ವೀರಾಜಪೇಟೆ, ಜು. ೨೧ : ಕತ್ತಲಿನಿಂದ ಬೆಳಕಿಗೆ ಎಂಬುದರ ಅರ್ಥ ಕಲ್ಪಿಸುವ ಶಕ್ತಿ ಗುರುವಿಗೆ ಮಾತ್ರ ಇದೆ ಎಂದು ದಕ್ಷಿಣ ಪ್ರಾಂತ ಸಂಘ ಪ್ರಚಾರಕ್ ಪ್ರವೀಣ್ ಸರಳಾಯ ಹೇಳಿದರು.

ರಾಷ್ಟಿçÃಯ ಸ್ವಯಂ ಸೇವಕ ಸಂಘ ವೀರಾಜಪೇಟೆ ಶಾಖೆ ವತಿಯಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಗುರು ಪೂರ್ಣಿಮೆಯಲ್ಲಿ ಮಾತನಾಡಿದ ಅವರು ಗುರುಕುಲ ಶಿಕ್ಷಣವನ್ನು ಬ್ರಿಟಿಷರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಕತ್ತಲು ಎಂದರೆ ಅಜ್ಞಾನ ಬೆಳಕು ಎಂದರೆ ಜ್ಞಾನ ಎಂಬAತೆ ಗುರುವನ್ನು ಜ್ಞಾನದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ರಾಷ್ಟಿçÃಯ ಸ್ವಯಂ ಸೇವಕ ಸಂಘವು ಭಗವತ್ ಧ್ವಜವನ್ನು ಗುರು ಎಂದು ಪರಿಗಣಿಸಿದೆ. ಸಂಘವು ೧೦೦ ವರ್ಷಗಳ ಹೊಸ್ತಿಲಲ್ಲಿದೆ. ಸಂಘವು ಮಾಡುವ ಕಾರ್ಯಕ್ರಮಗಳ ಬಗ್ಗೆ ಅಪಪ್ರಚಾರ ಟೀಕೆ, ಟಿಪ್ಪಣಿಗಳಿಗೆ ಕಿವಿಗೊಡದೆ ದೇಶ ಧರ್ಮದ ಒಳಿತಿಗಾಗಿ ತ್ಯಾಗ ಮಾನೋಭಾವದಿಂದ ಸೇವಾರ್ಥರಾಗೋಣ ಎಂದರು. ಋಷಿ ಮುನಿಗಳು ಜಗದ ಒಳಿತಿಗಾಗಿ ಯಜ್ಞಗಳನ್ನು ಮಾಡುತ್ತಿದ್ದರು ಯಜ್ಞದಿಂದ ಜಗತ್ತಿನ ಉದ್ದಾರವಾಗುತಿತ್ತು. ಯಜ್ಞಗಳು ಸಮಾಜಕ್ಕೆ ಹಿತವನ್ನು ಬಯಸುವುದಾಗಿದೆ. ಜಗತ್ತಿನ ಎಲ್ಲಾ ಜೀವಿಗಳಿಗೆ ಸಂಬAಧಗಳಿವೆ. ಆದರೆ ಪ್ರಸ್ತುತ ಸಮಾಜದಲ್ಲಿ ಸಂಬAಧಗಳಿಗೆ ಮೌಲ್ಯಗಳಿಗೆ ಅರ್ಥವಿಲ್ಲದಂತಾಗಿದೆ. ಸಂಬAಧಗಳು ಮುರಿಯದಂತೆ ಕಾಪಾಡುವ ಮನಸ್ಸು ನಮದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಮಾತಂಡ ಅಯ್ಯಪ್ಪ ಅವರು, ರಾಜ್ಯದಲ್ಲಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಟೀಕೆಗಳನ್ನು ಮಾಡುತ್ತಿರುವ ಕೆಲವರು ರಾಷ್ಟಿçÃಯ ಸ್ವಯಂ ಸೇವಕ ಸಂಘವನ್ನು ನಿಷೇಧ ಮಾಡುತ್ತೇವೆ ಎಂದು ಹೇಳುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಇದು ಸಾಧ್ಯವಿಲ್ಲ. ಸಂಘದ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ಶಾಖೆಗಳಲ್ಲಿ ನಡೆಯವ ಸಂವಾದ, ಹಿರಿಯರ ಸಂದೇಶಗಳು ಉಪದೇಶಗಳಿಂದ ತಿಳಿದು ಅರಿಯಬೇಕು. ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೆ ಸಂಘವು ಸಾಕ್ಷೀಕರಿಸುತ್ತದೆ. ಸಂಘ ಸೇವೆ ಮತ್ತು ತ್ಯಾಗದ ಸಂಕೇತವಾಗಿದೆ ಎಂದರು. ರಾಷ್ಟಿçÃಯ ಸ್ವಯಂ ಸೇವಕ ಸಂಘ ವೀರಾಜಪೇಟೆ ಶಾಖೆಯ ಕಾರ್ಯಕರ್ತರಿಂದ ಮತ್ತು ಹಿಂದೂ ಬಾಂಧವರಿAದ ಭಗವತ್ ಧ್ವಜಕ್ಕೆ ಅರ್ಚನೆ ಮತ್ತು ಅರ್ಪಣೆ ನಡೆಯಿತು. ರಾಷ್ಟಿçÃಯ ಸ್ವಯಂ ಸೇವಕ ಸಂಘದ ತಾಲೂಕು ಸಂಘಚಾಲಕ್ ಅಶ್ವಿನ್ ಮೇದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.