ವೀರಾಜಪೇಟೆ: ಶಾಲೆಯ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕುರಿತು ಅರಿಯಬೇಕು ಮತ್ತು ಮುಂದಿನ ಆಯ್ಕೆಗೆ ಸನ್ನದ್ಧರಾಗಬೇಕು ಎಂದು ಪುತ್ತೂರು ಅಂಬಿಕಾ ಕಾಲೇಜಿನ ಭೌತಶಾಸ್ತç ವಿಭಾಗದ ಉಪನ್ಯಾಸಕ ಪ್ರದೀಪ್ ಕೆ.ವೈ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ವೀರಾಜಪೇಟೆ ವತಿಯಿಂದ ಶಾಲೆಯ ಸಭಾಂಗಣದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಶಾಲಾ ಶಿಕ್ಷಣದ ನಂತರದ ಅವಕಾಶದ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರದೀಪ್ ಅವರು, ಶಾಲಾ ದಿನಗಳಲ್ಲಿ ವಿಷಯಗಳನ್ನು ಅರಿತುಕೊಳ್ಳುವ ತವಕದಲ್ಲಿ ವಿದ್ಯಾರ್ಥಿಗಳು ಕೇಂದ್ರೀಕೃತವಾಗಿರುತ್ತಾರೆ. ಇಲ್ಲಿ ಪೋಷಕರು ಮಕ್ಕಳ ಆಸಕ್ತಿಯ ಬಗ್ಗೆ ಹೆಚ್ಚು ಗಮನಹರಿಸುವಂತಾಗಬೇಕು. ಹಲವು ವಿದ್ಯಾರ್ಥಿಗಳಿಗೆ ಶಾಲೆ ವಿದ್ಯಾಭ್ಯಾಸ ಮುಗಿದ ಬಳಿಕ ಕಾಲೇಜು ವಿಷಯಗಳ ಬಗ್ಗೆ ಗೊಂದಲಗಳು ಮೂಡುವುದು ಸಹಜ. ಪೋಷಕರ ಒತ್ತಡ, ಸಮಾಜದ ಗೌರವಕ್ಕೆ, ಶಾಲಾ ಸ್ನೇಹಿತರು ಆಯ್ಕೆ ಮಾಡುವ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಂದುವೆರೆಸುವ ನಿರ್ಧಾರವನ್ನು ಕೆಲವರು ತೆಗೆದುಕೊಳ್ಳುತ್ತಾರೆ.

ವಿದ್ಯಾರ್ಥಿಗಳು ಸ್ಥಿರ ಮನಸ್ಸಿನಿಂದ ಬಾಹ್ಯ ಒತ್ತಡಕ್ಕೆ ಮಣಿಯದೆ ವಿಷಯ ಆಯ್ಕೆಗೆ ಮುಂದಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶಕ್ತರಾಗಿರಬೇಕು. ಹಿರಿಯರಿಂದ ಶೈಕ್ಷಣಿಕ ಮಾರ್ಗದರ್ಶನ ಮುಖ್ಯ ಎಂದು ಹೇಳಿದರು.

ಪ್ರಗತಿ ಶಾಲೆಯ ಆಡಳಿತಾಧಿಕಾರಿಗಳಾದ ಮಾದಂಡ ತಿಮ್ಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಾಗಾರಗಳು ಪ್ರತಿವರ್ಷ ನಡೆಯುವಂತಾ ಗಬೇಕು. ವಿದ್ಯಾರ್ಥಿಗಳು ಕಲಿಕೆಗೆ ಮಾತ್ರ ಸೀಮಿತವಾಗದೇ ಭವಿಷ್ಯ ನಿರ್ಮಾಣ ಮಾಡುವ ವಿಷಯಗಳಿಗೆ ಒತ್ತು ನೀಡುವಂತಾಗಬೇಕು. ಒತ್ತಡದಿಂದ ಯಾವುದನ್ನೂ ಗಳಸಲು ಅಸಾಧ್ಯ. ಆದರೆ ತಿಳುವಳಿಕೆ, ಆಸಕ್ತಿ ಮತ್ತು ಕಲಿಯುವ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಕಲಿತಲ್ಲಿ ಗುರಿ ಹೊಂದಲು ಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ಅಂಬಿಕ ಕಾಲೇಜಿನ ಪ್ರಾಂಶುಪಾಲ ಸತ್ಯಜೀತ್, ಪ್ರಗತಿ ಶಾಲೆಯ ವ್ಯವಸ್ಥಾಪಕಿ ಸುಷ್ಮಾ ತಿಮ್ಮಯ್ಯ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಪ್ರತಿಮಾ ಉಪಸ್ಥಿತರಿದ್ದರು.

ಪ್ರಗತಿ ಶಾಲೆಯ ವಿದ್ಯಾರ್ಥಿ ದಿಯಾ, ಮೊಹಮ್ಮದ್ ಹರ್ಷ ಮತ್ತು ಶೈಮ ಕಾರ್ಯಕ್ರಮ ನಿರೂಪಿಸಿದರು. ಶೈಮಾ ಸ್ವಾಗತಿಸಿ, ಮೊಹಮ್ಮದ್ ಹರ್ಷ ವಂದಿಸಿದರು. ಕಾರ್ಯಾಗಾರದಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸಿಬ್ಬಂದಿಗಳು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆಯ ರೋಟರಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದವಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಸೈನಿಕರಾದ ಚಪ್ಪಂಡ ಹರೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ವಿದ್ಯಾರ್ಥಿಗಳು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಶಿಸ್ತುಬದ್ಧವಾದ ಜೀವನವನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆ ತಾಲೂಕಿನ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಬಿಂದು ಕೆ.ಆರ್. ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಪರಿಣಾಮ ಬೀರುತ್ತವೆ. ನಾಯಕರು ಇತರರಿಗೆ ಪ್ರೇರಣೆಯಾಗಬೇಕು. ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಯುವ ಸಂಸತ್ತು, ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಮುಂತಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ರೋಟರಿ ಸಂಸ್ಥೆಯ ಅಧ್ಯಕ್ಷ ಬಿ.ಬಿ. ಮಾದಪ್ಪ, ಕಾರ್ಯದರ್ಶಿ ಗಗನ್ ಗಣಪತಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಿಶಾಲಾಕ್ಷಿ ಮತ್ತು ಹಸೀನಾ ಉಪಸ್ಥಿತರಿದ್ದರು. ಶಿಕ್ಷಕರ ಮಾರ್ಗದರ್ಶನ ದಲ್ಲಿ ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ನಿರ್ವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸುವ ಸಲುವಾಗಿ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆ ಮಾಡಲು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಚುನಾವಣೆ ನಡೆಯಿತು.

ವಿದ್ಯಾರ್ಥಿಗಳು ಎಲೆಕ್ಟಾçನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಈ ಸಂದರ್ಭದಲ್ಲಿ ಚುನಾವಣೆಯ ಮತಗಟ್ಟೆ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು., ಸಹ ಅಧಿಕಾರಿಯಾಗಿ ಉಷಾ ಬಿ.ಪಿ. ಹಾಗೂ ಭಾಗ್ಯ ಬಿ.ಡಿ. ಕಾರ್ಯನಿರ್ವಹಿಸಿದರು.

ಶಾಲಾ ಸಂಸತ್ತು ಚುನಾವಣೆಯಲ್ಲಿ ಶಾಲಾ ನಾಯಕನಾಗಿ ಕನ್ನಂಬಿರ ಜಿ. ಭೀಮಯ್ಯ, ಉಪ ನಾಯಕಿಯಾಗಿ ಬೊವ್ವೇರಿಯಂಡ ಹನ್ಸಿಕ ಪೊನ್ನಪ್ಪ, ಕ್ರೀಡಾ ನಾಯಕಿಯಾಗಿ ತನ್ಯ ರೈ ಬಿ.ಎಸ್., ಉಪ ನಾಯಕಿಯಾಗಿ ಕರ್ನಂಡ ಎಸ್. ಕೃತಿಕಾ ಅಕ್ಕಮ್ಮಾ, ಸಾಂಸ್ಕöÈತಿಕ ನಾಯಕಿಯಾಗಿ ಬೊಳ್ಳೆಪಂಡ ಬಿ. ದೀಪ್ತಿ ತಂಗಮ್ಮ, ಉಪ ನಾಯಕಿಯಾಗಿ ಕುಲ್ಲಚಂಡ ಎಸ್. ಭೂಮಿಕಾ ಬೋಜಮ್ಮ, ಆರೋಗ್ಯ ನಾಯಕಿಯಾಗಿ ಪುಚಿಮಂಡ ಯು. ತನಿಶ, ಉಪ ಆರೋಗ್ಯ ನಾಯಕಿಯಾಗಿ ರಾನೀಯ ತಸ್ಲೀನ್ ಟಿ.ಎಫ್., ಸನಾ ಕೆ.ಎಸ್., ಶಿಸ್ತಿನ ನಾಯಕಿಯಾಗಿ ಸುಹಾನಿ ರಾಜ್ ಪುರೋಹಿತ್, ಉಪ ಶಿಸ್ತಿನ ನಾಯಕಿಯಾಗಿ ನಿಧಾ ಕೆ.ಹೆಚ್., ಅಂಕುರ್ ಹೌಸ್ ಕ್ಯಾಪ್ಟನ್ ಆಗಿ ಕುಟ್ಟನ ಎಂ. ಯಶ್ಮಿತ, ಉಪನಾಯಕರಾಗಿ ಮಾತಂಡ ಎಸ್. ಹಿಮಾಂಶು ಕಾರ್ಯಪ್ಪ, ಚೇಂದಿರ ಪಿ. ದೇವಯ್ಯ, ಆರೋಹಿ ಹೌಸ್ ಕ್ಯಾಪ್ಟನ್ ಆಗಿ ಹನ ಫಲಕ್ ಎಸ್.ಎಂ., ಉಪ ನಾಯಕನಾಗಿ ಮೆರಿಯಂಡ ಎಸ್. ಬಿಷನ್ ಬಿದ್ದಪ್ಪ, ಐಕ್ಯಂ ಹೌಸ್ ಕ್ಯಾಪ್ಟನ್ ಆಗಿ ಅಪ್ಪಂಡೇರAಡ ಪಿ. ಶ್ರಾವ್ಯ ಮಾಚಮ್ಮ, ಉಪ ನಾಯಕಿಯಾಗಿ ಸಮೀಕ್ಷಾ ಹೆಚ್.ಎಸ್., ಅದ್ವೆöÊತ್ ಹೌಸ್ ಕ್ಯಾಪ್ಟನ್ ಆಗಿ ಸೃಷ್ಟಿ ಬಿ.ಎಸ್., ಉಪನಾಯಕನಾಗಿ ಯಶವಂತ್ ವಿ.ಪಿ. ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ನಾಯಕರುಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಸುದೇಶ್ ಬಿ.ಎಸ್. ಮಾತನಾಡಿ, ಈ ಒಂದು ಪದವಿ ಕೇವಲ ಪದವಿ ಮಾತ್ರವಲ್ಲ, ಗೌರವದಿಂದ ಕೂಡಿದ ಜವಾಬ್ದಾರಿಯುತ ಸೇವೆಯಾಗಿದೆ. ಇದನ್ನು ಅರಿತು ಇತರರಿಗೆ ಮಾದರಿಯಾಗಬೇಕೆಂದರು.

ಸಹ ಶಿಕ್ಷಕಿ ಭಾಗ್ಯ ಚುನಾಯಿತ ನಾಯಕರುಗಳನ್ನುದ್ದೇಶಿಸಿ ಹಿತ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾವೇರಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು. ಹಾಗೂ ಸಂಯೋಜಿಕಿ ಅಮೃತ ಅರ್ಜುನ್, ಸಹ ಶಿಕ್ಷಕಿಯವರಾದ ಗಂಗಾ ಹಾಗೂ ಮಿಝ್ಭಾ, ಕಲ್ಪ, ತಮ್ಸೀನ ಉಪಸ್ಥಿತರಿದ್ದರು.ಪೊನ್ನಂಪೇಟೆ: ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಮೂಹದ ೬ ಅಂಶಗಳ ಸಮಸ್ಯೆ ಕುರಿತು ಜಾಗೃತಿ ಮೂಡಿಸುವ ಯುವ ಸ್ಪಂದನ ಅರಿವು ಕಾರ್ಯಕ್ರಮವು ತಿತಿಮತಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನ ನಿಮಾನ್ಸ್ ಮತ್ತು ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.) ಸಹಯೋಗದಲ್ಲಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಪರಿವರ್ತಕರಾದ ಗಾಯತ್ರಿ ಮತ್ತು ಕೃತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳು ಆರೋಗ್ಯ ಮತ್ತು ಜೀವನ ಶೈಲಿಯ ಸಕಾರಾತ್ಮಕ ಅಂಶಗಳನ್ನು ಈಗಿನಿಂದಲೇ ರೂಢಿಸಿಕೊಳ್ಳಬೇಕು. ಇದರಿಂದ ಮಾತ್ರ ವ್ಯಕ್ತಿತ್ವ ಬೆಳವಣಿಗೆ ಸಾಧ್ಯ ಎಂದು ಅವರು ಒತ್ತಿಹೇಳಿದರು. ಕಾರ್ಯಕ್ರಮದಲ್ಲಿ ಸುರಕ್ಷತೆ, ಲಿಂಗತ್ವ, ಲೈಂಗಿಕತೆ ಮೊದಲಾದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಅಲ್ಲದೆ ಇದೇ ವಿಷಯಗಳ ಕುರಿತು ಪರಿವರ್ತಕರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ತಿತಿಮತಿ ಪದವಿಪೂರ್ವ ಕಾಲೇಜಿನ ಪ್ರಾಶುಪಾಲ ಆರ್. ವಿನೋದ್ ಕುಮಾರ್, ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎ.ಪಿ. ಮಂಗಳ, ಶಾಲೆಯ ದೈಹಿಕ ಶಿಕ್ಷಕ ಸಿ.ಎಂ. ರಾಘವೇಂದ್ರ ಸೇರಿದಂತೆ ಉಪನ್ಯಾಸಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕುಶಾಲನಗರ: ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲೆ ಬಿ.ಜಿ. ಶಾಂತಿ, ಮಕ್ಕಳಲ್ಲಿ ಶಿಸ್ತು ಕಾಪಾಡುವಲ್ಲಿ ಪೋಷಕರ ಪಾತ್ರ ಮಹತ್ವವಾದದ್ದೆಂದು ಹೇಳಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಣೆ ಒದಗಿಸಿದರು. ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳನ್ನು ಹೆಚ್ಚಾಗಿ ಬಳಸದಂತೆ ಜಾಗೃತಿ ವಹಿಸಬೇಕೆಂದು ಪೋಷಕರಿಗೆ ತಿಳಿಹೇಳಿದರು. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಸಮಯ ವ್ಯರ್ಥ ಮಾಡಬಾರದು. ಕಾಲೇಜಿನಲ್ಲಿ ವಿಶೇಷವಾಗಿ ಪರಿಹಾರ ಬೋಧನೆ ಹಾಗೂ ವಿಶೇಷ ತರಗತಿಗಳು ನಡೆಯುವ ಸಂದರ್ಭ ಪೋಷಕರು ತಮ್ಮ ಮಕ್ಕಳನ್ನು ಸರಿಯಾದ ಸಮಯಕ್ಕೆ ಕಾಲೇಜಿಗೆ ಕಳುಹಿಸಬೇಕೆಂದು ವಿನಂತಿ ಮಾಡಿದರು.

ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಜೇಂದ್ರ, ಉಪನ್ಯಾಸಕರಾದ ಫಿಲಿಪ್ ವಾಸ್, ಮೋಹನ್ ಕುಮಾರ್, ಗುರುಸ್ವಾಮಿ, ಕೃಪಾ, ನಾಗೇಶ್, ರಾಜು, ವೀಣಾ, ಪ್ರಶಾಂತಿ, ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಪೊನ್ನತ್‌ಮೊಟ್ಟೆಯ ಆರ್.ಎಸ್. ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಾಲಿನಿಂದ ಆಂಗ್ಲ ಮಾಧ್ಯಮಕ್ಕೆ ಚಾಲನೆ ನೀಡಲಾಯಿತು.

ಸರ್ಕಾರದ ಸೂಚನೆ ಮೇರೆಗೆ ಆರ್.ಎಸ್. ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೨೦೨೫-೨೬ನೇ ಸಾಲಿನಿಂದ ಆಂಗ್ಲ ಮಾಧ್ಯಮ ಪ್ರಾರಂಭೋತ್ಸವಕ್ಕೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕಾವೇರಿ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಕಾವೇರಿ ಅವರು, ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೂ ಆಂಗ್ಲ ಶಿಕ್ಷಣ ದೊರಕಲೆಂದು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಿದೆ.

ಈ ಶಾಲೆಯು ಹಳೆಯದಾಗಿದ್ದು, ಉತ್ತಮ ವಾತಾವರಣ ಇರುವುದರಿಂದ ಶಾಂತ ರೀತಿಯಲ್ಲಿ ವಿದ್ಯೆ ಪಡೆಯಲು ಸಹಕಾರಿಯಾಗಲಿದೆ. ಈ ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳು ಸಹಕಾರ ನೀಡುವುದರೊಂದಿಗೆ ಮೇಲ್ಮಟ್ಟಕ್ಕೆ ಈ ಶಾಲೆಯನ್ನು ಕೊಂಡೊಯ್ಯುವAತೆ ಕರೆ ನೀಡಿದರು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಚೈತ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ. ಶೌಕತ್, ಹಳೆಯ ವಿದ್ಯಾರ್ಥಿ ಗಣಪತಿ, ಸಹಶಿಕ್ಷಕರು, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾರತ ಸರಕಾರದ ರಾಷ್ಟಿçÃಯ ಪೋಷಣ್ ಮಿಷನ್ ಅಡಿಯಲ್ಲಿ ಇದರ ಉಪಕ್ರಮದ ಭಾಗವಾಗಿ ಜಾರಿಗೆ ತಂದ ಪೋಷಣ್ ಪಖ್ವಾಡ ಕಾರ್ಯಕ್ರಮ ನಡೆಯಿತು.

ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಂದAತಹ ವಿವಿಧ ಬಗೆಯ ತರಕಾರಿಗಳು, ಹಣ್ಣುಗಳು, ಸೊಪ್ಪು, ಬೇಳೆ ಕಾಳುಗಳನ್ನು ಜೋಡಿಸಿ ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಲಾಯಿತು. ಪ್ರತಿಯೊಂದು ಆಹಾರ ಪದಾರ್ಥಗಳಿಂದ ದೊರಕುವ ಪೋಷಕಾಂಶಗಳ ಬಗ್ಗೆ ಹಾಗೂ ಅವುಗಳ ಅವಶ್ಯಕತೆಗಳ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ನಂತರ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶ ಅವಶ್ಯಕತೆಗಳ ಬಗ್ಗೆ ಪ್ರಶ್ನೆ - ಉತ್ತರ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮುಖ್ಯ ಶಿಕ್ಷಕಿ ಹೆಚ್.ಆರ್. ಪ್ರೇಮಾಕುಮಾರಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ, ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಶಿಕ್ಷಕರಾದ ಪೂರ್ಣೇಶ್, ದಮಯಂತಿ, ಜಯಪ್ರದ, ಸತ್ಯಮ್ಮ, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಪೊನ್ನತ್‌ಮೊಟ್ಟೆಯ ಆರ್.ಎಸ್. ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಾಲಿನಿಂದ ಆಂಗ್ಲ ಮಾಧ್ಯಮಕ್ಕೆ ಚಾಲನೆ ನೀಡಲಾಯಿತು.

ಸರ್ಕಾರದ ಸೂಚನೆ ಮೇರೆಗೆ ಆರ್.ಎಸ್. ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೨೦೨೫-೨೬ನೇ ಸಾಲಿನಿಂದ ಆಂಗ್ಲ ಮಾಧ್ಯಮ ಪ್ರಾರಂಭೋತ್ಸವಕ್ಕೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಕಾವೇರಿ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಕಾವೇರಿ ಅವರು, ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೂ ಆಂಗ್ಲ ಶಿಕ್ಷಣ ದೊರಕಲೆಂದು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಿದೆ.

ಈ ಶಾಲೆಯು ಹಳೆಯದಾಗಿದ್ದು, ಉತ್ತಮ ವಾತಾವರಣ ಇರುವುದರಿಂದ ಶಾಂತ ರೀತಿಯಲ್ಲಿ ವಿದ್ಯೆ ಪಡೆಯಲು ಸಹಕಾರಿಯಾಗಲಿದೆ. ಈ ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳು ಸಹಕಾರ ನೀಡುವುದರೊಂದಿಗೆ ಮೇಲ್ಮಟ್ಟಕ್ಕೆ ಈ ಶಾಲೆಯನ್ನು ಕೊಂಡೊಯ್ಯುವAತೆ ಕರೆ ನೀಡಿದರು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಚೈತ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ. ಶೌಕತ್, ಹಳೆಯ ವಿದ್ಯಾರ್ಥಿ ಗಣಪತಿ, ಸಹಶಿಕ್ಷಕರು, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.ಮಡಿಕೇರಿ: ಕಾಂತೂರು-ಮುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಸ್ವತಿ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮವು ನೆರವೇರಿತು.

ಎಲ್‌ಕೆಜಿಗೆ ದಾಖಲಾದ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು. ಗ್ರಾಮ ಪಂಚಾಯಿತಿಯಿAದ ಮತ್ತು ಸಮುದಾಯದ ದಾನಿಗಳಿಂದ ಅತಿ ಹೆಚ್ಚು ಕೊಡುಗೆಗಳನ್ನು ಪಡೆದುದ್ದಕ್ಕಾಗಿ ಅಂಗನವಾಡಿ ಕಾರ್ಯಕರ್ತೆ ಚೈತ್ರ ಪಿ.ಯು. ಅವರಿಗೆ, ಸಹಾಯಕಿ ಜ್ಯೋತಿ ಹಾಗೂ ಉತ್ತಮ ಸಹಕಾರ, ಸಲಹೆ, ಮಾರ್ಗದರ್ಶನಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಸದಸ್ಯರಾದ ಮುಂಡAಡ ವಿಜಯಲಕ್ಷಿö್ಮ, ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರಿಗೆ ಬಾಲವಿಕಾಸ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಅನಿತಾ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಮಾತನಾಡಿ, ಅಂಗನವಾಡಿಯಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಪ್ರತಿಯೊಬ್ಬ ಮಕ್ಕಳನ್ನೂ ವೈಯಕ್ತಿಕವಾಗಿ ಗಮನಹರಿಸಿ ಶಿಸ್ತು, ಶಿಕ್ಷಣವನ್ನು ನೀಡುತ್ತಿದ್ದು ಎಲ್ಲಾ ಪೋಷಕರು ಮಕ್ಕಳನ್ನು ಅಂಗನವಾಡಿಗಳಿಗೆ, ಸರ್ಕಾರಿ ಶಾಲೆಗಳಿಗೆ ಸೇರಿಸುವುದರೊಂದಿಗೆ ಇತರ ಪೋಷಕರಿಗೆ ತಿಳುವಳಿಕೆ ನೀಡಲು ಕರೆ ನೀಡಿದರು.

ಗ್ರಾಮ್ ಪಂಚಾಯಿತಿ ಉಪಾಧ್ಯಕ್ಷೆ ರೇಖಾ, ಸದಸ್ಯರಾದ ವಿಜಯಲಕ್ಷಿö್ಮ, ಮೀನಾಕ್ಷಿ, ಪುಷ್ಪ, ಈರಾ ಸುಬ್ಬಯ್ಯ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆ ಅಂಗನವಾಡಿ ಕೇಂದ್ರದ ಮಕ್ಕಳಿಂದ ನೆರವೇರಿತು. ಸ್ವಾಗತ ಅಂಗನವಾಡಿ ಕಾರ್ಯಕರ್ತೆ ಪಿ.ಯು. ಚೈತ್ರ, ನಿರೂಪಣೆ ಬಾಡಗ ಅಂಗನವಾಡಿ ಕಾರ್ಯಕರ್ತೆ ಬಿ.ಬಿ. ಜಯಂತಿ, ವಂದನಾರ್ಪಣೆ ಶಾಸ್ತಿç ನಗರ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅವರಿಂದ ನೆರವೇರಿತು.ಮಡಿಕೇರಿ: ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರಿಕೆ ಗ್ರಾಮದ ರಮಾನಾಥ್ ಪಾಲ್ಗೊಂಡಿದ್ದರು. ಶಾಲೆಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಶಿಲ್ಪಾ ಪೊನ್ನಮ್ಮ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ವಂದನಾರ್ಪಣೆಯನ್ನು ವಿದ್ಯಾರ್ಥಿಗಳು ನೆರವೇರಿಸಿದರು. ರಮಾನಾಥ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಯದ ಮಹತ್ವ ಹಾಗೂ ಸಂತೋಷದ ಜೀವನವನ್ನು ಹೇಗೆ ರೂಪಿಸಿಕೊಳ್ಳಬಹುದು ಹಾಗೂ ಯಾವುದೇ ಕೆಲಸವನ್ನಾದರೂ ಶ್ರದ್ಧೆ ಭಕ್ತಿಯಿಂದ ಮಾಡಬೇಕೆಂದು ಕಿವಿ ಮಾತಾಡಿದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯರಾದ ಶೋಭಾ ಪಿ.ಕೆ. ಹಾಗೂ ಶಾಲಿನಿ ಅವರ ನೇತೃತ್ವದಲ್ಲಿ ನಡೆಸಲಾಯಿತು.ಮಡಿಕೇರಿ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಪಾಲಿಬೆಟ್ಟ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಾನೂನು ಅರಿವು ಮತ್ತು ಹದಿಹರೆಯದ ಮಕ್ಕಳ ಆರೋಗ್ಯ ಕುರಿತು ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲಿಬೆಟ್ಟ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಹೆಚ್.ಕೆ. ಮಂಜುನಾಥ್ ಪಾಲ್ಗೊಂಡು ಪೋಕ್ಸೋ ಕಾಯಿದೆ, ೧೧೨ ತುರ್ತು ಪೊಲೀಸ್ ವಾಹನ, ಮಕ್ಕಳ ಸಹಾಯವಾಣಿ, ಮಾದಕ ಪದಾರ್ಥಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು, ಮೊಬೈಲ್ ಬಳಕೆಯ ರೀತಿ, ಸೈಬರ್ ಅಪರಾಧ, ಬಾಲ ಅಪರಾಧಗಳು, ಗುಡ್ ಟಚ್-ಬ್ಯಾಡ್ ಟಚ್ ಇವುಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.

ಆರೋಗ್ಯ ಕಾರ್ಯಕರ್ತೆ ಪ್ರಮೀಳ ಮಾತನಾಡಿ, ಹದಿಹರೆಯದ ಗರ್ಬಧರಿಸುವಿಕೆ, ಆರೋಗ್ಯದ ಪರಿಣಾಮ, ದೈಹಿಕ ಬದಲಾವಣೆಗಳು, ಆರೋಗ್ಯಕರ ಮನೆ, ನಿಲಯದ ವಾತಾವರಣ, ವೈಯಕ್ತಿಕ ಸ್ವಚ್ಛತೆ ಇವುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಆರಕ್ಷಕ ಸಜಿತ್, ಆಶಾ ಕಾರ್ಯಕರ್ತೆ ಶೈಲ, ನಿಲಯದ ಮೇಲ್ವಿಚಾರಕ ಸುಮಯ್ಯ ಕೆ.ಎಂ., ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.