ಚೆಯ್ಯAಡಾಣೆ, ಜು. ೨೦: ಕೊಡಗು ಜಿಲ್ಲಾ ಸಾದಾತ್ ಸಂಗಮ ಎಮ್ಮೆಮಾಡುವಿನಲ್ಲಿ ಯಶಸ್ವಿಯಾಗಿ ನಡೆಯಿತು. ಎಮ್ಮೆಮಾಡು ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಹಬೀಬ್ ತಂಙಳ್ ವಹಿಸಿ ಮಾತನಾಡಿದರು.
ಸಾದಾತ್ ಸಂಘದ ಅಧ್ಯಕ್ಷರು ಹಾಗೂ ಎಸ್ವೈಎಸ್ ರಾಜ್ಯ ಉಪಾಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಎಮ್ಮೆಮಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾದಾತ್ ಕುಟುಂಬಗಳ ಸಮ್ಮಿಲನದಿಂದ ಕೊಡಗಿನಲ್ಲಿರುವ ಎಲ್ಲಾ ಸಾದಾತ್ಗಳು ಒಂದೇ ವೇದಿಕೆಯಲ್ಲಿ ಒಗ್ಗೂಡುವಂತಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಅಸ್ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ ಮಲ್ಜಹ್ ತಂಙಳ್ ಪಾಲ್ಗೊಂಡು ಮಾತನಾಡಿ ಕೊಡಗಿನಲ್ಲಿ ಸಾದಾತ್ಗಳಿಗೆ ಪ್ರತ್ಯೇಕ ಸ್ಥಾನವಿದೆ ಅದಕ್ಕೆ ಉದಾಹರಣೆ ಎಮ್ಮೆಮಾಡುವಿನ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಸ್ಸನ್ ಸಖಾಫಿ ಹಳ್ರಮಿ ತಂಙಳ್ ಹಾಗೂ ಸೂಫಿ ಸಹಿದ್ (ರ.ಅ)ಎಂದ ಅವರು ಸಾದಾತ್ಗಳ ಬಗ್ಗೆ ಅಪಾರ ಗೌರವವಿರಬೇಕು ಎಂದರು. ಮತ್ತೋರ್ವ ಮುಖ್ಯ ಅತಿಥಿ ಮೈಸೂರ್ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಅಧ್ಯಕ್ಷ ಅಝೀಜುಲ್ (ಅಜ್ಜು) ಮಾತನಾಡಿ ಸಾದಾತ್ಗಳಿಗೆ ವಿಶೇಷ ಸ್ಥಾನಮಾನವಿದೆ. ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಸಯ್ಯಿದ್ ಮೆಹದಿ ಅಹ್ಮದ್ ತಂಙಳ್ ಲಕ್ಷದೀಪ್, ಸಯ್ಯದ್ ಶರಫುದ್ದಿನ್ ತಂಙಳ್, ಎಸ್ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಲ್ಹರಿ, ಮೊಹಮ್ಮದ್ ರಾಫಿ ಹಿಮಮಿ ಸಖಾಫಿ ಬೆಳ್ತಂಗಡಿ,ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ, ಕೆ.ಎಂ.ಜೆ ಕೋಶಾಧಿಕಾರಿ ಖಾಲಿದ್ ಫೈಝಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಈ ಸಂದರ್ಭ ಸಾದಾತ್ ಸಂಗಮದ ವತಿಯಿಂದ ಅಸ್ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ ಮಲ್ಜಹ್ ತಂಙಳ್ ಹಾಗು ಮೈಸೂರ್ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಝೀಜುಲ್ಲ (ಅಜ್ಜು) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಝ ಕೊಟ್ಟಮುಡಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಸಯ್ಯದ್ ಬಾವ,ಗಲ್ಫ್ ಇಸಿ ಕಾರ್ಗೋ ಮಾಲೀಕ ಅಶ್ರಫ್,ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಸಯ್ಯದ್ ಇಸ್ಹಾಕ್ ತಂಙಳ್, ಸಯ್ಯದ್ ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ, ಶಿಯಾಬುದ್ಧೀನ್ ತಂಙಳ್ ಗೋಣಿಕೊಪ್ಪ, ಅಬಿದ್ ತಂಙಳ್, ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಕಮರುದ್ದಿನ್ ಅನ್ವಾರಿ, ಎಸ್ ವೈಎಸ್ ಪ್ರಧಾನ ಕಾರ್ಯದರ್ಶಿ ಯಾಕೂಬ್, ಮುತ್ತುಕೋಯಾ ತಂಙಳ್, ಕೋಯಮ ತಂಙಳ್, ಆಟಾಕೋಯಾ ತಂಙಳ್, ಇಂಬಿಚ್ಚಿಕೋಯಾ ತಂಙಳ್, ಕುಂಞಕೋಯಾ ತಂಙಳ್, ಸೈಫುದ್ದಿನ್ ತಂಙಳ್, ಸೇರಿದಂತೆ ಹಲವಾರು ನೇತಾರರು ಪಾಲ್ಗೊಂಡಿದ್ದರು.
ಕೊಡಗು ಜಿಲ್ಲೆಗೆ ನೂತನ ಸಾದಾತ್ ಪದಾಧಿಕಾರಿಗಳು
ಅಧ್ಯಕ್ಷರಾಗಿ ಸಯ್ಯಿದ್ ಅಝೀಝ್ ತಂಙಳ್ ಎಮ್ಮೆಮಾಡು, ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಶಿಯಾಬುದ್ದೀನ್ ತಂಙಳ್ ಗೋಣಿಕೊಪ್ಪ, ಕೋಶಾಧಿಕಾರಿಯಾಗಿ ಸಯ್ಯಿದ್ ಹಬೀಬ್ ತಂಙಳ್ ಪಡಿಯಾಣಿ, ಉಪಾಧ್ಯಕ್ಷರಾಗಿ ಅಟಾಕೋಯ ತಂಙಳ್ ಹಾಗೂ ಮೆಹದಿ ಅಹ್ಮದ್ ತಂಙಳ್ ಚೋಕಂಡಳ್ಳಿ, ಸಹ ಕಾರ್ಯ ದರ್ಶಿಯಾಗಿ ಅಬಿದ್ ತಂಙಳ್, ಆಡಳಿತ ಮಂಡಳಿ ಸದಸ್ಯರಾಗಿ ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ,ಅಬ್ದುಲ್ ಗಫೂರ್ ಕುಂಞಕೋಯಾ ತಂಙಳ್, ಇಸಾಕ್ ತಂಙಳ್, ಶರಫುದ್ದಿನ್ ತಂಙಳ್, ನಿಜಾಮುದ್ದೀನ್ ತಂಙಳ್ ಎಮ್ಮೆಮಾಡು, ಶಫೀಕ್ ತಂಙಳ್, ಫಝಲ್ ತಂಙಳ್, ಮುತ್ತುಕೋಯಾ ತಂಙಳ್ ಕೊಂಡAಗೇರಿ, ಶಿಯಾಬ್ ತಂಙಳ್ ಹೊಸತೋಟ, ಪೂಕೋಯಾ ತಂಙಳ್ ಪೆರುಂಬಾಡಿ, ಶಿಯಾಬ್ ತಂಙಳ್ ಬಾಳೆಲೆ ಆಯ್ಕೆ ಆದರು. ಅಬ್ದುಲ್ ಖಾದರ್ ತಂಙಳ್ ಸ್ವಾಗತಿಸಿ, ಸಯ್ಯದ್ ಶಿಯಾಬುದ್ದೀನ್ ತಂಙಳ್ ನಿರೂಪಿಸಿ, ವಂದಿಸಿದರು.
-ಅಶ್ರಫ್