ಮಡಿಕೇರಿ, ಜು. ೨೧ : ಕೊಡಗು ಪತ್ರಕರ್ತರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತಾಶ್ರಯದಲ್ಲಿ ತಾ. ೨೬ ರಂದು ಮಡಿಕೇರಿಯ ಗೌಡ ಸಮಾಜದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಹುತಾತ್ಮ ಯೋಧರಿಗೆ ದೀಪ ನಮನ, ಪುಪ್ಪ ನಮನ ಮತ್ತು ಗಾನ ನಮನ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ, ಜಿಲ್ಲೆಯಾದ್ಯಂತಲಿನ ೮೫ ಸಂಘ-ಸAಸ್ಥೆಗಳು ಪಾಲ್ಗೊಳ್ಳಲಿವೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾಹಿತಿ ನೀಡಿದ್ದಾರೆ.

ನಗರದ ಗೌಡ ಸಮಾಜದಲ್ಲಿ ತಾ. ೨೬ ರಂದು ಸಂಜೆ ೫ ಗಂಟೆಯಿAದ ರಾತ್ರಿ ೮.೩೦ ಗಂಟೆಯವರೆಗೆ ಆಯೋಜಿತ ಕಾರ್ಯಕ್ರಮದಲ್ಲಿ ಭಾರತೀಯ ಯೋಧರನ್ನು ಸ್ಮರಿಸಲಾಗುತ್ತದೆ. ಕಾರ್ಗಿಲ್‌ನಲ್ಲಿ ಹುತಾತ್ಮರಾದ ೫೨೭ ಸೈನಿಕರಿಗೆ ದೀಪ ನಮನ ಸಲ್ಲಿಸಲಾಗುತ್ತದೆ. ಭಾರತದ ಯೋಧರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಗೌರವಾರ್ಪಣೆ ಕೂಡ ನಡೆಯಲಿದೆ. ಮೈಸೂರಿನ ಪಾವನ ಮ್ಯೂಸಿಕಲ್ ಇವೆಂಟ್ಸ್ ವತಿಯಿಂದ ದೇಶಭಕ್ತಿ ಗೀತೆ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕೊಡಗು ಪತ್ರಕರ್ತರ ಸಂಘ, ರೋಟರಿ ಮಿಸ್ಟಿ ಹಿಲ್ಸ್ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭ ದಾಖಲೆಯ ಸಂಖ್ಯೆಯಲ್ಲಿ ಸಂಘ-ಸAಸ್ಥೆಗಳಿಗೆ ಯೋಧ ನಮನ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಿಲ್ಲೆಯ ವಿವಿಧೆಡೆಗಳ ೮೫ ಸಂಘ-ಸAಸ್ಥೆಗಳು ರಾಜಕೀಯ, ಧರ್ಮ, ಜಾತಿಯ ಬೇಧವಿಲ್ಲದೇ ಈ ಕಾರ್ಯಕ್ರಮದಲ್ಲಿ ಒಟ್ಟಾಗಿ ಯೋಧರ ವೀರಶೌರ್ಯವನ್ನು ಸ್ಮರಿಸಲಿದ್ದಾರೆ. ಮಡಿಕೇರಿ ಗೌಡ ಸಮಾಜ, ಶಕ್ತಿ ಪ್ರತಿಷ್ಠಾನ, ಕೊಡಗು ಔಷಧಿ ವ್ಯಾಪಾರಿಗಳ ಸಂಘ, ಭಾರತೀಯ ಮೆಡಿಕಲ್ ಅಸೋಸಿಯೇಷನ್‌ನ ಕೊಡಗು ಶಾಖೆ, ಮಡಿಕೇರಿ ಇನ್ನರ್ ವೀಲ್, ಮಡಿಕೇರಿ ರೋಟರಿ, ಕೊಡಗು ಸಹಕಾರಿ ಕೇಂದ್ರ ಬ್ಯಾಂಕು, ರೋಟರಿ ವುಡ್ಸ್ ಮಡಿಕೇರಿ, ಮಡಿಕೇರಿಯ ಶಾಂತಿ ಸಾಗರ್ ರೆಸ್ಟೋರೆಂಟ್, ಸ್ವಾಗತ್ ಡೆಕೋರೇಟರ್ಸ್, ಕೇಶವ ಪ್ರಸಾದ್ ಮುಳಿಯ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಯೋಧರಿಗೆ ಗೌರವ ನಮನ ಸಲ್ಲಿಸಲಿರುವ ಸಂಘ ಸಂಸ್ಥೆಗಳು - ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು, ಮಾಜಿ ಸೈನಿಕರ ಸಂಘ ಮಡಿಕೇರಿ, ನಗರಸಭೆ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು ಮಡಿಕೇರಿ, ವಕೀಲರ ಸಂಘ, ಮಡಿಕೇರಿ, ನಗರಾಭಿವೃದ್ಧಿ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮಡಿಕೇರಿ, ಗೌಡ ಸಮಾಜ, ಮಡಿಕೇರಿ, ಕೊಡವ ಸಮಾಜ, ಮಡಿಕೇರಿ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು ಮಡಿಕೇರಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕೊಡಗು ಜಿಲ್ಲೆ, ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಕೊಡಗು, ಹೋಂಸ್ಟೇ ಅಸೋಸಿಯೇಷನ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ, ಭಾರತೀಯ ಜನತಾ ಪಾರ್ಟಿ, ಕೊಡಗು, ಜಾತ್ಯಾತೀತ ಜನತಾ ದಳ ಕೊಡಗು, ಎಸ್‌ಡಿಪಿಐ ಕೊಡಗು, ಪೊಮ್ಮಕ್ಕಡ ಕೂಟ ಮಡಿಕೇರಿ, ಪೊಮ್ಮಕ್ಕಡ ಕೂಟ ವೀರಾಜಪೇಟೆ, ಲಯನ್ಸ್ ಕ್ಲಬ್ ಮಡಿಕೇರಿ, ರೋಟರಿ ಮಡಿಕೇರಿ ವುಡ್ಸ್, ರೋಟರಿ ಮಡಿಕೇರಿ, ಇನ್ನರ್ ವೀಲ್ ಮಡಿಕೇರಿ, ರೆಡ್ ಕ್ರಾಸ್ ಕೊಡಗು ಘಟಕ, ಮಹದೇವಪೇಟೆ ಮಹಿಳಾ ಸಹಕಾರ ಸಂಘ ಮಡಿಕೇರಿ, ಆರೋಹಣ ತಂಡ, ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘ, ಹಿಂದೂ ಮಲಯಾಳಿ ಸಮಾಜ, ಕೊಡಗು, ಬಿಲ್ಲವ ಸಮಾಜ, ಕೊಡಗು, ಜಿಲ್ಲಾ ಬಂಟರ ಸಂಘ ಕೊಡಗು, ಜಿಲ್ಲಾ ಮೊಗೇರ ಸಮಾಜ ಕೊಡಗು, ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕೊಡಗು ಶಾಖೆ, ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ ಕೊಡಗು, ದಲಿತ ಸಂಘರ್ಷ ಸಮಿತಿ. ಕೊಡಗು, ಬ್ಯಾರಿ ವೆಲ್ಫೇರ್ ಟ್ರಸ್ಟ್ ಮಡಿಕೇರಿ, ಕ್ರೆöÊಸ್ತರ ಸೇವಾ ಸಂಘ ಕೊಡಗು, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು, ವೀರಶೈವ ಸಮಾಜ, ಮಡಿಕೇರಿ, ಜಿಲ್ಲಾ ಜಮಾಅತ್ ಎ ಇಸ್ಲಾಂ ಹಿಂದ್ ಕೊಡಗು, ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ, ಸಮರ್ಥ ಕನ್ನಡಿಗರು ಸಂಸ್ಥೆ, ಕೊಡಗು ಕನ್ನಡ ಸಿರಿ ಸ್ನೇಹಬಳಗ ಕುಶಾಲನಗರ, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ), ಗೌಡ ಸಮಾಜಗಳ ಒಕ್ಕೂಟ ಕೊಡಗು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಂಘ, ಫೋಟೋಗ್ರಾಫರ್ ಅಸೋಸಿಯೇಷನ್ ಕೊಡಗು, ಕೊಡಗು ವಿದ್ಯಾಲಯ, ಮಡಿಕೇರಿ, ವೀರ ಮಡಿವಾಳರ ಸಂಘ ಕೊಡಗು, ಜ್ಞಾನಗಂಗಾ ವಸತಿ ಶಾಲೆ ಅತ್ತೂರು. ಹಾರಂಗಿ, ಕೃಷಿ ಪತ್ತಿನ ಸಹಕಾರ ಸಂಘ ಮದೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ, ಜನರಲ್ ತಿಮ್ಮಯ್ಯ ಶಾಲೆ, ಮಡಿಕೇರಿ, ಟ್ರಾವೆಲ್ ಅಸೋಸಿಯೇಷನ್ ಕೊಡಗು, ಪತ್ರಿಕಾಭವನ ಟ್ರಸ್ಟ್ ಕೊಡಗು, ಜಿಲ್ಲಾ ಮಹಿಳಾ ಬರಹಗಾರರ ಸಂಘ, ಕೊಡಗು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೊಡಗು, ಲಾರಿ ಮಾಲೀಕರ ಮತ್ತು ಚಾಲಕರ ಸಂಘ ಮಡಿಕೇರಿ, ಆಟೋ ಮಾಲೀಕರ ಚಾಲಕರ ಸಂಘ ಮಡಿಕೇರಿ, ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಸಂಘ, ಕೊಡಗು ಜಾನಪದ ಪರಿಷತ್ ಕನ್ನಡ ಜಾನಪದ ಪರಿಷತ್ ಕೊಡಗು, ಜ್ಞಾನದೀಪ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘ, ಮಡಿಕೇರಿ, ಜೀಪು ಮಾಲೀಕರ ಮತ್ತು ಚಾಲಕರ ಸಂಘ ಕೊಡಗು, ಕೊಡಗು ಪೊಲೀಸ್, ಮಡಿಕೇರಿ, ದಸರಾ ದಶಮಂಟಪ ಸಮಿತಿ, ಸೇವಾ ಭಾರತಿ ಕೊಡಗು, ಶಕ್ತಿ ಪ್ರತಿಷ್ಠಾನ ಮಡಿಕೇರಿ, ಕರ್ನಾಟಕ ಅರೆಬಾಷೆ ಸಾಹಿತ್ಯ, ಸಂಸ್ಕೃತಿ ಅಕಾಡೆಮಿ, ಕರ್ನಾಟಕ ಕೊಡವ ಸಾಹಿತ್ಯ ಸಂಸ್ಕೃತಿ ಅಕಾಡೆಮಿ, ಸರ್ವೋದಯ ಸಮಿತಿ ಮಡಿಕೇರಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ೨ನೇ ಮೊಣ್ಣಂಗೇರಿ, ಎಸ್‌ಎನ್‌ಡಿಪಿ. ಯೂನಿಯನ್ ಕೊಡಗು, ಸವಿತಾ ಸಮಾಜ ಕೊಡಗು, ಸರ್ಕಾರಿ ನೌಕರರ ಸಂಘ ಕೊಡಗು, ಶ್ರೀ ಕೋದಂಡ ರಾಮ ರಾಮೋತ್ಸವ ಸಮಿತಿ ಮಡಿಕೇರಿ, ಗೌಡ ಯುವ ವೇದಿಕೆ ಕೊಡಗು, ಗೌಡ ಮಾಜಿ ಸೈನಿಕರ ಸಂಘ, ಕೊಡಗು ಗೌಡ ನಿವೃತ್ತ ನೌಕರರ ಸಂಘ, ಕೊಡಗು, ಗೌಡ ವಿದ್ಯಾಸಂಘ, ಗೌಡ ಮಹಿಳಾ ಒಕ್ಕೂಟ. ಕೊಡಗು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ವಿಶ್ವಕರ್ಮ ಸಮಾಜ, ಕೊಡಗು ಸ್ಕೌಟ್ ಮತ್ತು ಗೈಡ್ಸ್. ಮಡಿಕೇರಿ ತಾಲೂಕು ಭಾರತ್ ಸೇವಾ ದಳ ಕೊಡಗು, ಸ್ಕೌಟ್ ಮತ್ತು ಗೈಡ್ಸ್, ಸರಕಾರಿ ನೌಕರರ ಸಂಘ, ಭಾರತ್ ಸೇವಾ ದಳ ಕೊಡಗು, ಕಲಾನಗರ ಸಾಂಸ್ಕೃತಿಕ ಕಲಾವೇದಿಕೆ. ಮಡಿಕೇರಿ, ಜನನಿ ಮಹಿಳಾ ಮಂಡಳಿ.