ವೀರಾಜಪೇಟೆ, ಜು. ೩೦: ಇಲ್ಲಿನ ಜೈ ಭಾರತ್ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಶಿವದಾಸ್, ಪ್ರಧಾನ ಕಾರ್ಯದರ್ಶಿ ಬಡುವಮಂಡ ಕೆ. ಜೀವನ್ ಆಯ್ಕೆಗೊಂಡರು.

ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀಕಚಂಡ ಪುಟ್ಟು ಬೆಳ್ಯಪ್ಪ, ಆಟೋ ಚಾಲಕ ಮತ್ತು ಮಾಲೀಕರ ಹಿತಕ್ಕಾಗಿ ಸಂಘ ಶ್ರಮಿಸುವುದರೊಂದಿಗೆ ಜನಪರ ಕೆಲಸ ಮಾಡುತ್ತಿದೆ. ಈರ್ವರು ಮಹಿಳಾ ಚಾಲಕರು ಸೇರಿ ಸಂಘದಲ್ಲಿ ೮೧ ಸದಸ್ಯರಿದ್ದು, ನೂತನ ೧೦ ಸದಸ್ಯರು ಸೇರ್ಪಡೆಗೊಂಡಿದ್ದಾರೆ ಎಂದರು. ನೂತನ ಅಧ್ಯಕ್ಷರಾಗಿ ಶಿವದಾಸ್, ಉಪಾಧ್ಯಕ್ಷರಾಗಿ ಹ್ಯಾರಿಸ್, ಜಗದೀಶ್, ಪ್ರಧಾನ ಕಾರ್ಯದರ್ಶಿ ಬಡುವಮಂಡ ಕೆ. ಜೀವನ್, ಸಹ ಕಾರ್ಯದರ್ಶಿ ಕೋಮಲಪ್ರಿಯ, ಸಂಘಟನಾ ಕಾರ್ಯದರ್ಶಿ, ಜಗತ್ ಕುಮಾರ್, ಕೋಶಾಧಿಕಾರಿ ಬೀಕಚಂಡ ಪುಟ್ಟು ಬೆಳ್ಯಪ್ಪ, ಸಂಘದ ಗೌರವ ಅಧ್ಯಕ್ಷರಾಗಿ ತೋರೆರ ಪ್ರಭುಕುಟ್ಟಪ್ಪ ಹಾಗೂ ಎ. ವಿನೂಪ್, ಕಾನೂನು ಸಲಹೆ ಗಾರರಾಗಿ ಬಿ. ಎಸ್. ಪುಷ್ಪರಾಜ್, ಗೌರವ ಸಲಹೆಗಾರರಾಗಿ ಪ್ರವೀಣ್ ಶೇಟ್, ನಿರ್ದೇಶಕರಾಗಿ ಜನಾರ್ಧನ್, ಶುಭಕರ್, ಜಿನ್ನಪ್ಪ, ಅಶೋಕ್, ಯಶ್ವಿನಿ, ಜೇಕಬ್ ನರೋನ್ಹಾ ರೇಗನ್, ಪ್ರಶಾಂತ್ ಮತ್ತು ಅರ್ಜುನ್ ತಿಮ್ಮಯ್ಯ ಆಯ್ಕೆಗೊಂಡರು.