ಕುಶಾಲನಗರ, ಜು. ೨೦: ೧೯೦೭ ರಿಂದ ನಾಲ್ಕು ದಶಕಗಳ ಕಾಲ ಸುಬೇದಾರ್ ಆಡಳಿತದಲ್ಲಿ ಇದ್ದು ನಂತರ ಮಂಡಲ ಪಂಚಾಯಿತಿ, ಪಟ್ಟಣ ಪಂಚಾಯಿತಿ ಯಾಗಿ ಮಾರ್ಪಾಡುಗೊಂಡ ಕುಶಾಲನಗರ ಇದೀಗ ಪುರಸ¨ sೆಯಾಗಿ ಮೇಲ್ದರ್ಜೆಗೇರಿದೆ. ಈ ವರ್ಷದ ನವೆಂಬರ್ ತಿಂಗಳಲ್ಲಿ ಪುರಸಭೆಯ ಆಡಳಿತ ಮಂಡಳಿ ಸದಸ್ಯರ ಪ್ರಥಮ ಚುನಾವಣೆ ಘೋಷಣೆಯಾಗಲಿದ್ದು, ಈ ಹಿಂದೆ ಇದ್ದ ೧೬ ವಾರ್ಡ್ಗಳಿಗೆ ಬದಲಾಗಿ ೨೩ ವಾರ್ಡ್ಗಳ ಸದಸ್ಯರ ಆಯ್ಕೆಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕೊಡಗು ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಂಡ ಕುಶಾಲನಗರದಲ್ಲಿ ೨೦೧೮ ರಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಜನಪ್ರತಿನಿಧಿಗಳ ಚುನಾವಣೆ ನಡೆದಿದ್ದು, ಏಳು ವರ್ಷಗಳ ಅವಧಿಯಲ್ಲಿ ಆಡಳಿತ ಅಧಿಕಾರಿಗಳು ಸೇರಿದಂತೆ ಮೂರು ಮಂದಿ ಅಧ್ಯಕ್ಷರ ಅಧಿಕಾರವನ್ನು ಕುಶಾಲನಗರ ಪಟ್ಟಣ ಕಂಡಿದೆ.

ಇದೀಗ ಈ ವರ್ಷದ ನವೆಂಬರ್ ಮೂರಕ್ಕೆ ಪ್ರಸಕ್ತ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳ ಅಧಿಕಾರ ಅವಧಿ ಅಂತ್ಯಗೊಳ್ಳಲಿದ್ದು, ಪುರಸಭೆಯ ೨೩ ವಾರ್ಡ್ಗಳಿಗೆ ಜನಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಲಿದೆ. ಸದ್ಯದಲ್ಲಿಯೇ ವಾರ್ಡ್ವಾರು ಮೀಸಲಾತಿ ಬಗ್ಗೆ ಅಧಿಸೂಚನೆ ಹೊರಬೀಳಲಿದೆ.

೨೦೧೪ ರಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿಯಿAದ ಪುರಸಭೆಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ತಾಂತ್ರಿಕ ಕಾರಣದಿಂದ ಮನ್ನಣೆ ದೊರಕದೆ ನಂತರ ಹಲವು ತೊಡಕುಗಳ ನಡುವೆ ೨೦೨೧ ರಲ್ಲಿ ಕುಶಾಲನಗರ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಿತು.

ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇದೀಗ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಮುಳ್ಳುಸೋಗೆ ಮತ್ತು ೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ) ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಭಾಗದ ಗ್ರಾಮಗಳನ್ನು ಒಳಗೊಂಡAತೆ ಕುಶಾಲನಗರ ಪುರಸಭೆಯನ್ನು ೨೩ ವಾರ್ಡ್ಗಳಾಗಿ ವಿಂಗಡಣೆ ಮಾಡಿದೆ.

ಅಂದಿನ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರ ವಿಶೇಷ ಆಸಕ್ತಿಯಿಂದ ಕುಶಾಲನಗರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಕೆಲಸ ನಡೆದಿತ್ತು.

ಆದರೆ ೨೦೧೮ರಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಆಯ್ಕೆಯಾಗಿರುವ ೧೬ ಮಂದಿ ವಾರ್ಡ್ ಸದಸ್ಯರು ಸೇರಿದಂತೆ ಸರಕಾರದಿಂದ ಏಳು ಮಂದಿ ನಾಮ ನಿರ್ದೇಶಕರಾಗಿ ಪ್ರಸಕ್ತ ಆಡಳಿತ ಮಂಡಳಿ ಮುಂದುವರೆದಿದೆ.

ಈ ನಡುವೆ ಮುಳ್ಳುಸೋಗೆ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಮೊಟಕುಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಮುಳ್ಳುಸೋಗೆ ಪೂರ್ಣ ಕಂದಾಯ ಗ್ರಾಮ ಮತ್ತು ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಯ ಮಾದಾಪಟ್ಟಣ ಭಾಗ ಸೇರಿದಂತೆ ಕುಶಾಲನಗರ ಪುರಸಭೆ ೨೩ ವಾರ್ಡ್ಗಳಾಗಿ ವಿಂಗಡಣೆಗೊAಡಿದೆ.

- ಚಂದ್ರಮೋಹನ್