ಕ್ಕೂ ಅಧಿಕ ಪಡಿತರದಾರರನ್ನು ಹೊಂದಿದ್ದು ಅಕ್ಕಿಯನ್ನು ಪಡಿತರದಾರರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಇನ್ನು ಮುಂದಿನ ದಿವಸಗಳಲ್ಲಿ ಕೃಷಿಯನ್ನು ಉತ್ತೇಜಿಸುವ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಸರ್ವ ಸದಸ್ಯರ ಹಾಗೂ ಪಡಿತರದಾರರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮರ್ವಿನ್ ಲೋಬೋ, ಜೋಕಿಂ ರಾಡ್ರಿಗಸ್, ಮಾರ್ಟಿನ್ ಬರ್ನಾಡ್, ಜೋಸೆಫ್, ಮೆಟಿಲ್ಡ ಡಿಸೋಜಾ, ಸಂಘದ ಇತರ ಸದಸ್ಯರುಗಳು ಉಪಸ್ಥಿತರಿದ್ದರು.