ಮಡಿಕೇರಿ, ಜು. ೨೦: ಕೊಡಗಿನಲ್ಲಿ ಮುಂಗಾರು ಮಳೆಯ ಸನ್ನಿವೇಶ ಎಂದಿನAತಿದೆ. ಇದೀಗ ತಾ. ೧೭ ರಿಂದ ಕಕ್ಕಡ ಮಾಸ ಆರಂಭಗೊAಡಿದ್ದು, ನಿರಂತರ ಮಳೆ ಹಾಗೂ ಚಳಿಯೊಂದಿಗೆ ಜನತೆಗೆ ಕಕ್ಕಡ ತಿಂಗಳ ಅನುಭವವಾಗುತ್ತಿದೆ. ಈ ವಾತಾವರಣದ ನಡುವೆ ಗದ್ದೆ ಕೆಲಸಗಳಲ್ಲಿ ಹಲವರು ತೊಡಗಿಸಿಕೊಂಡಿದ್ದಾರೆ. ಇನ್ನು ಅನೇಕರು ಪಿರಿ... ಪಿರಿ... ಮಳೆ ಹಾಗೂ ಚಳಿಯಿಂದಾಗಿ ಬೆಚ್ಚನೆಯ ಉಡುಗೆಯೊಂದಿಗೆ ಮನೆಯಿಂದ ಹೊರಬಾರದಂತಿದ್ದಾರೆ. ಇಳಿ ವಯಸ್ಸಿನವರು ಈಗಿನ ವಾತಾವರಣಕ್ಕೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಹೆಚ್ಚಿಲ್ಲವಾದರೂ ನಿರಂತರವಾಗಿ ಸುರಿಯುತ್ತಿರುವ ಸಣ್ಣ ಪ್ರಮಾಣದ ಮಳೆ ಹಾಗೂ ಚಳಿಯನ್ನು ಎದುರಿಸುವಂತಾಗಿದೆ. ನಗರ - ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟವೂ ವಿರಳವಾಗಿದೆ. ವ್ಯಾಪಾರ - ವಹಿವಾಟುಗಳೂ ತುಸು ಕಡಿಮೆಯಾದಂತಿವೆ. ನಿನ್ನೆಯಿಂದ ಪುಷ್ಯ ಮಳೆ ಆರಂಭಗೊAಡಿದೆ. ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೦.೭೧ ಇಂಚು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೩೨, ವೀರಾಜಪೇಟೆ ೦.೭೪, ಪೊನ್ನಂಪೇಟೆ ೦.೫೧, ಸೋಮವಾರಪೇಟೆ ೦.೩೫ ಹಾಗೂ ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೦.೬೫ ಇಂಚು ಮಳೆಯಾಗಿದೆ.