ಸೋಮವಾರಪೇಟೆ, ಜು. ೨೦: ಇಲ್ಲಿನ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ನಿಲ್ದಾಣದಲ್ಲಿ ಆಷಾಡ ಮಾಸದ ಕೊನೆಯ ಶುಕ್ರವಾರದ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಂಚಾಲಕ ರೋಹಿತ್ ಪೂಜಾರಿ ಮಾತನಾಡಿ, ವಾಹನ ಚಾಲಕರಿಗೆ ಚಾಮುಂಡೇಶ್ವÀರಿ ದೇವಿ ಪ್ರಮುಖ ದೇವರಾಗಿದ್ದು, ಈ ನಿಟ್ಟಿನಲ್ಲಿ ಆಷಾಡ ಮಾಸದ ಕಡೆಯ ಶುಕ್ರವಾರ ಕಳೆದ ಮೂರು ವರ್ಷಗಳಿಂದಲೂ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಬೆಳಿಗ್ಗೆ ಪೂಜೆ, ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಿಕೊಂಡು ಬರಲಾಗುತ್ತಿದೆ ಎಂದರು. ಪೂಜಾ ಕಾರ್ಯವನ್ನು ಅರ್ಚಕ ನಿತಿನ್ ನಡೆಸಿದರು. ಈ ಸಂದರ್ಭ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕೆ.ಟಿ.ಡಿ.ಓ. ಅಧ್ಯಕ್ಷ ವಸಂತ್, ಖಜಾಂಚಿ ಕೆ.ಎನ್. ದೀಪಕ್, ಪ್ರಮುಖರಾದ ಸಿ.ಸಿ. ನಂದ, ದಾಮೋದರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಸವೇಶ್ವರ ದೇವಾಲಯದಲ್ಲಿ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಆಷಾಡ ಮಾಸದ ಕೊನೆಯ ಶುಕ್ರವಾರದಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿತು.

ಅರ್ಚಕ ಶೇಖಯ್ಯ ಮಳಲಿಮಠ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು, ಸಮಾಜದ ಪ್ರಮುಖರಾದ ಯುವರಾಜ್ ಸೇರಿದಂತೆ ಇತರರು ಇದ್ದರು.