x

ಮಡಿಕೇರಿ, ಜು. ೧೯: ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪ್ರೌಢಶಾಲಾ ಶಿಕ್ಷಕರನ್ನು ಬಿಎಲ್‌ಒ ಕರ್ತವ್ಯದಿಂದ ವಿನಾಯಿತಿ ನೀಡಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಶಿಕ್ಷಕರಿಗೆ ಶಾಲಾ ಪಾಠ ಪ್ರವಚನಗಳ ಹೆಚ್ಚು ಕಾರ್ಯಭಾರವಿರುವುದರಿಂದ ಬಿಎಲ್‌ಓ ಆಗಿ ಕರ್ತವ್ಯ ನಿಭಾಯಿಸುವುದು ಕಷ್ಟ ಸಾಧ್ಯವಾಗುತ್ತದೆ. ಶಿಕ್ಷಣ ಇಲಾಖೆಯ ಕರ್ತವ್ಯವನ್ನು ಹೊರತುಪಡಿಸಿ ಯಾವುದೇ ಇನ್ನಿತರ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಶಿಕ್ಷಕರಿಗೆ ನೀಡದಂತೆ ಕಂದಾಯ ಇಲಾಖೆ ಮತ್ತು ತಹಶೀಲ್ದಾರ್ ಅವರ ಗಮನಕ್ಕೆ ತರಬೇಕೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಮಡಿಕೇರಿ ತಾಲೂಕಿನ ಅಧ್ಯಕ್ಷ ರವಿಕೃಷ್ಣ, ಸಂಘದ ಪುಷ್ಪ, ವನಿತಾ ಮತ್ತು ಐರಿನ್ ಉಷ ಇನ್ನಿತರ ಶಿಕ್ಷಕರು ಹಾಜರಿದ್ದರು.