ಮಡಿಕೇರಿ, ಜು. ೨೧ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಶಾಲಾ- ಕಾಲೇಜುಗಳ ಶಿಕ್ಷಕರುಗಳಿಗೆ ಕನ್ನಡ ಭಾಷೆಯ ಬೆಳವಣಿಗೆಗಾಗಿ ಮಾರ್ಗೋಪಾಯಗಳು ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ತಾ. ೨೬ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮೂರ್ನಾಡಿನ ಪಿ.ಎಂ.ಶ್ರೀ. ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭ ಮೂರ್ನಾಡು ಹೋಬಳಿ ಘಟಕದಲ್ಲಿ ಪ್ರಪ್ರಥಮ ಬಾರಿಗೆ ದಿ. ಕೊಕ್ಕಲೆರ ಚಂಗಪ್ಪನವರ ಜ್ಞಾಪಕಾರ್ಥವಾಗಿ ಪತ್ನಿ ನಿವೃತ್ತ ಶಿಕ್ಷಕಿ ಕೊಕ್ಕಲೆರ ಬೋಜಮ್ಮ ಮತ್ತು ಮಕ್ಕಳು ಸ್ಥಾಪಿಸಿದ ದತ್ತಿನಿಧಿ ಸ್ವೀಕಾರ ಹಾಗೂ ಹಿರಿಯ ಸಾಹಿತಿಗಳಾದ ಕಿಗ್ಗಾಲು ಎಸ್. ಗಿರೀಶ್ ಅವರ ‘ಕಣ್ಮರೆಯಾದ ಕಾಂತಾಮಣಿ’ ಪತ್ತೆದಾರಿ ಕಾದಂಬರಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ವಹಿಸಲಿದ್ದು, ಉದ್ಘಾಟಕರಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕಾಫಿ ಬೆಳೆಗಾರ ಕಂಬಿರAಡ ಕಿಟ್ಟು ಕಾಳಪ್ಪ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ಮೂರ್ನಾಡು ಪಿ.ಎಂ.ಶ್ರೀ. ಶಾಲಾ ಮುಖ್ಯೋಪಾಧ್ಯಾಯನಿ ಪುಷ್ಪವತಿ ಹಾಗೂ ಶಕ್ತಿ ದಿನಪತ್ರಿಕೆ ಉಪಸಂಪಾದಕ ಕುಡೆಕಲ್ ಸಂತೋಷ್, ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕಿ ದಂಬೇಕೋಡಿ ಸುಶೀಲ, ಸಾಹಿತಿ ಕಿಗ್ಗಾಲು ಎಸ್. ಗಿರೀಶ್ ಭಾಗವಹಿಸಲಿದ್ದಾರೆ.