ಗೋಣಿಕೊಪ್ಪಲು, ಜು. ೨೦: ವೀರಾಜಪೇಟೆ ಜೈನರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದ ನೂತನ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎನ್. ರವೀಂದ್ರ ನಾಥ್ ಕಾಮತ್ ಆಯ್ಕೆಯಾಗಿದ್ದಾರೆ.
ವೀರಾಜಪೇಟೆ ದೇವಸ್ಥಾನ ಆವರಣದಲ್ಲಿ ನಡೆದ ಸಭೆಯಲ್ಲಿ ಮಾಜಿ ಅಧ್ಯಕ್ಷ ಎನ್. ಗೋಪಾಲಕೃಷ್ಣ ಕಾಮತ್ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ರವೀಂದ್ರನಾಥ್ ಕಾಮತ್ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಜೆ.ಎನ್. ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿ ಯಾಗಿ ಎನ್. ನರೇಂದ್ರ ಕಾಮತ್, ಜಂಟಿ ಕಾರ್ಯದರ್ಶಿ ಯಾಗಿ ವಿ.ಎಂ. ಪುರುಷೋತ್ತಮ್, ಖಜಾಂಚಿಯಾಗಿ ಮಾಳೇಟಿರ ಸಾಬ ಮುತ್ತಪ್ಪ, ಸಮಿತಿ ಸದಸ್ಯರಾಗಿ ಕೆ.ಜಿ. ಅರುಣ್ ಕುಮಾರ್, ಸುಮಂತ್ ಜೈನ್, ಎ.ಕೆ. ರವಿಶಂಕರ್, ಬಿ.ಎ. ಅಂಬಿ ಕೃಷ್ಣಮೂರ್ತಿ, ಡಾ.ಎನ್. ವೀರೇಂದ್ರ ಕಾಮತ್, ಕುಪ್ಪಂಡ ರಾಜೀವ್ ಕಾರ್ಯಪ್ಪ, ಎನ್. ವೆಂಕಟೇಶ್ ಕಾಮತ್, ಜೆ.ಪಿ. ಅರುಣ್, ಜೆ.ವಿ. ಪ್ರಕಾಶ್, ಪಟ್ಟಡ ವಿಕ್ರಂ, ಕಂಡ್ರತAಡ ಟಿ. ಮುತ್ತಣ್ಣ, ಮನೆಯಪಂಡ ರಿನ್ ಕಾಳಪ್ಪ, ಗಂಗಾಧರಯ್ಯ, ಡಾ. ಬಿ.ಪಿ. ಕೇಶವ ರಾವ್, ಪಿ.ಜಿ. ಅಯ್ಯಪ್ಪ, ದಿಲೀಪ್ ಕುಮಾರ್ ಜೈನ್, ಪ್ರವೀಣ್ ಕುಮಾರ್ ಜೈನ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಕಳೆದ ೫೫ ವರ್ಷಗಳಿಂದ ಶ್ರೀ ಬಸವೇಶ್ವರ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಮೋಹನ್ ಭಟ್ ಅವರನ್ನೇ ಆಗಸ್ಟ್ ೨೬ ರಿಂದ ಸೆಪ್ಟೆಂಬರ್ ೬ ರವರೆಗೆ ಜರುಗುವ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸ ಲಾಯಿತು. ಕಾಂತಾರ ಚಿತ್ರದ ವರಾಹ ರೂಪಂ ಗೀತ ರಚನೆಕಾರ ಶಶಿರಾಜ್ ಕಾವೂರ್, ಕಳೆದ ವರ್ಷ ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಈ ಬಾರಿಯೂ ಪ್ರಶಸ್ತಿಗೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವದು ಎಂದು ನೂತನ ಅಧ್ಯಕ್ಷ ರವೀಂದ್ರನಾಥ್ ಕಾಮತ್ ಮಾಹಿತಿ ನೀಡಿದರು.
ಪ್ರಸ್ತುತ ವರ್ಷ ಗಣೇಶೋತ್ಸವ ಸಮಿತಿ ವತಿಯಿಂದ ಅದ್ದೂರಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗುವದು ಮತ್ತು ಆಗಸ್ಟ್ ೩೧ ರಂದು ವಾಯ್ಸ್ ಆಫ್ ವೀರಾಜಪೇಟೆ ಗಾಯನ ಸ್ಪರ್ಧೆ ಏರ್ಪಡಿಸಲಾಗುವದು ಎಂದು ಮಾಹಿತಿ ನೀಡಿದರು.
ಸಂತಾಪ
ಸಭೆಯ ಆರಂಭಕ್ಕೂ ಮುನ್ನ ನಿಧನರಾದ ಮಾಜಿ ಅಧ್ಯಕ್ಷ ಎನ್. ಗೋಪಾಲ ಕೃಷ್ಣ ಕಾಮತ್, ಮಣಿಕಾರ್ ಗೋಪಾಲಕೃಷ್ಣ ಶಾನ್‌ಭೋಗ್, ಕರ್ನಲ್ ಕುಪ್ಪಂಡ ಮುತ್ತಣ್ಣ, ಪಿ.ಎಂ. ಉತ್ತಯ್ಯ, ಮುಕ್ಕಾಟಿರ ಶಿವು ಮಾದಪ್ಪ ಹಾಗೂ ಗೀತಾ ಇಂದ್ರಕುಮಾರ್ ಅವರಿಗೆ ಸಂತಾಪ ವ್ಯಕ್ತಪಡಿ¸ Àಲಾಯಿತು.