ವೀರಾಜಪೇಟೆ, ಜು. ೨೦: ಬಿ.ಜೆ.ಪಿ. ವತಿಯಿಂದ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಹಿರಿಯರು ಹಾಗೂ ನಿವೃತ್ತ ಪ್ರಾಂಶುಪಾಲೆÀ ಡಾ. ಸುಲೋಚನಾ ಭಟ್ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಗುರುವಂದನೆಯನ್ನು ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಭಾರತೀಯ ಜನತಾ ಪಾರ್ಟಿಯ ಎಸ್.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎA. ಪರಮೇಶ್ವರ ಅವರು ಗುರುಗಳನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಪ್ರತಿಯೊಬ್ಬರು ಗುರುಹಿರಿಯರನ್ನು ಗೌರವಿಸುವ ಮೂಲಕ ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು ಎಂದು ಕರೆ ನೀಡಿದರು.
ಸÀನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುಲೋಚನಾ ಭಟ್ ಅವರು ಸನಾತನ ಹಿಂದೂ ಧರ್ಮದ ಸಂರಕ್ಷಣೆಗಾಗಿ ಆರ್.ಎಸ್.ಎಸ್. ಬ್ರಿಟೀಷರ ಕಾಲದಿಂದಲೂ ಶ್ರಮಿಸುತ್ತಿದೆ. ಸನಾತನ ಸಂಸ್ಕೃತಿಯ ಕುರಿತು ಮುಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡುವ ಅಗತ್ಯವಿದೆ. ಇತರರಿಗೆ ಸಂದೇಶ ನೀಡುವ ಮೊದಲು ನಮ್ಮೊಳಗೆ ನಾವು ಬದಲಾಗಬೇಕು, ಸನಾತನ ಧರ್ಮದ ಉಳಿವಿಗೆ ಕಟಿಬದ್ಧರಾಗ ಬೇಕು. ಸಂಸ್ಕೃತಿಯನ್ನು ಅಳವಡಿಸಿ ಕೊಂಡು ಅನುಸರಿಸ ಬೇಕು, ಗುರು ಸಮಾನರನ್ನು ಗೌರವಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಪಾಲಂಗಾಲ ಬೂತ್ ಅಧ್ಯಕ್ಷ ಚಾತಂಡ ಹರೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಶೀಲ ಮೇದಪ್ಪ, ರಾಷ್ಟಿçÃಯ ಸ್ವಯಂಸೇವಕ ಸಂಘದ ತಾಲೂಕು ಪ್ರಮುಖ್ ರಂಜನ್ ನಂಜಪ್ಪ, ಶ್ರೀನಿವಾಸ, ಗ್ರಾಮದ ಹಿರಿಯರಾದ ನಾಗರಾಜ್ ಸ್ವಾಮಿ, ಪಾಲೆಯಂಡ ಉಮೇಶ್, ಬೇಪಡಿಯಂಡ ಧನು, ಬಲ್ಯಾಟಂಡ ಗಿರೀಶ್, ನಡಿಕೇರಿಯಂಡ ರಂಜನ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.