ಮಡಿಕೇರಿ, ಜು. ೨೦: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಮಹಾಸಭೆ ತಾ. ೨೭ ರಂದು ವೀರಾಜಪೇಟೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦.೩೦ಕ್ಕೆ ವೀರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಮಹಾಸಭೆಯಲ್ಲಿ ಮಹಾವೀರ ಚಕ್ರ ಪುರಸ್ಕೃತ ಪುಟ್ಟಿಚಂಡ ಗಣಪತಿ, ವೀರಚಕ್ರ ಮೇ. ಕುಪ್ಪಂಡ ನಂಜಪ್ಪ, ಶೌರ್ಯ ಚಕ್ರ ಕ. ಚಂಬAಡ ತಿಮ್ಮಣ್ಣ, ಸೇನಾ ಮೆಡಲ್ ವಿಜೇತ ಲೆ.ಜ. ಬಿ.ಎನ್.ಬಿ.ಎಂ. ಪ್ರಸಾದ್, ಕುಟ್ಟಂಡ ಲವ, ಮೇಚಂಡ ಚಿಟ್ಟಿಯಪ್ಪ, ಬೊಳ್ಳೇರ ರೋಶನ್ ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರನ್ನು ಸನ್ಮಾನಿಸಲಾಗುವುದು. ಇದರೊಂದಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಾಜಿ ಸೈ£ಕರ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಹಲ್ಲೆಗೆ ಖಂಡನೆ
ಹಾಲಿ ಸೈನಿಕನ ತಾಯಿ ಮೇಲೆ ನಡೆದ ಹಲ್ಲೆಯನ್ನು ಸಂಘ ತೀವ್ರವಾಗಿ ಖಂಡಿಸಿತು. ಉಪಾಧ್ಯಕ್ಷ ಸುಧೀರ್ ಮಾತನಾಡಿ, ಬೆಸಗೂರು ಗ್ರಾಮದ ಹಾಲಿ ಸೈನಿಕ ನಿರಂಜನ್ ಅವರ ತಾಯಿ ಬಾಗು ಅವರ ಮೇಲೆ ಜಮೀನು ವಿಷಯದಲ್ಲಿ ಹಲ್ಲೆ ಮಾಡಿರುವುದು ಖಂಡನೀಯ. ಕಾನೂನು ವ್ಯಾಪ್ತಿಯಲ್ಲಿ ವಿವಾದ ಬಗೆಹರಿಸಿಕೊಳ್ಳುವ ಬದಲು ಹಲ್ಲೆ ಮಾಡಿರುವುದು ಸರಿಯಲ್ಲ. ಇದರಿಂದ ಸೈನಿಕನ ಸ್ಥೆöÊರ್ಯ ಕುಂದುತ್ತದೆ. ಸೈನಿಕ ಸಮುದಾಯಕ್ಕೆ ಅನ್ಯಾಯವಾಗಲು ಸಂಘ ಬಿಡುವುದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಸೆಳೆಯಲಾಗಿದೆ. ತಪ್ಪಿತಸ್ಥನ ವಿರುದ್ಧ ತಕ್ಷಣ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಂಚಾಲಕÀ ನಾಟೋಳಂಡ ಸೋಮಯ್ಯ, ಕರ್ತಂಡ ಚಂದನ, ಪಿ.ಎಸ್. ವಾಸು, ವಿಜಯ ಕುಮಾರ್ ಹಾಜರಿದ್ದರು.