ಕಣಿವೆ, ಜು. ೩೦: ಈ ಬಾರಿ ಹಸಿ ಮೆಣಸಿನ ಕಾಯಿ ಬೆಳೆದ ಕೃಷಿಕರಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ದರ ದೊರಕುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಖುಷಿಯಾಗಿದ್ದಾರೆ. ಹಾಗಾಗಿ ಖಾರದ ಮೆಣಸಿನ ಕಾಯಿ ಸಿಹಿ ಅನುಭವ ನೀಡುತ್ತಿದೆ.
ಇದೀಗ ಮಾರುಕಟ್ಟೆಯಲ್ಲಿ ಹಸಿ ಮೆಣಸಿನ ಕಾಯಿಗೆ ಕೆಜಿಯೊಂದಕ್ಕೆ ೫೦ ರೂ ಸಿಗುತ್ತಿದೆ. ಇನ್ನು ಕೊಂಡು ಮಾರುವ ಸಗಟು ವ್ಯಾಪಾರಸ್ಥರು ಕೆಜಿಗೆ ೮೦ ರೂಗಳಿಂದ ೧೦೦ ರೂ ವರೆಗೂ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ಇದೇ ಜುಲೈ ಮಾಸಾಂತ್ಯದಲ್ಲಿ ಒಂದು ಕೆಜಿ ಹಸಿ ಮೆಣಸಿನ ಕಾಯಿಗೆ ಮಾರುಕಟ್ಟೆಯಲ್ಲಿ ಕೇವಲ ಹತ್ತು ರೂ ಇತ್ತು. ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಅಂದರೆ ರೈತರಿಂದ ಖರೀದಿಸುವಾಗ ಮಾತ್ರ. ಆದರೆ ಮಾರುಕಟ್ಟೆಯಲ್ಲಿ ಮಾರುವವರು ಕಾಲು ಕೆಜಿಗೆ ಕನಿಷ್ಟ ೨೦ ರೂಗಳ ಕಡಿಮೆ ಮಾರಾಟ ಮಾಡಲೇ ಇಲ್ಲ. ಈ ಬಾರಿ ಕಾಲು ಕೆಜಿಗೆ ೩೦ ರಿಂದ ೪೦ ರೂಗೆ ಮಾರುತ್ತಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಶುಂಠಿ ಕೃಷಿಯೊಂದಿಗೆ ಅಲ್ಲಲ್ಲಿ ಹಸಿ ಮೆಣಸಿನ ಕಾಯಿಯ ಗಿಡ ನೆಟ್ಟವರಿಗೆ ಶುಂಠಿ ಗಿಂತ ಹಸಿಮೆಣಸಿನ ಕಾಯಿ ಕೃಷಿ ಮಾಡಿದ್ದರೆ ಉತ್ತಮ ಇತ್ತು ಅನ್ನಿಸುತ್ತಿದೆ.
ಹೆಬ್ಬಾಲೆಯಲ್ಲಿ ಮಾರುಕಟ್ಟೆ
ಕುಶಾಲನಗರ ತಾಲೂಕಿನ ಹೆಬ್ಬಾಲೆಯಲ್ಲಿ ಪ್ರತಿನಿತ್ಯ ಸಂಜೆ ಅವಧಿ ಹಸಿಮೆಣಸಿನಕಾಯಿ ಮಾರುಕಟ್ಟೆಯೇ ಆರಂಭವಾಗಿದ್ದು, ಸುತ್ತಲಿನ ಶಿರಂಗಾಲ, ತೊರೆನೂರು, ಸಿದ್ದಲಿಂಗಪುರ, ಅಳುವಾರ, ಮರೂರು, ಮದಲಾಪುರ, ಕೂಡಿಗೆ ಮೊದಲಾದ ಗ್ರಾಮಗಳ ಕೃಷಿಕರು ತಾವು ಬೆಳೆದ ಹಸಿಮೆಣಸಿನ ಕಾಯಿ ಫಸಲನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿಂದ ಖರೀದಿಸುವ ಹಸಿಮೆಣಸಿನ ಕಾಯಿಯನ್ನು ಮಂಗಳೂರು, ಬೆಂಗಳೂರು, ಮೈಸೂರು, ಕೇರಳ ಮೊದಲಾದ ಕಡೆಗೆ ಸರಬರಾಜು ಮಾಡಲಾಗುತ್ತಿದೆ.
ಆದರೆ, ಈ ಬಾರಿ ಮಳೆಯ ಪ್ರಮಾಣ ಜಾಸ್ತಿಯಾದ್ದರಿಂದ ಹಸಿಮೆಣಸಿನ ಗಿಡಗಳು ಕೊಳೆತ ಪರಿಣಾಮ ಬೆಳವಣಿಗೆ ಕುಂಠಿತವಾಗಿದೆ. ಮತ್ತು ಗಿಡಗಳನ್ನು ನೆಟ್ಟಾಗ ಮಳೆ ಜಾಸ್ತಿಯಾಗಿ ಕರಗಿಹೋದ್ದರಿಂದ ಹಿಂದಿನ ಕಳೆದ ವರ್ಷಗಳ ಫಸಲು ಈ ಬಾರಿ ಇಲ್ಲ.
ಕಳೆದ ವರ್ಷ ದಿನಕ್ಕೆ ೨೫ ರಿಂದ ೩೦ ಟನ್ ಹಸಿಮೆಣಸಿನ ಕಾಯಿ ಮಾರುಕಟ್ಟೆಗೆ ಬರುತ್ತಿತ್ತು. ಈ ಬಾರಿ ಕೇವಲ ಒಂದರಿAದ ಎರಡು ಟನ್ ಬಂದರೂ ಹೆಚ್ಚೇ ಎಂದು ಮಾರಾಟಗಾರರು ಹೇಳುತ್ತಾರೆ.
ಶುಂಠಿ ಕೃಷಿಯಲ್ಲಿ ರೈತರು
ಕೂಡಿಗೆ : ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆ ಮಾಡಿರುವ ಶುಂಠಿ ಈಗಾಗಲೇ ವಿಚಿತ್ರ ರೋಗದಿಂದ ಶುಂಠಿ ಬೆಳೆ ಹಾಳಾಗುತ್ತಿದೆ.
ಕಳೆದ ಸಾಲಿನಲ್ಲಿ ಶುಂಠಿ ಬೆಲೆಯ ಕುಂಠಿತದಿAದಾಗಿ ಬಾರಿ ನಷ್ಟ ಅನುಭವಿಸಿರುವ ರೈತರು ಈ ಸಾಲಿನಲ್ಲಿಯು ಕಡಿಮೆ ಪ್ರಮಾಣದಲ್ಲಿ ತಮ್ಮ ತಮ್ಮ ಜಮೀನಿನಲ್ಲಿ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಶುಂಠಿ ಬಿತ್ತನೆ ಮಾಡಿ ಬೇಸಾಯದಲ್ಲಿ ತೊಡಗಿದ್ದಾರೆ. ವಿಚಿತ್ರ ರೋಗದ ಜೊತೆಯಲ್ಲಿ ಬೆಲೆಯಲ್ಲಿ ಬಾರಿ ಕಡಿಮೆ ಅಗಿರುವ ಹಿನ್ನೆಲೆಯಲ್ಲಿ ಈ ಬಾರಿ ಶುಂಠಿ ಬೇಸಾಯಗಾರರು ನಷ್ಟ ಅನುಭವಿಸುವಂತಹ ಪ್ರಸಂಗಗಳು ಎದುರಾಗುತ್ತಿವೆ. ಸಂಬAಧಿಸಿದ ತೋಟಗಾರಿಕೆ ಇಲಾಖೆಯವರು ರೈತರ ಶುಂಠಿ ಬೇಸಾಯ ಮಾಡಿದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಶೀಲನೆ ನೀಡುವಂತೆ ಈ ವ್ಯಾಪ್ತಿಯ ನೂರಾರು ರೈತರ ಒತ್ತಾಯವಾಗಿದೆ. - ನಾಗರಾಜಶೆಟ್ಟಿ