ಮಡಿಕೇರಿ, ಜು. ೩೦: ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾಡಳಿತ ಭವನ ಸಂಕೀರ್ಣಕ್ಕೆ ಮಂಗಳೂರು ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಜರ್ಮನ್ ತಂತ್ರಜ್ಞಾನದ ತಡೆಗೋಡೆ ಕುಸಿತದಿಂದಾಗಿ ಎದುರಾಗಿದ್ದ ಆತಂಕ ತುಸು ತಿಳಿಯಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಕಂಟ ಕ ಎದುರಾಗಿದೆ. ಮಂಗಳೂರು ರಸ್ತೆ ಬದಿಗೆ ರಕ್ಷಣೆಗಾಗಿ ನಿರ್ಮಿಸಲಾಗಿರುವ ಬೃಹತ್ ತಡೆಗೋಡೆ ಬಿರುಕು ಬಿಟ್ಟಿದ್ದು, ತಡೆಗೋಡೆಯೊಂದಿಗೆ ರಸ್ತೆ ಕೂಡ ಕುಸಿಯುವ ಭೀತಿ ಎದುರಾಗಿದೆ..!
ಕಳೆದ ೨೦೧೮ ರಲ್ಲಿ ಉಂಟಾದ ಪ್ರಕೃತಿ ವಿಕೋಪ ಸಂದರ್ಭ ಮಂಗಳೂರು ರಸ್ತೆಯಲ್ಲಿ ( ರಾಜಾ ಸೀಟಿನಿಂದ ನೇರ ಕೆಳಭಾಗ ) ಭೂ ಕುಸಿತ ಉಂಟಾಗಿತ್ತು. ಅಪಾಯದ ಸ್ಥಿತಿಯಲ್ಲಿದ್ದುದರಿಂದ ಬದಲಿ ಮಾರ್ಗವಾಗಿ (ಮೇಕೇರಿ- ಕಾಟಕೇರಿ) ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ನಂತರದಲ್ಲಿ ಪ್ರಾಕೃತಿಕ ವಿಕೋಪ ನಿಧಿ ಅಡಿ ಭೂಕುಸಿತ ಉಂಟಾದ ಭಾಗದಲ್ಲಿ ತಡೆಗೋಡೆಗೆ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಲಾಯಿತು. ಈ ಹಣದಲ್ಲಿ ಕೆಳಭಾಗದಿಂದಲೇ ಬೃಹತ್ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆ ಪೂರ್ಣಗೊಂಡ ಬಳಿಕ ಇದೊಂದು 'ವೀವ್ ಪಾಯಿಂಟ್ ' ನಂತೆ ಪರಿಣಮಿಸಿ ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿಯುವು ದರೊಂದಿಗೆ 'ಸೆಲ್ಫಿ' ತೆಗೆದುಕೊಳ್ಳುವುದು ಮಾಮೂಲಿಯಾಗಿತ್ತು.
ಗೋಡೆಯಲ್ಲಿ ಬಿರುಕು
ಇದೀಗ ಈ ಬೃಹತ್ ತಡೆಗೋಡೆ
(ಮೊದಲ ಪುಟದಿಂದ)
ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಲವು ವರ್ಷಗಳ ಕಾಲ ತೆಗೆದುಕೊಂಡು ನಿರ್ಮಾಣಗೊಂಡಿರುವ ಕಾಂಕ್ರೀಟ್ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಕಾಂಕ್ರೀಟ್ ಕಿತ್ತು ಬಂದಿದೆ. ಇದರೊಂದಿಗೆ ತಡೆಗೋಡೆ ಮೇಲ್ಭಾಗದಲ್ಲಿ ಹಾಕಿರುವ ಮಣ್ಣು ಕೂಡ ಬಿರುಕು ಬಿಟ್ಟಿದೆ..!
ಅಪಾಯಕ್ಕೆ ರಹದಾರಿ..!
ರಾಷ್ಟಿçÃಯ ಹೆದ್ದಾರಿಯಲ್ಲಿ ಈ ರೀತಿಯ ಬಿರುಕು ಕಾಣಿಸಿಕೊಂಡಿರುವುದು ಒಂದು ರೀತಿಯಲ್ಲಿ ಅಪಾಯಕ್ಕೆ ರಹದಾರಿಯಾಗಿದೆ. ತಡೆಗೋಡೆ ಕುಸಿತಗೊಂಡಲ್ಲಿ ಮಂಗಳೂರು ರಸ್ತೆ ಸಂಪೂರ್ಣ ಕೊಚ್ಚಿಹೋಗುವ ಸಾಧ್ಯತೆ ಇದೆ..!
ಕುಟುಂಬಗಳಿಗೆ ಅಪಾಯ..!
ಈ ರಸ್ತೆಗೆ ತಡೆಗೋಡೆ ಇರುವ ಕೆಳಭಾಗದಲ್ಲಿ ನಾಲ್ಕರಿಂದ ಐದು ಕುಟುಂಬಗಳು ನೆಲೆನಿಂತಿವೆ. ಒಂದು ವೇಳೆ ತಡೆಗೋಡೆ ಕುಸಿತಗೊಂಡಲ್ಲಿ ಈ ಕುಟುಂಬಗಳ ಮನೆಗಳು ಅಪಾಯಕ್ಕೆ ಸಿಲುಕಲಿವೆ...!
ಸ್ಥಳಾಂತರಕ್ಕೆ ಸೂಚನೆ
ತಡೆಗೋಡೆ ಬಿರುಕುಬಿಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಮಡಿಕೇರಿ ತಾಲೂಕು ತಹಶೀಲ್ದಾರ್ ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದರು. ಅಪಾಯದಲ್ಲಿರುವ ಕುಟುಂಬಸ್ಥರನ್ನು ಬೇರೆಡೆಗೆ ಸ್ಥಳಾಂತರಗೊಳ್ಳುವAತೆ ಸಲಹೆ ಮಾಡಿದರು. ಸದ್ಯಕ್ಕೆ ನಗರದಲ್ಲಿ ಗುರುತಿಸಲಾಗಿರುವ ರೆಡ್ ಕ್ರಾಸ್ ಭವನದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವAತೆ ಸಲಹೆ ಮಾಡಿದರು.
ಕಳಪೆ ಕಾಮಗಾರಿ ಆರೋಪ..!
ತಹಶೀಲ್ದಾರ್ ಭೇಟಿ ಸಂದರ್ಭದಲ್ಲಿ ಜಮಾಯಿಸಿದ್ದ ಸ್ಥಳೀಯರು ಕಳಪೆ ಕಾಮಗಾರಿಯಿಂದಾಗಿ ಇದೀಗ ತಡೆಗೋಡೆ ಬಿರುಕುಬಿಟ್ಟಿದೆ. ಕಾಮಗಾರಿ ಆರಂಭಿಸುವಾಗಲೇ ಈ ಬಗ್ಗೆ ಸಂಬAಧಿಸಿದವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಅಪಾಯದ ಪರಿಸ್ಥಿತಿ ಎದುರಿಸುವಂತಾಗಿದೆ. ಸ್ಥಳಾಂತರವಾಗಿ ಎಂದು ಹೇಳಿದರೆ ನಾವುಗಳು ಎಲ್ಲಿಗೆ ಹೋಗುವುದು ಎಂದು ತಮ್ಮ ಅಳಲು ತೋಡಿಕೊಂಡರು.
ಏನೂ ಮಾಡಲಾಗದು..!
ಒಂದು ವೇಳೆ ಬಿರುಕು ಬಿಟ್ಟ ತಡೆಗೋಡೆ ಕುಸಿತಗೊಂಡರೆ ಮಂಗಳೂರು ರಸ್ತೆಯೇ ಇಲ್ಲದಾಗುವುದರಲ್ಲಿ ಸಂಶಯವಿಲ್ಲ. ಪರ್ಯಾಯವಾಗಿ ಏನೂ ಮಾಡಲಾಗದಂತಹ ಪರಿಸ್ಥಿತಿ ಕೂಡ ಇದೆ. ಅದಲ್ಲದೆ ಕೆಳಭಾಗದಲ್ಲಿ ನೆಲೆಸಿರುವ ಕುಟುಂಬಕ್ಕೂ ಅಪಾಯ, ಇತ್ತ, ಮೇಲ್ಭಾಗದಲ್ಲಿರುವ ರಾಜಾಸೀಟ್ ಉದ್ಯಾನವನದ ಪ್ರದೇಶಕ್ಕೂ ಅಪಾಯ ತಪ್ಪಿದ್ದಲ್ಲ..! -ಸಂತೋಷ್