ಶಿಕ್ಷಕಿಯಾಗಿ ಉದ್ಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಭಿ ಯಾಗಬೇಕೆಂಬ ಮಹಿಳೆಯರ ಹಪಹಪಿಕೆ, ಶಿಕ್ಷಣ ತರಬೇತಿಯ ಅವಕಾಶ ಬೇಕೆಂಬ ಬೇಡಿಕೆ..... ಹೀಗೆ ಅನೇಕ ತರಹದ ಕನಸುಗಳಿಗೆ ಮಹಿಳೆಯರು ತಮ್ಮನ್ನೊಡ್ಡಿದ್ದ ೧೯೭೦ರ ದಶಕವೊಂದಿತ್ತು. ಇಂತಹ ಸಮಯದಲ್ಲಿ ಕೊಡಗಿನ ವೀರಭೂಮಿಯಲ್ಲಿ ಆಶಾಕಿರಣವಾಗಿ ಕಂಡವರು ಬಿಟ್ಟಂಗಾಲದ ವೆಂಕಟಪ್ಪರಮಣ (ಬಿ.ವಿ. ರಮಣ)ರವರು.
ಶ್ರೀಯುತರು ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಮಾಡಿದ್ದು, ಶ್ರೀ ಪಂಜೆ ಮಂಗೇಶರಾಯರ ನಂತರ ಕನ್ನಡ ಭಾಷಾಬೋಧನೆಯ ಸುಧಾರಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದವರು. ಪೌರತನತರಬೇತಿ ಶಿಬಿರದ ಬಗ್ಗೆ ಪುಸ್ತಕವನ್ನು ಬರೆದು, ರಾಣಿಅಬ್ಬಕ್ಕದೇವಿ, ಕೆಳದಿಯ ಚೆನ್ನಮ್ಮ, ಪುಲಿಕೇಶಿ ಮುಂತಾದ ಸಣ್ಣಕತೆಗಳನ್ನು ಹಾಗೂ ದುರಂತರಾವಣ, ಗಂಗಾಶಾಪ, ಚಿಕ್ಕವೀರರಾಜೇಂದ್ರ ಮುಂತಾದ ನಾಟಕಗಳನ್ನು ಬರೆದು ಕನ್ನಡ ಸಾರಸ್ವತಲೋಕಕ್ಕೆ ತನ್ನ ಕೊಡುಗೆಯನ್ನು ನೀಡಿದವರು. ‘ಕನ್ನಡ ನುಡಿ ಬೋಧನೆ’ ಎನ್ನವ ಕನ್ನಡ ವ್ಯಾಕರಣಕ್ಕೆ ಸಂಬAಧಿಸಿದ ಅವರ ಪುಸ್ತಕವು ಕರ್ನಾಟಕದ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜು ಗ್ರಂಥಾಲಯಗಳಲ್ಲಿ ಕನ್ನಡ ಶಿಕ್ಷಕರ ಕೈಪಿಡಿಯಾಗಿರುವುದು ಅವರ ಕನ್ನಡ ಭಾಷಾ ಪ್ರಭುತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಆಂಗ್ಲ ಭಾಷೆಯಲೂ,್ಲ ಅಷ್ಟೇ ಫ್ರೌಡಿಮೆ ಹೊಂದಿದ್ದ ರಮಣರವರು, ಅನೇಕ ಶಿಕ್ಷಣ ಇಲಾಖೆಗಳಲ್ಲಿ ಮಂಗಳೂರು, ಮದ್ರಾಸಿನಲ್ಲಿ ತಮ್ಮ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಮಲೆನಾಡಿನ ಸೆರಗಿನಲ್ಲಿರುವ ವೀರಾಜಪೇಟೆಯಲ್ಲಿ ಬಿ.ಎಡ್ ಹಾಗೂ ಟಿ.ಸಿ.ಹೆಚ್. ಸಂಸ್ಥೆಯನ್ನು ಸ್ಥಾಪಿಸಿದರು. ೧೯೭೩ರಲ್ಲಿ ಆರಂಭವಾದ ಅವರ ಶಿಕ್ಷಣಯಾತ್ರೆ ಹಾಗೂ ಯಶೋಗಾಥೆ ಯಾರನ್ನೂ ಕೂಡಾ ಚಕಿತಗೊಳಿಸುವಂತಹದು. ಅನೇಕ ಏಳು-ಬೀಳುಗಳನ್ನು, ಎಡರು-ತೊಡರುಗಳನ್ನು ಎದುರಿಸಿದರೂ, ಛಲದಂಕಮಲ್ಲನAತೆ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಗರ್ಭಕ್ಕೆ ನಿಸ್ವಾರ್ಥತೆ ಹಾಗೂ ಬದ್ಧತೆಯ ಕಾವುಕೊಟ್ಟು ಸರ್ವೋದಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಇವರು ಗಾಂಧಿವಾದಿಯಾಗಿದ್ದು, ಗಾಂಧೀಜಿಯ ಸರ್ವೋದಯ ಪರಿಕಲ್ಪನೆಗೆ ಮಾರುಹೋಗಿದ್ದರಿಂದ ಅದೇ ಹೆಸರನ್ನು ತಮ್ಮ ಸಂಸ್ಥೆಗೆ ನೀಡಿದರು.
ಮೊದಲು ಕೇವಲ ಮಹಿಳಾ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ಕಾಲೇಜು ಇಂದು ಪುರುಷ ವಿದ್ಯಾರ್ಥಿಗಳಿಗೂ ಕೂಡಾ ತನ್ನ ಸೇವೆಯ ಬಾಹುವನ್ನು ಚಾಚಿದೆ. ಆರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದು, ನಂತರ ೧೯೮೨ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ತೆಕ್ಕೆಯನ್ನು ಸೇರಿ, ೨೦೨೩ರಿಂದ ಕೊಡಗು ವಿಶ್ವವಿದ್ಯಾಲಯದ ಮಡಿಲು ಸೇರಿದೆ. ಬಿ.ವಿ. ರಮಣರವರೇ ಸ್ಥಾಪಕರಾಗಿದ್ದು, ಪ್ರಾಂಶುಪಾಲ ರಾಗಿದ್ದು ನಂತರ ಅವರ ಪುತ್ರ ಬಿ. ಆರ್. ಶರತ್ಚಂದ್ರ, ಎಸ್. ದಾನಪ್ಪ, ಡಾ.ಟಿ. ದಿನೇಶ್ಚಂದ್ರ ಹಾಗೂ ಡಾ. ಸೈದಾ ಶಾನವಾಜ್ ಮುಂತಾದವರು ಪ್ರಾಂಶುಪಾಲರಾಗಿ ದಕ್ಷ ಸೇವೆ ಸಲ್ಲಿಸಿದ್ದರು. ೨೦೦೯ರಲ್ಲಿ ಡಾ.ಸೈದಾ ಶಾನವಾಜ್ರವರ ಅವಧಿಯಲ್ಲಿ ಸರ್ಕಾರದ ವೇತನಾನು ದಾನಕ್ಕೆ ಒಳಪಟ್ಟ ಸಂಸ್ಥೆಯಲ್ಲಿ ಪ್ರಸ್ತುತ ಡಾ. ವಾಣಿ ಎಂ.ರವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು, ಇದೇ ಜುಲೈ ೩೧ ರಂದು ವಯೋನಿವೃತ್ತಿಗೊಳ್ಳುತ್ತಿದ್ದಾರೆ.
ಕೊಡಗಿನ ಯಾವ ಮೂಲೆಯ ಶಾಲೆಗಳಲ್ಲೂ ಶಿಕ್ಷಕರಾಗಿ ಕಾಣಸಿಗುವ ಸರ್ವೋದಯನ್ನರು, ಈ ಸಂಸ್ಥೆಯಲ್ಲಿ ಪಡೆದ ಮೌಲ್ಯ, ಸಂಸ್ಕಾರ ಹಾಗೂ ಕಲಾಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವುದರ ಮೂಲಕ ಕಾಲೇಜಿನಋಣ ಸಂದಾಯ ಮಾಡುತ್ತಿದ್ದಾರೆ. ಯಾವುದೇ ಪ್ರಚಾರದಗೊಡವೆಗೆ ಹೋಗದೆ, ಸದ್ದಿಲ್ಲದೆ ಸುದ್ಧಿಮಾಡುತ್ತಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿ ಶಿಕ್ಷಕರ ಹಾಜರಾತಿಗೆ ಮೊದಲ ಆದ್ಯತೆ. ಶಿಸ್ತು ಮತ್ತು ಸಂಸ್ಕಾರಗಳ ಕನಕಕ್ಕೆ ಕಾರ್ಯಾಗಾರಗಳು, ಗಿರಿಜನರ ಅರಿವಿನ ಕಾರ್ಯಕ್ರಮಗಳು, ಜಾಥಾ ಹಾಗೂ ಬೀದಿನಾಟಕಗಳು ಮುಂತಾದ ಹೂರಣವನ್ನಿಟ್ಟು ತನ್ನ ಉತ್ಕೃಷ್ಣತೆಯನ್ನು ಈ ಸಂಸ್ಥೆ ಮೆರೆಯುತ್ತಿದೆ.
ನುರಿತ ಶಿಕ್ಷಕವೃಂದ ಹತ್ತುಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ, ತಂತ್ರಜ್ಞಾನವನ್ನೊಳಗೊAಡ ಪಾಠಗಳು ಹಾಗೂ ಇನ್ನಿತರ ಎಲ್ಲಾ ಸೌಲಭ್ಯಗಳು ನ್ಯಾಕ್ನಿಂದ ‘ಬಿ’ ಗ್ರೇಡ್ ಪಡೆಯಲು ನೆರವಾಯಿತು ಹಾಗೂ ನ್ಯಾಕ್ನ ನಂತರದ ಚಕ್ರಕ್ಕೆ ಸಿದ್ಧವಾಗುತ್ತಿದೆ.
ಇಂತಹ ಸಂಸ್ಥೆ ಐವತ್ತು ವಸಂತಗಳನ್ನು ತನ್ನ ಶಿಕ್ಷಣ ವಾಜಪೇಯದಲ್ಲಿ ಪೂರೈಸಿ ಸಾರ್ಥಕ್ಯವನ್ನು ಪಡೆದು ಮುಂದುವರಿಯುತ್ತಿದೆ. ಇದೇ ಜುಲೈ ೨೫ರಂದು ಸುವರ್ಣ ಸಂಚಿಕೆಯ ಬಿಡುಗಡೆಯೊಂದಿಗೆ ಅತಿಥಿ, ಅಭ್ಯಾಗತರ ಉಪಸ್ಥಿತಿಯಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ.
- ಡಾ. ವಾಣಿ ಎಂ., ಪ್ರಾಂಶುಪಾಲರು